ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಸತ್ಯಧ್ಯಾನತೀರ್ಥರು ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ ಪ್ರೇಷ್ಠತಮ ನೀ ನೊಲಿದ ಬಗೆಯೇನೋ ರಾಮಾ ಪ ಪಟ್ಟ ಪುತ್ರನ ಶ್ರೇಷ್ಠ ಪೀಠದಲಿ ಕುಳಿತಿಂದು ಮುಟ್ಟಿ ಪೂಜಿಪ ಭಾಗ್ಯಗಿಟ್ಟಹುದೆ ಏನೆಂಬೆ ಅ.ಪ. ಚಿಕ್ಕತನದಲೆ ನೂಕಿ ವಿಷಯ ವಿದ್ಯೆಗಳನ್ನು ಚೊಕ್ಕ ಶಾಸ್ತ್ರಗಳಲ್ಲಿ ಇಕ್ಕಿ ದಾಸರ ಮನವಲಿದ್ಯೋ ಕಕ್ಕಸವುಭವವೆಂದು ವೈರಾಗ್ಯ ಧರಿಸುತಲಿ ಭಕ್ತಿ ಮಾಳ್ಪುದ ನೋಡಿ ಮುಕ್ತರಾಶ್ರಯ ವಲಿದ್ಯೋ 1 ದಾನಶೂರರು ಬಹು ನಿದಾನ ವಂತರು ಹಾಗೆ ಮಾನ ಸಾಗರರೆಂದು ಜ್ಞಾನಿ ಪ್ರಾಪ್ತನೆ ವಲಿದ್ಯೋ ದೀನ ಜನ ಮಂದಾರ ಮಾನ್ಯ ಮುನಿಕುಲ ತಿಲಕ ಶೂನ್ಯವಾದಧ್ವಾಂತ ಭಾನು ವೆಂದೊಲಿದ್ಯೋ 2 ಮೋದವಿತ್ತರು ಸತ್ಯಧ್ಯಾನ ತೀರ್ಥರು ಹಿಂದೆ ಸಾಧಿಸುತ ಸುಖಮತದ ಜಯ ಭೇರಿ ಜಗದೀ ಸಾಧು ಜನರ ಜ್ಞಾನ ಖೇದವಳಿಯುತ ಪ್ರಮೋದ ವೀಯುವರೀಗೆ ಸಿದ್ದವೆಂದೊಲಿದ್ಯೋ 3 ಹಿಂದಿ ನ್ಹಿರಿಯರ ವಲವೊ ಮಂದಿ ಪುಣ್ಯವೊ ಮತ್ತೆ ತಂದೆ ಕರುಣವೊ ಕಾಣೆ ಬಂದುದೀ ಪೀಠದಲಿ ವಿಧಿ ವಿನುತ ರಾಮ ನಿನ್ನೊಲಸಿಹ ಪ್ರ ಮೋದ ತೀರ್ಥರುಸತ್ಯ ಪಾಮರರಿಗಾಗುವುದೆ ಸ್ತುತಿಸೆ 4 ಸಾಧು ಸಜ್ಜನ ಪ್ರಾಪ್ಯ ಬಾದರಾಯಣ ಶರಣು ಮೋದ ಮಯ ನಿರ್ದೋಷ ವೇದ ವೇದ್ಯನೆ ಶರಣು ಮಾಧವ ಶ್ರೀ ಕೃಷ್ಣ ವಿಠಲರಾಯನೆ ಶರಣು ಗಾಧವರ್ಜಿತ ಮಹಿಮ ಶ್ರೀ ರಾಮ ಶರಣು ಶರಣು 5
--------------
ಕೃಷ್ಣವಿಠಲದಾಸರು