ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ಜಗದ ಪ್ರಾಣ ಸಂಕರುಷಣ ಭವನೇ ಭಯಾರಣ್ಯದಹನ ಪ ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ ಅ.ಪ. ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಪಾಮರ ಮತಿಯನು ನೀ ಮಾಣಿಪುದು 1 ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ- ಮೂರ್ಜನದಲಿ ಭವವರ್ಜಿತನೆನಿಸೊ 2 ಪ್ರಾಣ ಅಪಾನ ಉದಾನ-ವ್ಯಾನ ಸಮಾನ ಆನಂದ ಭಾರತೀರಮಣ ನೀನೆ ಯಾಮ ಯಾಮಕೆ ಜ್ಞಾನ ಧನಪಾಲಿಪ ವರೇಣ್ಯ ನಾನು ನಿರುತದಲಿ ಏನೇನನೆಸಗಿದೆ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ 3
--------------
ವಿಜಯದಾಸ
ರುದ್ರ ದೇವರು ಕಂಟಕವ ಪರಿಹರಿಸೊ ಶ್ರೀ ಕಂಠಮೂರುತಿಯೇ ಪ ಬಂಟನೆಂದೆನಿಸೆನ್ನ ವೈಕುಂಠಮೂರುತಿಗೇ ಅ.ಪ ತಂಟೆಸಂಸಾರದ ಲಂಪಟದಲೆನ್ನ ಮನ ಮರ್ಕಟದÀ ತೆರದಿ ಪರ್ಯಟನ ಮಾಡೆ ಅಂಟಿಕೊಂಡಿಹ ಈ ಭವಾಟವಿಯ ದಾಂಟಿಸುವೆ ನೆಂಟ ನೀನಹುದಯ್ಯ ಶಿತಿಕಂಠದೇವಾ 1 ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲ ಧೂರ್ಜಟಯೆ ನೀನೆ ಭವವರ್ಜಿತನ ಮಾಡೋ ದುರ್ಜಯವು ಎನ್ನ ಮನ ಆರ್ಜಿಸದೆ ಹರಿಭಕುತಿ ಪತಿ ಜನಾರ್ದನನೊಳ್ ಮನ ನಿಲ್ಲಿಸೋ2 ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದ ಅಂಬುರುಹ ತೋರಯ್ಯ ಶಂಭೋ ಮಹಾದೇವಾ ಕುಂಭಿಣಿಯೊಳು ಒಂದೆ ಇಂಬುತೋರದು ಎನಗೆ ವೈರಿ ಭವಭಯ ಹಾರೀ 3 ವಾಮದೇವನೆ ಕಾಯೊ ತಾಮಸಮತಿ ಹರಿಸಿ ಶ್ರೀ ಮನೋಹರನಲ್ಲಿ ಸನ್ಮನವ ನೀಡೋ ಸೋಮಶೇಖರ ಸುರಸ್ತೋಮದಲಿ ನಿನ್ನಂಥ ಪ್ರೇಮಿಗಳ ನಾ ಕಾಣೆ ಉಮೆಯರಸ ಸಲಹಯ್ಯ 4 ಶಿಕ್ಷಕನು ನೀ ಜ್ಞಾನಚಕ್ಷುವ ನೀಡು ವಿರೂ ಪಾಕ್ಷಮೂರುತಿ ಶ್ರೀ ವೇಂಕಟೇಶನ ಭಕ್ತ ಈ ಕ್ಷಿತಿಯೊಳ್ ಉರಗಾದ್ರಿವಾಸವಿಠಲನ ಪ್ರ ತ್ಯಕ್ಷದಲಿ ನೋಳ್ಪ ಶ್ರೀ ತ್ರ್ಯಕ್ಷಮೂರುತಿಯೇ 5
--------------
ಉರಗಾದ್ರಿವಾಸವಿಠಲದಾಸರು