ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಆತ್ಮನಿವೇದನ ಭಕುತಿ ತನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮಗೆ ಪ.ಸರ್ವಕರ್ಮಕರ್ತ ಸರ್ವಕಾಲವರ್ತಸರ್ವಕಾರ್ಯಕೆಹರಿಸ್ವತಂತ್ರನುಸರ್ವಾರ್ಥದಲಿ ಪೂರ್ಣಸರ್ವೇಂದ್ರಿಯ ನಿಯಂತ್ರಸರ್ವದೇಶ ಕಾಲವ್ಯಾಪ್ತ ಗೋಪ್ತನೆಂದು 1ಕಾಸು ಕೋಶಗೇಹದೇಹೇಂದ್ರಿಯ ಪ್ರಾಣಸ್ತ್ರೀ ಸುತ ಪ್ರಿಯ ದಾಸಿ ದಾಸರನುಈಶಗರ್ಪಣೆ ಮಾಡಿ ದಾಸದಾಸನಾಗಿಲೇಶವು ತನಗೆನ್ನದೆ ಸರ್ವಾರ್ಪಿಸುವುದು 2ಜನ್ಮ ಜನ್ಮಾಂತರ ಧರ್ಮ ಕರ್ಮಂಗಳುನಿರ್ಮಲ ಜ್ಞಾನ ವೈರಾಗ್ಯ ಭಕ್ತಿಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆರಮೆಯ ರಮಣಗರ್ಪಣವೆಂಬ ನಿಷ್ಠೆಯ 3ಅಹರ್ನಿಶಿಶ್ವಾಸೋಚ್ಚ್ವಾಸಾವಸ್ಥಾತ್ರಯಬಹು ಜಪತಪ ಅರ್ಚನೆಸಂಭ್ರಮಬಹುಭಿ:ಶ್ರವಣ ಬಹುಧಾಶ್ರವಣ ಮನನಶ್ರೀಹರಿ ಧ್ಯಾನ ಧ್ಯಾಸಾತ್ಮಾಥರ್Àದಿ 4ಅಲಂಬುದ್ಧಿಯನು ಬಿಟ್ಟು ಅಲಸಮತಿಯನು ಸುಟ್ಟುಅಲಸಲಕ್ಷಣ ವಿಸ್ಮøತಿಯನುನೀಗಿಅಲವಬೋಧಾಚಾರ್ಯ ಮತದವರನು ಪೊಂದಿಲಲಿತ ಪ್ರಸನ್ವೆÉಂಕಟ ಚತುರಾತ್ಮಗೆ 5
--------------
ಪ್ರಸನ್ನವೆಂಕಟದಾಸರು
ಸೊಡ್ಡುಡಂಬಕಅವನಿಭಾರಂಗೆ ಸೊಡ್ಡುಸೊಡ್ಡು ಭಕುತಿಹೀನ ಹೆಡ್ಡಂಗೆ ಸೊಡ್ಡು ಪ.ಶುದ್ಧ ಸಾತ್ವಿಕಗುರುಮಧ್ವಮತವ ಬಿಟ್ಟುಬದ್ದಡ್ಡ ದಾರಿಯವಿಡಿದಗೆ ಸೊಡ್ಡುಮದ್ಯಘಟಕೆ ಮನವಿಟ್ಟು ಪೀಯೂಷವನೊದ್ದು ಕಳೆದ ಹೊಲೆ ಮಾನಿಸಗೆ ಸೊಡ್ಡು 1ಜಗದೆರೆಯನ ಜಗದಾಕಾರ ಸಟೆಯೆಂದುಬಗುಳ್ವ ಬಾಯೊಳು ಹೊಡೆ ಮಗುಳೆ ಸೊಡ್ಡುಅಘಹರನಾಳಿಗಾಳಾಗಿ ದೊರೆಯೆ ತಾನೆಂಬಗೆ ನಗೆಗೇಡಿನಾ ಮಾತೆ ಸೊಡ್ಡು 2ಶ್ರುತಿಸ್ಮøತಿಗಳವಡದನಂತಗುಣಗೆ ದುರ್ಮತಿಯಲ್ಲಿ ನಿರ್ಗುಣೆಂದವಗೆ ಸೊಡ್ಡುರತಿಪತಿಪಿತನಲ್ಲದನ್ಯ ಸರ್ವೋತ್ತಮತ್ವಕೆ ನಿರಯದಂಧತಮದ ಸೊಡ್ಡು 3ಹರಿಗೆ ಮನುಭವವಿಧಿಯೆಂದೊಕ್ಕಣಿಪಗೆಚಿರಕ್ಲೇಶ ಭವಯಾತ್ರೆಲಂಜು ಸೊಡ್ಡುಒರೆದೊರೆದಖಿಳಾಗಮಾರ್ಥವ ತಿಳಿದೇನುಹರಿಯೊಪ್ಪದಾ ನರಖರನಿಗೆ ಸೊಡ್ಡು 4ಪರಮಭಾಗವತರಾಚರಣೆಗೆ ಅಸೂಯಕ್ಕವರಗ್ರಂಥಚೋರಗೆ ಶಿರದಿ ಸೊಡ್ಡುಸಿರಿಪತಿ ಪ್ರಸನ್ವೆಂಕಟೇಶನ ಭಟರ ಕಂಡ್ಹರುಷಲ್ಲದವಗೆ ಮೂಗಲಿ ಸುಣ್ಣ ಸೊಡ್ಡು 5
--------------
ಪ್ರಸನ್ನವೆಂಕಟದಾಸರು
ಹರಿಯೆನ್ನಬಾರದೆಜಿಹ್ವೆವಾರಂವಾರಪ.ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
--------------
ಪ್ರಸನ್ನವೆಂಕಟದಾಸರು