ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿ ಕವಿದು ಪೊಳೆವ ಭುವನಪಾವನ ಚರಿತ ಇಂದೀವರಾಕ್ಷ ಪ ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ ಮೋದ ಕರಿವರದ ಭವಭಂಗ ಪರಿಹಾರ ಕವನ ವೋದಿದ ಮಾತ್ರ ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1 ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು ಲವಲವಿಕೆ ಎಮ್ಮ ಚೇತನಕೆ ಕೊಟ್ಟು ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2 ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು ಶುಕ ಪಿತ ಸವಿದ ರುಚಿಯು ಇಹುದು ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ | ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3 ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ ಭವಮೂಲಕುನ್ಮೂಲ ಇದರ ಮಹಿವi ಅವಲಿಯನು ತಿಂದವನು ಅಗಲಿರದೆ ಒಡನಿಹನು ಜವನ ದೂತರು ತಲೆಮಣಿದು ಓಡುವರೊ 4 ತತ್ವಾಭಿಮಾನಿಗಳಿಗಾಹಾರವಿದು ಸತ್ಯ ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5
--------------
ಜಯೇಶವಿಠಲ
ಕ್ಷೀರಾಬ್ಧಿಜಾರಮಣ ಕ್ಷೀರಾಂಬುನಿಧಿಶಯನ ಸದನ ಗರುಡಗಮನ ಕಾಕುತ್ಸ್ಥವಂಶಾಬ್ಧಿ ರಾಕೇಂದು ಗುಣನಿಧೀ ಪಾಕಾರಿಮುಖದೇವ ನಿಕರಜೀವ ನಿಟಿಲಾಕ್ಷನುತನಾಮ ಜಟಾವಲ್ಕಲಧಾಮ ತಾಟಕಾಂತಕರಾಮ ಸಮರಭೀಮ ಇಂದುಸನ್ನಿಭವದನ ಕುಂದಕುಟ್ಮಲರದನ ಇಂದೀವರ ಸುನಯನ ಕನಕವಸನ ಕವಿಜನಮನೋಲ್ಲಾಸ ಶಶಿಸುಹಾಸ ಸೇವ್ಯ ದೇವದೇವ ಭವಭೀತಿಹರ ಶೇಷಶೈಲನಿಲಯ ಸುವಿಮಲಯಶಶ್ಚಂದ್ರ ರಾಘವೇಂದ್ರ
--------------
ನಂಜನಗೂಡು ತಿರುಮಲಾಂಬಾ
ದಾಸನಾದವನಿಗೆ ಭವಭೀತಿಯುಂಟೆ ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ ತನುಮೋಹ ಬಿಟ್ಟವಗೆ ಮರಣದ ಭಯವೆ 1 ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ ಸಂದೇಹವಳಿದವಗೆ ಕರ್ಮಗಳ ಭಯವೆ ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ ಸಿಂಧುಶಯನನರ್ಚಕಗೆ ಕಾಲನ ಭಯವೆ 2 ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ ಪರವ ಸಾಧಿಪನಿಗೆ ಕಷ್ಟಗಳ ಭಯವೆ ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ ಶರಣರೊಳಾಡುವಗೆ ನರಕಂದಜಿಕೆಯೆ 3 ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4 ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5
--------------
ರಾಮದಾಸರು
ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ಭೂಷಣ ಮಾಡಲು ಹಿಗ್ಗೇನೋ ಜನ ದೂಷಣಮಾಡಲು ದು:ಖೇನೋ ಪ ದೋಷನಾಶ ಜಗದೀಶ ಕೇಶ ತನ್ನ ದಾಸರಭಿಮಾನ್ಯೆಂದು ಶಾಶ್ವತರಿತವರಿಗೆ ಅ.ಪ ವಂದನೆಮಾಡಿ ಕೊಡುತಿಹ್ಯರೇನೋ ಮತ್ತು ನಿಂದೆಯನಾಡಿ ಕಸುಕೊಳ್ಳುವರೇನೋ ನಿಂದೆವಂದನಗಳೊಂದೇಯೆಂದು ಆ ನಂದನಕಂದನ್ನಾನಂದದಿ ಭಜಿಪರ್ಗೆ 1 ಸತಿಸುತರೊಲಿದರೆ ಬಂತೇನೋ ಮತ್ತು ಹಿತದಪ್ಪಿ ನಡೆದರೆ ಹೋಯ್ತೇನೋ ಗತಿಪ ಕ್ಷತಿಯ ಹಿತಾಹಿತಸ್ಥಿತಿ ಸಮವೆಂದು ಪತಿತಪಾವನ ಸತತದಿ ನುತಿಪರ್ಗೆ 2 ನೀತಿವಂತನೆನೆ ಬಂದ ಭಾಗ್ಯೇನೋ ಜಗ ಪಾತಕನೆನೆ ಬಂದ ಕುಂದೇನೋ ಪಾತಕಹರ ಭವಭೀತಿವಿನಾಶ ಜಗ ನ್ನಾಥ ಶ್ರೀರಾಮನ ಪ್ರೀತಿ ಪಡೆದವರಿಗೆ 3
--------------
ರಾಮದಾಸರು
ಶೈಲ ರಾಜಕುಮಾರಿ ಶಂಕರಿ ಪ ಫಾಲಲೋಚನನರಸಿ ಭವಭೀತಿ ಬಿಡಿಸಿ ನಿ- ನ್ನೋಲಗ ಸಂತತವೀವುದು ಅ.ಪ ಕರುಣದಿ ನಿರುತವು ಪಾಲಿಸೆ 1 ನೀರಜ ರುಜುವಾಗಿ ನಿಲುವಂತೆಮಾಳ್ಪುದು 2 ಗುರುರಾಮ ವಿಠಲ ಸೋದರಿ ನಿನ್ನ ತುರುಬಿನ ಪರಿಮಳ ಕುಸುಮವನೀಡುತ ಕಾಯ್ವುದು 3
--------------
ಗುರುರಾಮವಿಠಲ
ಶ್ರೀಮತೇ ಶ್ರೀರಾಮಸೋದರಾ ಶ್ರಿತಜನಮಂದಾರ ಪಪಾಮರಪಾಪೌಘ ಪತಿತಬದ್ಧಜೀವೋದ್ಧಾರ ಶುಭಕರನಾಮನಿತ್ಯವಿಭೂತಿದಾಯಕಪ್ರೇಮನಿಧಿ ಭವಭೀತಿ ಪರಿಹರ 1ದಿವ್ಯ ಕಾಷಾಯಾಂಬರಾನ್ವಿತದೇವರಾಜ ಸುವಾಕ್ಯ ಮಾತುಸವ್ಯಸಾಚಿ ಸೂತ ನಿರ್ಮಿತಶಾಸ್ತ್ರಭಾಷ್ಯ ಪ್ರೋಕ್ತ ಯತಿವರ 2ದಂಡಿತಾಖಿಲ ಖಂಡಿತಾಪರಿಮಂಡಲ ತ್ರಿದಂಡ ಕರಗಳಮಂಡಿತಾ ವನಮಾಲ ತುಲಸೀಮೂಲದಾಸಯುತ ಶ್ರೀ ಭಾಷ್ಯಕಾರ 3
--------------
ತುಳಸೀರಾಮದಾಸರು