ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಸುವೆ ನಿನ್ನ ಶ್ರೀಗುರುವೆ ಅಮಿತಾನಂದಾತ್ಮಸ್ವರೂಪನೇ ಶಮನ ಮಾತು ಈ ಭವಭಾಧೆಯ ನೀ ಚಿನುಮಯ ಮೂರುತಿಯೇ ಪ ಬೆಂದೆನು ಸುಖದುಃಖಗಳಲಿ ನಾ ಬಹು ನೊಂದೆನು ಜನಿಮೃತಿ ಹೊಂದುತಾ ಎಂದಿಗೆ ಪರಮಾನಂದವ ಪಡೆವೇ ಬಂದೆನು ಶರಣಾಗಿ 1 ಭೋಗದಿ ಸುಖಿಸುವೆನೆಂಬುವಾ ಅನು ರಾಗದಿ ವಿಷಯಗಳಲಿ ಸಿಲುಕಿ ಭೋಗಿಸಿದಂತೆಯೆ ವಾಸನಾ ಬಲ ವಾಗಂತ ಬಂದಿತು ಮನದಲ್ಲಿ 2 ಭವ ರೋಗದಿ ಬಳಲುವೆನೀಗಲೇ ತ್ಯಾಗದಿ ನಿಜಸುಖ ದೊರಕುವ ರೀತಿಯ ತಿಳುಹಿಸು ಗುರುವರನೆ 3 ವಿಶ್ವದ ತೊಡಕನು ಹಾಕಿಕೊಂತು ಈಶ್ವರನನ್ನೇ ಮರೆತಿರುವೆ ನಶ್ವರವಾಗಿಹ ಈ ಜಗವನು ಶಾಶ್ವತವೆಂದೇ ತಿಳಿದಿರುವೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಾ ಪೊಗಳೆಲು ನಿನ್ನಾಗಾನಾ ಪರಿಪೂರ್ಣಾ ಸತ್ಯಜ್ಞಾನಾ ಗುರುಮೂರ್ತಿ ಎನಗೆ ದಾನಾ ನೀಡಿದೆ ನೀ ದಿವ್ಯಜ್ಞಾನಾ ಅವಿಚಾರದಿಂದ ತೊಳಲಿ ಭವಭಾಧೆಯಿಂದ ಬಳಲಿ ಕಿವಿಗೊಡದೆ ನಿನ್ನನುಡಿಗೆ ಭುವನದಲಿ ದುಃಖಿಯಾದೆ ಶಿವ ನೀನೆ ಎಂದು ಪೇಳಿ ಸವನಿಸಿದೆ ಮೋಕ್ಷಪದವಾ ಏನೆಂದು ಪಾಡಲಯ್ಯಾ ನಾನೆಂಬ ಭಾವವಡÀಗಿ ನೀ ನಾನೆ ಎಂಬ ತಿಳಿವು ಘನವಾಗಿನೆಲಿಸಿತೀಗ ಏನೊಂದು ತೋರದಯ್ಯಾ ನಾನಾತ್ವವೆಂಬ ಭಾವ ಈ ಸೋಹವೆಂಬ ಪದವ ಲೇಸಾಗಿ ಬೋಧಿಸಿದ ನೀ ಆಶಾನಿವಾಸೆ ನೀಗಿ ನಾ ಶಾಂತನಾದೆ ಮನದಿ ನೀ ಸಚ್ಚಿದಾತ್ಮಗುರುವೇ ಶಂಕರನೆ ಕಲ್ಪತರುವೆ
--------------
ಶಂಕರಭಟ್ಟ ಅಗ್ನಿಹೋತ್ರಿ
ಮನುಜಶರೀರವು ವರವೊ ದುರ್ಲಭವೊ ಪ ಭವಸಾಗರವನು ದಾಂಟಲು ನೌಕೆಯಿದೊ ಭವಭಾಧೆಯ ನೀಗಲು ಇದು ಸಾಧನವೊ ಪಾವನಸ್ವರೂಪಜ್ಞಾನವನರಿಯಲು ದೇವನೆ ತಾನೆನಿಸುವನೊ ಆ ನರನು 1 ತಿಳಿ ನೀನೀಗಲೆ ನಾನಾರೆಂಬುದ ಮನುಜಾ ಅಳಿವೀ ದೇಹದೊಳೇ ತಿಳಿಯಲುಬಹುದಿದನಾ ಉಳಿದ ದೇಹಗಳು ಹಲವಾರಿರುತಿರೆ ಫಲವೇನೈ ತಿಳಿವಿರದೇ ತಿಳಿ ಭರದೇ 2 ಪಾಪಿ ಜನ್ಮವು ಎಂದು ಶಪಿಸಲು ಬೇಡಾ ತಾಪನೀಗಲು ಇದೇ ದಾರಿಯೈ ನೋಡಾ ಭವ ಕಡಿಯೇ 3
--------------
ಶಂಕರಭಟ್ಟ ಅಗ್ನಿಹೋತ್ರಿ