ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ತುಳಸಮ್ಮ ಎನಗೊಲಿಯಮ್ಮ ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ ನಿಲಯನಿಲಯದಲಿ ನಿಂದು ಭಕ್ತ ಕುಲವನುದ್ಧರಿಸಿದಿ ಇಂದುಮುಖಿ ಮಲಿನಹರಣೆ ದಯಸಿಂಧು ಅಹ ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ ಕಳವಳಪಡಿಸದೆ ಸಲಹು ಬೇಗೆನ್ನಮ್ಮ 1 ಭಯದೂರೆ ಜಯಕಾರೆ ಜಗಕೆ ಲೋಕ ತ್ರಯದ ಜನನಿ ಎನ್ನ ಮನಕೆ ಬೇಗ ಜಯವ ನೀಡಿ ಮಾಡು ಜೋಕೆ ಅಹ ರಮೆ ದಯಯುತೆ ನಿನ್ನ ದಯದಿ ಬೇಡುವೆನವ್ವ ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ 2 ಜಲಜನಾಭನ ಮೋಹಮಾಲೆ ನೀನು ಬಲು ದಯಾನ್ವಿತಭಕ್ತ ಶೀಲೆ ಎನ್ನ ಗಳವೆ ಪೊಗಳಲು ನಿನ್ನ ಲೀಲೆ ಆಹ ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ 3
--------------
ರಾಮದಾಸರು
ನೀಚಮತಿ ಎಲೆ ನೀಚಮತಿ ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ ಧರೆಯ ಭೋಗವ ನೆಚ್ಚಿ ಶರಣರ್ವೇಷÀವÀ ತಾಳಿ ಮರವೆ ಮಾಯದಿ ಬಿದ್ದು ಒರಲುವ ನರರಿಗೆ ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ 1 ಮಾಯಮೋಹಿಗಳ ಉಪಾಯದಿ ಕೂಡಿಸಿ ಸೇವಿಸದಾಹಾರ ಸೇವಿಸುತನುದಿನ ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ 2 ಧರಿಸಿದ ಲಾಂಛನ ಅರಿಯದೆ ಮೇಲೆ ನೀ ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು ಜರೆಮರಣದು:ಖವು ಪರಹಾರಮೆಂತೆಲೆ 3 ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ ಭವಗೆಲಿಸುವ ಅನುಭವ ತಿಳಿಯದೆ ಸ ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ 4 ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ ಧನ್ಯರಾಗದೆ ನರಕುನ್ನಿಯೆನಿಸುವರೇನೋ5
--------------
ರಾಮದಾಸರು
ಭವಭಯಹರ ಸಿರಿಧವ ನರಹರಿ ಪೊರೆ ಭವಭವದಲಿ ನೀಡು ತವಪಾದ ಸೇವೆಯ ಪ ಮನುಮುನಿ ಘನಸುರ ವಿನಮಿತ ಸುಜನರ ಅನುಪಮ ಪ್ರಿಯಕರ ಜನಕಜೆ ಮನೋಹರ 1 ದುರಿತವಿನಾಶ ಪರಮಪ್ರಕಾಶ ಗಿರಿಧರ ಪರಾತ್ಪರ ಪರತರ ಲಕಮೀಶ 2 ಅಸುರಕುಲಾಂತಕ ವಸುಧೆಯುದ್ಧಾರಕ ಅಸಮ ಶ್ರೀರಾಮ ಮಹ ಮುಕ್ತಿಪ್ರದಾಯಕ 3
--------------
ರಾಮದಾಸರು
ಹ್ಯಾಗಾಗುವುದೊ ತಿಳಿಯದು ಈಶನಜ್ಞೆ ಪ ಭಾಗವರತ ಸೇವೆಯಲ್ಲಿ ಬಹು ಪ್ರವೀಣವೆನೆಪುದೊ ರಾಗಲೋಭದಲ್ಲಿ ಮುಳುಗಿಸಿ ರಚ್ಚೆಗಿಕ್ಕಿ ಬಿಡುವುದೊ ಅ.ಪ ಕೋರಿಕೆಗಳ ಬಿಡಿಸಿ ಸದಾ ಗುಣವಂತನೆನಿಸುವುದೊ ನಾರಿ ಮಕ್ಕಳಾಸೆಯಲಿಯನಾಥವ ಮಾಡಿಸುವುದೊ 1 ದ್ವಂದ್ವಗಳಲಿಲೇಪವಿಲ್ಲದಾನಂದವ ಪೊಂದಿಸುವುದೊ ಮಂದಮತಿಯನಿಸುವುದೊ 2 ಶ್ರವಣಮನನ ಸಾಧನೆಗಳ ಸದಾ ಮಾಡಿಸುವುದೊ ಭವಭವದಲಿ ಮೂಢನೆನಿಸಿ ಪಾಪರತನ ಮಾಳ್ವದೊ 3 ಸರ್ವರಲ್ಲಿ ಗುಣವೆ ಕಾಣಿಸಿ ಸಂತೋಷಪಡಿಸುವುದೊ ದುರ್ವಿನೀತನೆನಸಿ ಸದಾ ದುಷ್ಕಾರ್ಯ ಮಾಡಿಸುವುದೊ 4 ಪಂಚಭೇದ ಜ್ಞಾನ ತತ್ವ ತಿಳಿಸಿ ಸುಖಿಪುದೊ ದುರಹಂಕಾರರಲ್ಲಿ ಮೆರೆಸಿ ನರಕದಿ ಬೀಳಿಸುವುದೊ 5 ದಾನಧರ್ಮ ಪರೋಪಕಾರ ದಯಾವಂತನೆನಿಪುದೊ ಹೀನನೆನಸಿ ಸಕಲರಿಂದ ಹೀಯ್ಯಾಳಿಸಿಬಿಡುವುದೊ 6 ಭಾರ ಅವರವರಧಿಕಾರದಂತೆ ಎಲ್ಲರಿಗೂ ನಡಿಸುವಾ 7
--------------
ಗುರುರಾಮವಿಠಲ
ವೃಂದಾವನ ದೇವಿ ನಮೋ ನಮೋಗುಣ|ವೃಂದೆ ಸುಂದರಿ ಲೋಕಮಾತೆ ನಮೋ ನಮೋ ||ಬಂದು ಸೇವಿಸಿ ನಿನಗುದಕವ ನೆರೆಯಲುಇಂದುನಾವು ಮಾಡಿದ ಪಾಪ ಹೋಗುವುದೂಪಚಂದದಿಂದಲಿ ನಮ್ಮ ಕುಲದವರಿಗೆಲ್ಲಸುಂದರ ವೈಕುಂಠ ಪದವೀವಳೇ1ಹನ್ನೆರಡು ಪ್ರದಕ್ಷಿಣೆ ಬಂದು ವಂದನೆ ಮಾಡಿಚೆನ್ನಾಗಿ ಸ್ಮರಿಸೆ ಕಂಡು ಪರಸುವಳೆ |ಘನತರ ಭಕ್ತಿಯೊಳ್ ಬಂದು ಕೈ ಮುಗಿದವರನ್ನುಪನ್ನಂಗಶಯನ ಸ್ವಾಮಿ ಕರೆದೊಯ್ಯುವನೂ2ಭವಭವದಲಿಗೈದ ದೋಷನಿವಾರಿಸಿಭವಭಂಗಬಿಡಿಸೆನಗೊಲಿದು ತಾಯೆ |ದಯದಿ ಗೋವಿಂದನ ದಾಸನೆನಿಸೆಂದೆಂನ್ನ |ಭುವನಮೂರರೊಳ್ ಖ್ಯಾತಿ ಪಡೆದವಳೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ