ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಪತಿ ಶೇಷಾದ್ರಿವಾಸ ಶ್ರೀನಿವಾಸ ಪ ಶೇಷಾದ್ರಿವಾಸ ವಾಸುಕಿಶಯನನೆ ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ ಭಾಭರಣನೇ ಕರುಣಾಸಾಗರನೆ 1 ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ ಯಾದವರಕ್ಷ ಯದುಕುಲಪಕ್ಷನೆ ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2 ಭವಭಯಭಂಗ ಶ್ರೀನಿವಾಸ ಕರುಣಾಪಾಂಗ ಗರುಡತುರಂಗನೆ ನೀಲಮೇಘಾಂಗನೆ ಸುಗ್ರೀವಸಂಗನೆ ವಾಲಿ ವಿಭಂಗನೆ 3 ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ ಭಕ್ತರ ಪೊರೆಯುತ ನಿಂದ ಗೋವಿಂದ 4 ಗರುಡವಾಹನನೆ ಶ್ರೀನಿವಾಸ ಪರಮಪಾವನನೆ ಪಂಕಜನಯನನೆ ಪದ್ಮಿನೀ ಅರಸನೆ ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
--------------
ಯದುಗಿರಿಯಮ್ಮ
ಬಂದೆನೊ ರಂಗ ಬಂದೆನೊ ಹಿಂದಿನ ಸುಕೃತದಿ ತಂದೆ ನಿನ್ನ್ಹುಡುಕುತ ಪ ಹಲವು ಜನುಮಜನುಮಗಳಲಿ ತಿರುತಿರುಗಿ ತೊ ಳಲಿತೊಳಲಿ ಬಂದು ಬಳಲಿ ಮರುಗಿ ಹೊಲಸಿನ ಮಲಮೂತ್ರ ಕುಣಿಲಿ ಕೊರಗಿ ಎಲುವೊಂದು ಗಿರಿಯೋಪಾದಿಯಲಿ ಆಹ ಇಳೆಯೊಳು ಬಿದ್ದಿಹ್ಯವು ಬಲು ಬಲು ಹೊಲೆಬವಣೆ ಯಲಿ ನೋಯಲಾರದೆ ಕಳವಳಗೊಳುತ 1 ಜಡÀಸದೃಸ ಶರೀರಗಳ್ಹೊತ್ತು ಬಿಡದೆ ಎಡರು ತೊಡರಿನೊಳಗೆ ಬೆರೆತು ಕೆಡುವ ಪೊಡವಿಸುಖಕೆ ಮನವಿತ್ತು ದೃಢವನ್ಹಿಡಿಯದೆ ಮರೆವಿನಿಂ ಸಂಪತ್ತು ಆಹ ಒಡನೊಡನ್ಹುಟ್ಟ್ಹುಟ್ಟ ಕಡುಕಷ್ಟಬಡುವಂಥ ಸುಡಗಿಯ ತಡಿಯದೆ ಗಡಗಡ ನಡುಗತ್ತ 2 ನೋಡೆಲೊ ಕರುಣಾಂತರಂಗ ದಯವ ಮಾಡೆಲೊ ಸುಗುಣ ಶುಭಾಂಗ ಅಭಯ ನೀಡೆಲೊ ನಿರುತ ನೀಲಾಂಗ ದುರ್ಭವ ಕಡಿಯೆಲೊ ಭವಭಯಭಂಗ ಆಹ ತೊಡರು ಕಡೆಮಾಡಿ ಎನಗೆ ಮುಕ್ತಿ ನೀಡಿ ಸಲಹು ಎಂದು ಬೇಡುತ ಶ್ರೀರಾಮ 3
--------------
ರಾಮದಾಸರು
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಕೀರ್ಣ ಇದೇ ವೀಳ್ಯ ಅಡಕ್ಯೆಂಬುದು ನೋಡಿ ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಧ್ರುವ ಅಡಕೆಂಬದನುಮಾನಪೂಟ ಒಡೆದ ಹೋಳು ಮಾಡಿ ಚೊಕಷ್ಟ ಮಡಿಚಿಮ್ಮನೆಂಬುದು ವೀಳ್ಯ ನೀಟ ತೊಡೆದು ಅಹಂ ಸುಣ್ಣ ಖಾರಟಾ 1 ಗುರುವರ್ಮ ಕಾಚೆಂಬುದು ಪೂರ್ಣ ಸುರಮುನಿ ಜನರ ನಿಧಾನ ತೋರುತಿಹ್ಯದೊಂದೆ ನಿಜ ಖೂನ ಕರಗಿಹೋಯಿತು ಮೂರೊಂದು ವರ್ಣ 2 ವೀಳ್ಯ ಮಾಡಲು ಮರ್ದನ ಕಳದ್ಹೋಯಿತು ಅದರವಗುಣ ಕಳೆ ಹೆಚ್ಚಿತು ರಂಗ ಸಗುಣ ಥಳಿಥಳಿಸುವ ಜ್ಞಾನ ಸುಬಣ್ಣ 3 ನುಂಗಿ ತಾಂಬೂಲ ರಸ ಹಲವಂಗ ಹಿಂಗಿ ಹೋಯಿತು ಭವಭಯಭಂಗ ಕಂಗಳದ್ಯರಿಯತು ಅಂತರಂಗ ರಂಗದೋರಿತ್ಯನ್ನೊಳು ಸತ್ಸಂಗ 4 ವೀಳ್ಯ ಅಡಕಿ ಮಹಿಪತಿಗೆ ನೋಡಿ ತಿಳದವರಿದೆ ನಿಜಪೂರ್ಣ ಮಾಡಿ ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ ಇಳಿಯೊಳಗಿದೆ ಸವಿ ಸುಖಗೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಹರಿ ಸಂಕೀರ್ತನೆ2ಶರಣು ಹೊಕ್ಕೆನೊ ನಿನ್ನ ಜಾತರೂಪಾಂಗದವರದ ಕೈಪಿಡಿಯನ್ನಪರಮೇಷ್ಠಿವಂದಿತ |ಚರಣಸುರ ಶಿರೋರನ್ನ ಸುಖ ಜ್ಞಾನ ಪೂರ್ಣಾಪಉರಗಪರ್ವತನಿಲಯಭಕತರ ಕರೆದು |ವರಗಳ ಕೊಡುವ ವೆಂಕಟ | ಗರುಡವಾಹನಲಕ್ಷ್ಮೀಪತಿ ಮಂದರಧರಾಧರಧಾರ ದೇವ ಅ.ಪ.ಕಾಮಿತಾರ್ಥದ ರಂಗ ಮಧ್ವಮುನಿ ಪೂಜಿತ |ರಾಮ ಭವಭಯಭಂಗದಶರೂಪಿ ಶರಧಿಜಾ |ಪ್ರೇಮ ಸುಜನರ ಸಂಗ ಕೊಡು ಎಂದೆಂದಿಗೂ ||ತಾಮಸರಿಪುಕುರಂಗಾಅಂಕಸಖಸಾಂಗ |ಹೇಮಗರ್ಭನ ನಾಭೀ ಕಮಲದಿ |ನೀ ಮುದದಿ ಪಡೆದೀ ಚರಾಚರ |ನೇಮದಿಂದಲಿ ಸೃಜಿಸ ಪೇಳಿದ |ಸ್ವಾಮಿ ನೀ ಸರ್ವರೊಳು ವ್ಯಾಪಿಸಿ |ಭೂಮಿಯೊಳು ಸಾತ್ವಿಕರು ರಾಜಸ |ತಾಮಸರ ನಿರ್ಮಾಣ ಮಾಡಿ ಸು |ಧಾಮಸಖಿಗತಿ ದುರ್ಗತಿಗಳನು |ಈ ಮರುಳು ಜನರಿಗೀಯುತ |ನೀ ಮಡಿವಂತನು ಎನಿಸುವೆ ಲೇಸುತ್ರಾಮಾ ವರಜ ಬಲು ಸೋಜಿಗವೊ ಇದು |ವ್ಯೋಮನ ದೀಪದ ನೀ ಮಾಡಿದ ಮರ್ಯಾದೆಯೋಮರಳ್ಯೊಬ್ಬರು ಪೇಳುವರುಂಟೇ 1ಪುಂಡರೀಕದಳಾಕ್ಷ ತನ್ಮಾತ್ರಾ ದೂರ |ಪಾಂಡುರಂಗಘ ಕಕ್ಷಗಾಂಗೇಯಗೀತ |ಪಾಂಡುನಂದನ ಪಕ್ಷದರಚಕ್ರಪಾಣಿ |ಪುಂಡ ಕೌರವ ಶಿಕ್ಷ ಶ್ರೀವತ್ಸವಕ್ಷ |ಕುಂಡಲೀಶ ಶಯನ ವಿದುರಸಖ| ಮಾ-ರ್ತಾಂಡ ಕೋಟಿ ಪ್ರಕಾಶಹರಿವು|ದ್ದಂಡ ಮಹಿಮನೆ ಕಂಡ ಕಂಡವ |ರಂಡಲೆಯ ಯನ್ನ ಶರೀರವು ||ಬೆಂಡು ಆಯಿತು ಕಾಣೆ ಕಾಯ್ವರ |ಜಾಂಡೋದರ ನಿನ್ನುಳಿದು ಓರ್ವರ |ದಂಡಿಸದೆ ಬರುತಿಪ್ರ್ಪ ಜನ್ಮವ |ಖಂಡಿಸಿ ನಿನ್ನ ನಾಮವುಳಿಸೊ ||ಮಂಡೋದರೀವಲ್ಲಭಶಕಟ ಪ್ರ |ಚಂಡ ಮುರಾದಿಖಳಕುಲಾಂತಕ |ದಂಡಾತ್ಮಜ ರಕ್ಷಕಹರಿಮೇ |ಷಾಂಡಜ ಸಂಹರ ಕರುಣದಿ ನೋಡೋ2ಧರಣಿಯೊಳಗಿನ ರಾಯರೆಂಬುವರು ವೇಷಕಾ |ಪುರುಷನಿಗೆ ಬಹು ದ್ರವ್ಯವಿತ್ತಿನ್ನು ವೇಷವ |ತರಲಿಗೊಡರೆಲೊ ದೇಹ ಬಹು ತಾಳಿ ಬಂದೆನೊ |ಕರುಣವಿಲ್ಲದೆಜೀಯ| ಸಾಕೆನ್ನೂ ಮಾಯಾ- ||ವರನೆ ಅಟವು ಮಾತ್ರ ಹಣ ಕೊಡ- |ದಿರೊ ನಾ ಬಲ್ಲೆನೊ ಕುಡಿದ ಸ್ತನ - ಪಯ |ಶರಧಿದ್ವಿಗುಣವು ಯನ್ನ ಅಸ್ಥಿಯು |ಗಿರಿಗೆ ದ್ವಿಗುಣವಾಗಿಹ್ಯವೊ ಇಂತಿ |ಕರೆ ಕರೆಯ ನಾನಾರಿಗುಸಿರಲಿ |ಸುರಪತಿಪ್ರಾಣೇಶ ವಿಠ್ಠಲ |ತರುಣಿ ಸುತ ಧನ ಪಶು ಎಂಬುವ ಈ |ಪರಮಮೋಹದ ಮಡುವೋಳ್ಬಿದ್ದು ||ಹರಿನಿನ್ನೊಂದಿನ ಸ್ಮರಿಸಿಲ್ಲವೋ ನೀ |ನರಿಯೆ ನಿಂತ್ಯಲ್ಲವೋ ಪರತರ |ಕರಿವರದಿ ಮ್ಯಾಲೆನರಿದದು ಮಾಡುವ - |ದರಿ ಕರಿಷಂಡ ಮೃಗೇಂದ್ರ ಪರಾಶು || ಶರಣು 3
--------------
ಪ್ರಾಣೇಶದಾಸರು