ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಶಾರದೆ ಪರಮ ಪಾವನೆಯೆ ಪಾಲಿಸು ಎನ್ನನು ಪರಬ್ರಹ್ಮನ ಸತಿಯೆ ಪ ತವಪಾದ ಕೃಪೆಯಿಂದ ಕನ್ನಡ ನುಡಿಯಲಿ ವಿವರಿಸಿ ಪೇಳುವೆ ಭಾಗ್ಯ ಸನ್ನುತಿಯ ತವಕದಿ ಬಲಿದೀಗ ಕೊಡು ಸರಸ್ವತಿಯೆ ರವಿ ಕೋಟಿ ತೇಜ ವಿರಾಜಿತಾತ್ಮಿಕೆಯ 1 ಜಲಕೆ ಕ್ಷೀರವು ಮುಟ್ಟಿದಂತೆನ್ನ ಮನದಿ ಸುಲಲಿತ ವಾಕ್ಯವ ಪಾಲಿಸು ದಯದಿ ಜಲಜ ಭವನರಾಣಿ ಕರದಿ ಪುಸ್ತಕವೇಣಿ ಕಲಕೀರ ವಾಣಿ ಕಪಿಲೆ ಸುವಾಣಿ 2 ಧರೆಯೊಳಧಿಕವೆಂಬ ಕೊಡಚಾದ್ರಿಯೊಳಗೆ ಸ್ಥಿರವಾಗಿ ನೆಲೆಸಿದ ಮೂಕಾಂಬೆ ಎನಗೆ ಕರುಣಿಸಿದದಾರನು ವರಿಸಿದರೆನಗೆ ಹರುಷದಿ ಪಾಲಿಸೆ ಪರಮ ಪಾವನೆಯೆ 3
--------------
ಕವಿ ಪರಮದೇವದಾಸರು