ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮಲಿಂಗ ಭವನದಿಆತ್ಮಲಿಂಗ ಭವನದಲಿ ವಿಚಿತ್ರವನೆ ಕಂಡುಆತ್ಮನೆಂತಿಹನೆಂದು ಅರಸನಾ ಬಲಗೊಂಡುಆತ್ಮನಾನೆರಡೆಂಬ ಅವಿ ವಾಚ್ಯನಳಿಗೊಂಡುಆತ್ಮನಾಗಿರುತಿಪ್ಪನು ಪ ಪರಿ ಪರಿಯ ಸರಗಳನೆ ಕಂಡೆಮಾತಿಗುತ್ತರಿಸದಿಹ ಮಹಾ ಮಹಿಮೆಯ ಕಂಡೆ 1 ಈಕ್ಷಿಸಿಯೆ ವಸ್ತುವನ ಏಳು ಬಾಗಿಲು ಕಂಡೆದಕ್ಷಿಣೋತ್ತರ ಎಂಬುದರ ಬಾಗಿಲನು ಕಂಡೆಅಕ್ಷಯಾಗಿಹ ಲಕ್ಷವಹ ದಿಡ್ಡಿಯನೆ ಕಂಡೆರಕ್ಷಕನಾಗಿಹನ ರಾಗದಲಿ ಕಂಡೆ 2 ಪಂಚಇಂದ್ರಿಯಗಳೆಂಬ ಪರಿಚಾರಕರನು ಕಂಡೆಕಿಂಚ ಕೆಲಸಕ್ಕಿರುವ ಕರ್ಮೇಂದ್ರಿಯರ ಕಂಡೆಸಂಚರಿಪ ಮೂರೆರಡು ಸತ್ಪ್ರಾಣಿಗಳ ಕಂಡೆವಚನಾಂತಃಕರಣ ವರ್ತಕರ ಕಂಡೆ 3 ಸತ್ಯಗುರು ಪೂರಿತಹ ಸಾರಣೆಯ ಕಂಡೆತಥ್ಯವೆನಿಸುವ ಶಾಂತ ತೋರಣವ ಕಂಡೆಅತ್ಯಧಿಕ ಬುದ್ಧಿಯ ರಂಗವಲ್ಲಿಯ ಕಂಡೆಎತ್ತ ನೋಡಿದಡತ್ತ ಎಸೆದಿಹುದ ಕಂಡೆ 4 ಆರು ಅಂತಸ್ಥನು ಕಂಡೆ ಅಲ್ಲಿರುವವರ ಕಂಡೆಬೇರೆ ಮೂರಿಹ ಮಧ್ಯ ರಂಗಗಳ ಕಂಡೆಘೋರ ಘೋಷಣ ಪ್ರಣವ ಘಂಟನಾದವ ಕಂಡೆಸಾರವಮೃತ ಕಲಶ ಪಾನಕವ ಕಂಡೆ 5 ಜ್ಯೋತಿ ಎಂದೆನ್ನುತಿಹ ಜ್ಯೋತಿರ್ಮಯನ ಕಂಡೆಸಾತಿಶಯ ಗರ್ಭಗುಡಿ ಶೀಘ್ರದಲಿ ಕಂಡೆಆತುರದಲೊಳ ಪೊಕ್ಕು ಆತ್ಮಲಿಂಗವ ಕಂಡೆಪೂತು ರಕ್ಷಿಸು ಎಂದು ಪೂಜೆ ಕೈಗೊಂಡೆ 6 ನಿತ್ಯ ನಿಶ್ಚಲ ನಿಷ್ಕಲಂಕ ನಿಜನೆ ಎಂದುಪ್ರತ್ಯಗಾತ್ಮ ಪರಬ್ರಹ್ಮನೆ ಸ್ಥಿರವೆಂದುಸತ್ಯ ಸಂವಿದ್ರೂಪ ಸಕಲಕಧಿಪತಿ ಎಂದುಅತ್ಯಧಿಕ ಚಿದಾನಂದ ಆತ್ಮ ತಾನೆಂದು7
--------------
ಚಿದಾನಂದ ಅವಧೂತರು
ತನುವೆಂಬ ಭವನದಲಿ ಮನವೆಂಬ ಮಂಟಪದಿ ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ ಅನವರತ ಸ್ವಾಗತವ ಇನಿದಾಗಿ ಪೇಳುತಲಿ ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ ಎನಗೆ ತನಗೆಂದಿಬ್ಬರನುವಾಗಿ ಕಾದಿಹರು ಘನ ಮೌನಿಯಂತೊಬ್ಬ ಮಣಿಯುತಿಹನು ವನಜ ಸಂಭವ ಜನಕ ಮುನಿಯೊಡನೆ ನೀ ಬಂದು ಕನಕಮಂಟಪವೇರು ಅವರಿಬ್ಬರೋಡುವರು 1 ಕರಿಯ ಮೈಯವನೊಬ್ಬ ದುರದುರನೆ ನೊಡುವನು ಪರಿವಾರದವರನ್ನು ತೋರುತಿಹನೊಬ್ಬ ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು ತರಿದವರ ಮಂಟಪವನೇರೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಸನ್ನ ಶ್ರೀ ಕಲ್ಕಿ ಅಮಿತ ವಿಕ್ರಮ ಕಲ್ಕಿ ಅನಘ ಲಕ್ಷ್ಮೀರಮಣ ಶರಣು ಮಾಂ ಪಾಹಿ ಕೃಷ್ಣ ನರಹರಿ ಕಪಿಲ ತಿಲಕ ವೇಂಕಟರಮಣ ಪ್ರಾಣ ಹೃದ್‍ವನಜಸ್ಥ ರಕ್ಷಮಾಂ ಸತತ ಪ ಶ್ರೀ ದುರ್ಗಾಭೂರಮಣ ವಿಷ್ಣು ರುದ್ರ ಬ್ರಹ್ಮ ಮಾಯಾ ಜಯಾ ಕೃತಿ ಕೂರ್ಮ 1 ಧನ್ವಂತರಿ ಶರಣು ಅಜಿತ ಸ್ತ್ರೀರೂಪನೇ ಘನಭೂಮಿಧರ ನಾರಸಿಂಹ ವಾಮನ ತ್ರಿಪದ ರೇಣುಕಾತ್ಮಜರಾಮ ವೇಣುಗೋಪಾಲ ನಮೋ ಬುದ್ಧ ಸುಜನಪ್ರಿಯ ಕಲ್ಕಿ 2 ವೃಷಭ ತಾಪಸ ಯಜ್ಞ ದತ್ತ ವಡವಾವಕ್ತರ ಕೃಷ್ಣ ಹರಿನಾರಾಯಣ ವೇದವ್ಯಾಸ ಶಿಂಶುಮಾರ ಸುಗುಣಾರ್ಣವನೆ ಶ್ರೀಶ ಸರ್ವಾಶ್ರಯ ಅನಂತ ಸುಖರೂಪ 3 ಭೂಲೋಕದಲಿ ಮಣಿಮಂತಾದಿ ಅಸುರರು ಶೀಲ ಹರಿಭಕ್ತರನ ಕಂಡು ಸಹಿಸದಲೆ ಬಾಲ ಶಶಿಶೇಖರನ ಸ್ತುತಿಸಿ ವರಗಳ ಪಡೆದು ಇಳೆಯಲಿ ಜನಿಸಿದರು ತತ್ವಜ್ಞಾನಿಗಳ ವೋಲ್ 4 ಸೂತ್ರ ವಿರುದ್ಧ ಭಾಷ್ಯಗಳ್ ಮಾಡಿ ವೇದೋಪನಿಷದ್‍ಗಳಿಗೆ ಅಪ ಅರ್ಥ ಪೇಳಿ ಸಾಧುಗಳ ಮನಕೆಡಿಸೆ ಮಧ್ವಾಖ್ಯ ಸೂರ್ಯನು ಉದಿಸಿ ಸಜ್ಜನರ ಹೃತ್ತಿಮಿರ ಕಳೆಯೆ 5 ಶ್ರೀಪತಿ ವಿಷಯಕ ಜ್ಞಾನ ಮರೆ ಮಾಡುವ ಇಪ್ಪತ್ತು ಮೇಲೊಂದು ಅಪದ್ದ ದುರ್ಭಾಷ್ಯ ಅಪವಿತ್ರ ಅಚರಣೆ ದುಸ್ತರ್ಕ ದುರ್ವಾದ ಈ ಪರಿಸ್ಥಿತಿಯ ನೆಟ್ಟಗೆ ಮಾಡಿದಾ ಮಾಧ್ವ 6 ಇಪ್ಪತ್ತಿ(ತ್ತು) ಎರಡನೇ ಭಾಷ್ಯಾ ಸಿದ್ಧಾಂತವ ಉಪನಿಷದ್ ದಶಕಕೆ ಸರಿಯಾದ ಭಾಷ್ಯಗಳ ಸಪ್ತ ತ್ರಿಂಶತ್ ಒಟ್ಟುಗ್ರಂಥ ಸುರಧೇನುವ ಅಪವರ್ಗಾನಂದ ಒದಗಿಸಿದ ಯೋಗ್ಯರಿಗೆ 7 ಸದ್ಧರ್ಮ ಆಚರಣೆ ಯೋಗ್ಯ ಉಪಾಸನಾ ಭಕ್ತಿ ಸವೈರಾಗ್ಯ ಜ್ಞಾನ ಉನ್ನಾಹ ಅಧಿಕಾರಿಗಳು ಈ ಪರಿಯಲಿ ಸುಖಿಸಲು ಕ್ಷಿತಿಯ ಜನರಿಗೆ ಲಭಿಸಿತು ಕ್ಷೇಮ 8 ಕಾಲವು ಜರುಗಿತು ದೈತ್ಯರು ನೋಡಿದರು ಮೆಲ್ಲಮೆಲ್ಲನೆ ಪುನಃ ವಿಷಮ ಮಾಡಿದರು ಶೀಲರ ಹಿಂಸಿಸಿ ಸದ್ಧರ್ಮ ಕೆಡಿಸಿದರು ಖಳರು ಕ್ರೌರ್ಯವ ವರ್ಧಿಸಿದರು ದಿನ ದಿನದಿ 9 ಮಹಾಭಯಂಕರ ದೈತ್ಯ ಸಮೂಹವ ಸಂಹನನ ಮಾಡಿದಳು ಮಹಾದುರ್ಗಾದೇವಿ ಬ್ರಾಹ್ಮಣಕುಲದಲಿ ಪ್ರಾದುರ್ಭವಿಸಿದ ದೇವಿ ಮಹಾದುರ್ಗಾ ಜಗದಾಂಬಾ ಶರಣು ಮಾಂಪಾಹಿ 10 ಮಾಸ ಋತು ವರುಷಗಳು ಕಾಲ ಪ್ರವಹಿಸಿತು ಜನಗಳು ಕಲಿಯುಗದ ಕಡೇ ಭಾಗ ಬರಲಾಗ ಹೀನ ಕರ್ಮಂಗಳಲಿ ಆಸಕ್ತರಾದರು 11 ಪುರಾಣಂಗಳಲಿ ಕಲಿಯಗದ ಸ್ಥಿತಿಗತಿಯು ವಿವರಿಸಿದಂತೆಯೇ ನೆನೆಯಲೂ ಭೀತಿ - ಕರ ಪಾಪಕರ್ಮದಲಿ ಜನರು ರತರಾಗಿರಲು ನರಪರ ಕ್ರೂರತನ ದಿನ ದಿನ ಹೆಚ್ಚಿತು 12 ಜ್ಞಾನಾದಿ ಸಂಪತ್ತು ಕಳಕೊಂಡ ಜನರು ವಿಷ್ಣು ದ್ವೇಷಿಗಳಾಗಿ ಬಹು ಬಹು ನೀಚ- ತನದಲಿ ಇರುತಿರಲು ದೇವತಾವೃಂದವು ನಿನ್ನ ಬೇಡಿದರು ಪುನಃ ಧರ್ಮಸ್ಥಾಪಿಸಲು 13 ಯದಾಯದಾಹಿ ಸದ್ಧರ್ಮಕ್ಕೆ ಹಾನಿಯು ಅಧರ್ಮಕ್ಕೆ ವೃದ್ಧಿಯು ಆಗುವದೋ ಆಗಾಗ ಸಾಧುಗಳ ರಕ್ಷಣೆಗೆ ಪಾಪಿಗಳ ಹನನಕ್ಕೆ ಸದ್ಧರ್ಮ ಸ್ಥಾಪನೆಗೆ ಅವತಾರ ಮಾಳ್ಪಿ 14 ಭೂಮಿಯಲಿ ಸುಪವಿತ್ರ ಶಂಭಳ ಗ್ರಾಮದಲಿ ಬ್ರಾಹ್ಮಣ ಮಹಾತ್ಮ ವಿಷ್ಣು ಯಶಸ್ ಭವನದಲಿ ಅಮಿತ ಪೌರುಷಜ್ಞಾನ ಆನಂದಮಯ ನೀನು ವಿಮಲ ಕಲ್ಕ್ಯವತಾರ ಮಾಡಿದಿ ಮಹೋಜ 15 ಕ ಎಂದರಾನಂದ ಕಲ್ಕೆಂದರೆ ಜ್ಞಾನ ಆನಂದ ರೂಪ ಶೂಲಿ ವಜ್ರಿಗಳಿಗೆ ಸುಖಜ್ಞಾನ ಬಲ ಕೊಡುವ ಠಲಕನಮೋ ಪಾಪಹರ ಸೌಭಾಗ್ಯದಾತ 16 ಲೋಕವಿಲಕ್ಷಣ ಸುಪ್ರಭಾಶ್ವ ಏರಿ ನಿಖಿಳ ದುರ್ಮತಿ ಭೂಪಾಲ ಚೋರರನ್ನ ಅಖಿಳ ಪಾಪಿಗಳ ಅಧರ್ಮ ಆಚರಿಸುವರ ಶ್ರೀಕಾಂತದ್ವೇಷಿಗಳ ಕತ್ತರಿಸಿ ಕೊಂದಿ 17 ಸತ್ಯವ್ರತ ಸುರವೃಂದ ವಸುಮತಿ ಪ್ರಹ್ಲಾದ ಶತಮಖ ಪ್ರಜೆಗಳು ವಿಭೀಷಣ ಸುಗ್ರೀವ ಪಾರ್ಥಸುಧಾಮ ರಕ್ಷಕನೇ ಸುರಬೋಧಕನೇ ಸತ್ಯಧರ್ಮರ ಕಾಯ್ವ ಕರುಣಾಳು ಕಲ್ಕಿ 18 ಜ್ಞಾನಸುಖ ಭೂಮದಿ ಗುಣಪೂರ್ಣ ನಿರ್ದೋಷ ವಿಷ್ಣು ಪರಮಾತ್ಮ ಹರಿ ಉದ್ದಾಮ ಬ್ರಹ್ಮ ಪೂರ್ಣಪ್ರಜ್ಞಾರ ಹೃಸ್ಥ ವನಜಭವಪಿತ ಕಲ್ಕಿ ಪ್ರಸನ್ನ ಶ್ರೀನಿವಾಸ ಶರಣು ಮಾಂಪಾಹಿ 19 -ಇತಿ ಕಲ್ಕ್ಯಾವತಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಾಲಕೃಷ್ಣ ಹರಿ ವಿಠಲ | ಪಾಲಿಸೋ ಇವಳಾ ಪ ಲೀಲಾ ಮನೋರೂಪ | ಕಾಳಿಂದಿ ರಮಣಾ ಅ.ಪ. ಈ ದಾಸತ್ವ ದೀಕ್ಷಾ | ಸಾಧಿಸುವುದತಿ ಕಷ್ಟಸಾಧು ಈ ಕನ್ಯೆ ಬಹು | ಭಕ್ತಿಯಲಪೇಕ್ಷೆಗೈದು ಬೇಡಿಹಳಿವಳು | ಭೋಧಿಸಿಹೆ ಅಂಕಿತವಕಾದುಕೋ ದಯವನಧಿ | ಬಾದರಾಯಣನೇ 1 ಕಾಮಾದಿಗಳ ಕಳೆದು | ನೇಮದಲಿ ಸಾಧನವನೀ ಮಾಡಿ ಮಾಡಿಸೋ | ಕಾಮ ಪಿತ ಹರಿಯೇಸ್ವಾಮಿ ನೀನಲ್ಲದಲೆ | ಅನ್ಯರನು ನಾ ಕಾಣೆಭೀಮ ಭವಾರ್ಣವವ | ದಾಟಿಸಲು ನಾಕಾಣೆ 2 ಭವವನಧಿ ನವ ಪೋತ | ತವನಾಮ ಸ್ಮøತಿಯಿತ್ತುಪವನ ಸದನದಿ ನಿನ್ನ | ನಂದನದಲ್ಲಿರಿಸೋಅವರಿವರ ಮನೆ ವಾರ್ತೆ | ಕಿವಿಗೆ ಕೇಳಿಸಬೇಡಭವನದಲಿ ಸಾಧನವ | ಗೈವಂತೆ ಮಾಡೋ 3 ಸಾಧು ಸಂಗವ ಕೊಟ್ಟು | ನೀ ದಯದಿ ಕಾಪಾಡೋಮೋದ ತೀರ್ಥರ ಮತವ | ಭೋದಿಸೋ ಮುದದೀಮಾಧವನೆ ಕಾಮಿತವ | ಆದರದಿ ಪಾಲಿಸುತಕಾದುಕೋ ಬಿಡದಿವಳ | ಶ್ರೀದ ನರಹರಿಯೇ 4 ಭಾವ ಭಕ್ತಿಯಲಿಂದ ಹಿರಿಯರ ಸೇವಿಸುವಭಾವುಕಳ ಕೈಪಿಡಿದು | ಕಾಪಾಡೊ ಹರಿಯೇಗೋವು ಕರುವಿನ ಮೊರೆಗೇ | ಧಾವಿಸೀ ಬರುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು