ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂ ನಮೋ ಮಹೀಪತಿ ಸದಾನಂದ ಗುರುಮೂರ್ತಿ | ಸನ್ನುತ ನಿಮ್ಮ ಖ್ಯಾತಿ ಪೊಗಳಲಾಪೆನೆ ಕೀರ್ತಿ ಪ ತನ್ನ ತಾ ಮರೆದವರಾ | ನೀನು ಕೊಟ್ಟು ಎಚ್ಚರಾ | ಮುನ್ನಿ ನಂದದಿ ಮಾಡಿ | ಓಡಿಸಿದೇ ಭವದೂರಾ 1 ಸಹಜ ಬೀರುವ ವಚನಾ | ಅದೇ ಉಪದೇಶ ಜ್ಞಾನಾ| ಇಹ ಪರಕ ನಿಧಾನಾ | ಮಾಡುವದು ಸಾವಧಾನಾ2 ವೇದ ಸಿದ್ಧಾಂತದಲ್ಲಿ | ರಾಜಯೋಗ ಮನೆಯಲ್ಲಿ | ಬೋಧಿಸುವ ವಸ್ತು ನೀನೇ | ಸರಿಗಾಣೆ ನಾನೆಲ್ಲಿ3 ಏನು ಪುಣ್ಯವೋ ಎನ್ನಾ | ಅದೇ ಬಾಲಕ ನಿನ್ನಾ | ತಾನೇನ ಸಾಧುವೆನಗ | ಇರಲು ನಿಮ್ಮ ದಯಾಘನಾ 4 ದಾಸರಾ ದಾಸನೆಂದು | ಇನ್ನು ನೋಡದೆವೆ ಕುಂದು | ಭಾಸಿ ಪಾಲಿಸು ಕೃಷ್ಣಗ ಎಂದೂ | ಕೈಯ್ಯಾ ಬಿಡೆನೆಂದು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧೀರ ಭವದೂರಾ ಸುಕುಮಾರಾ ಮುಖತೋರೋ ಜೀಯಾ ಪ ನಾರಾಯಣ ಕೇಶವ ಹರೀ ರಂಗ ನರರೂಪನೆ ಕರುಣಾಕರ ಅ.ಪ ಶರಣಾಗತ ಪರಿಪಾಲಿತ ಶರಣೆಂದೆನೊ ಸುರಮುನಿಹಿತ ಉರಗಾಸನ ಓಂಕಾರನೆ ನರಸಿಂಹನೆ ಪರಬ್ರಹ್ಮನೆ 1 ಕಾಮಾದಿಗಳ ಸಮರ ಸಹಿ ಪ್ರೇಮಾತಿಶಯ ಕೃಪಾಳೊ ನಾಮಾಮೃತ ಮಾಲಪಾಲನೆ ಮಹರಾಯನೆ ಮದವಾರಣ2 ಅಂಗಜಹತನಾಶಿವನುತ ಮಂಗಳ ಜಯ ತುಲಶೀರಾಮಾ ತಿಂಗಳಥರ ವಿನತಾಗುರಿ ಮಂಗಳಪುರಿ ಜಂಗಮವರ 3
--------------
ಚನ್ನಪಟ್ಟಣದ ಅಹೋಬಲದಾಸರು
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ 1 ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ 2 ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ 3 ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4 ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ5 ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ 6 ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7 ದುಂದುಭಿ ಭೇರಿಯ ರಭಸಾ ಮಹಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ8 ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ಪತಿ ನೀನೆ -ಆಹಾ ನಂದನ ಮನೋಹಂಸಾ 9 ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10 ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ11 ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ12 ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ 13 ಮಧ್ವರಮಣ ಪಾಪಿ ಭಕ್ತಿ ಜ್ಞಾನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ಪತಿ 14 ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
--------------
ವಿಜಯದಾಸ
ಬಾರೋ ಭವದೂರಾ ರಂಗಾ ನಾರಾಯಣಪ ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ ಚರಣಶ್ರಿತ ಪರಿಪಾಲಿತ ಮರಳೀಧರ ದೇವ ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ 1 ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ 2 ಪರತಂತ್ರನೆ ಪಾಪಾಂತಕ ನರವೇಷ ಭಾಷೆ ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ3
--------------
ಚನ್ನಪಟ್ಟಣದ ಅಹೋಬಲದಾಸರು
ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು | ಇಂದೆನ್ನ ಜನುಮ ಸಫಲ | ಹಿಂದೆ ಅನಂತೇಶನೆಂದೆಂಬ ನಾಮದಲಿ | ಕಂಬು | ಕಂದರದ | ತಿಮ್ಮನ ಪ ಮಕರ ಕುಂಡಲಧಾರ | ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ | ಕಮಲ ಅಕುಟಿಲ ಹೃದಯಮಂದಿರ | ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ | ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ1 ಕರ ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ | ಮುಂಗೈಯ ಫಣಿಯ ತಿಲಕಾ | ಬಂಗಾರದಂಬರ ಭವದೂರಾ ಪದದಲ್ಲಿ | ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ 2 ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ | ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ | ಕೊಂಡಾಡಿದವರಿಗೆ ತಂಡ | ತಂಡದ ವರವೀವಾ | ಉದ್ದಂಡ ವಿಜಯವಿಠ್ಠಲ| ಅಂಡಜಗಮನ ಕೃಷ್ಣಾ ತಿಮ್ಮಾ3
--------------
ವಿಜಯದಾಸ