ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಜಾಪತಿ ಮಾಂ ಪರಿಪಾಲನೆ ವೋ ಪ ಧರೆಜನರೊಳು ಬಂದ ದುರತಾಂತಕನೆ ಶಂಭೋ ಅ.ಪ ಭವದೂರನೆ ಓಂ ಶಿವ ಶಂಕರನೆ ತವಪಾದನ ತೋರೋ ಭುವನೇಶ್ವರಗೌರೀಶ 1 ಮದನಾರಿಯೊ ನೀಂ ಮಧುಸೂದನನೇ ಬುಧಜನವಿನುತಾ ತತ್ಪದ ಭಜನೆಯೊಳಗಿರಿಸೊ 2 ಪರಮಾರ್ಯನೆ ಶ್ರೀ ತುಲಸಿರಾಮಾ ಗುರುವೇನ್ನಮಃ ಪರಮೋಪಾಯಾ 3
--------------
ಚನ್ನಪಟ್ಟಣದ ಅಹೋಬಲದಾಸರು
ತಿರುಪತಿ ಶೇಷಾದ್ರಿವಾಸ ಶ್ರೀನಿವಾಸ ಪ ಶೇಷಾದ್ರಿವಾಸ ವಾಸುಕಿಶಯನನೆ ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ ಭಾಭರಣನೇ ಕರುಣಾಸಾಗರನೆ 1 ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ ಯಾದವರಕ್ಷ ಯದುಕುಲಪಕ್ಷನೆ ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2 ಭವಭಯಭಂಗ ಶ್ರೀನಿವಾಸ ಕರುಣಾಪಾಂಗ ಗರುಡತುರಂಗನೆ ನೀಲಮೇಘಾಂಗನೆ ಸುಗ್ರೀವಸಂಗನೆ ವಾಲಿ ವಿಭಂಗನೆ 3 ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ ಭಕ್ತರ ಪೊರೆಯುತ ನಿಂದ ಗೋವಿಂದ 4 ಗರುಡವಾಹನನೆ ಶ್ರೀನಿವಾಸ ಪರಮಪಾವನನೆ ಪಂಕಜನಯನನೆ ಪದ್ಮಿನೀ ಅರಸನೆ ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
--------------
ಯದುಗಿರಿಯಮ್ಮ
ಪರಮೌಷಧಿ ಸಿಕ್ಕಿತು ಪರಿಪರಿರೋಗ ಪರಿಹಾರಕಿದು ದಕ್ಕಿತು ಪ ಜ್ವರದ ಬೇಗೆಗೆ ದಾಹ ಕರುಳ ಕುಂದಿಸಿಯೆನ್ನ ನರಳಿಸಿದಾಗ ಮಾಂಗಿರಿರಂಗಾ ಎಂದೆಂಬ ಅ.ಪ ಸುರನರೋರಗ ಗರುಡ ಚರಣ ಗುರು ದಿವಾಕರ ಕಿನ್ನರಾಪ್ಸರ ಶರಣಜನ ಕರುಣಾಕರ ಶ್ರೀ ಧರ ಸುಖಂಕರ ಶೌರಿಯೆಂಬಾ1 ಪಿತ್ತವು ತಲೆಗೇರಿತು ಸುತ್ತಲು ಕಣ್ಗೆ ಕತ್ತಲೆ ಮುಸುಕಿದ್ದಿತು ಚಿತ್ತಪಲ್ಲಟಿವಾಗಿ ಮತ್ತನಾಗಿರಲಾಗ ನೆತ್ತಿಯೊಡೆದ ಎನ್ನ ಕುತ್ತಿಗೋಂಕಾರ 2 ಚಿತ್ತ ಮಸ್ತಕ ನೆತ್ತಿಗಳ ಬೆಂಬತ್ತಿ ಮತ್ತತೆಯಿತ್ತ ಪತ್ತದ ಕತ್ತಲೆಯನುತ್ತರಿಸಿದುತ್ತಮ ಚಿತ್ತಜನಪೆತ್ತಚ್ಯುತಾ ಯೆಂಬ 3 ಉಸಿರು ಉಗ್ಗಡಿಪಾಗ ವಸುದೇವ ಸುತಯೆಂಬ 4 ರಸರಸಂಗಳೊಳೆಸೆದು ವಾಸಿಸಿ ಉಸಿರು ಬಸಿರನು ವಸುವಿಲಾಸದೊಳೆಸೆದು ಪೊಸ ಪೊಸ ಎಸಕದಿಂ ಸುಖ ರಸವನೀಯುವ ರಾಮಯೆಂಬಾ 5 ಕರ ನೇತ್ರಗಳು ತಂಪಿಂಪಿನ ಸವಿ ಬಲೆಯೊಳು ಬಿದ್ದುವು ಜವ ನೇಣೆಸೆದಾಗ ಭವದೂರಹರಿ ಯೆಂಬ 6 ಶಿವ ಭವಾಮರಪವನಪಾವಕ ಜವ ಶಶಾಂಕವಾಕರಾನಕ ಶ್ರೀಧರ ಹರೇ ಭವದೂರನೆಂಬಾ 7 ಲಕ್ಷನಾಮಗಳೆಲ್ಲ ಲಕ್ಷಣವಾದ [ತು ರಕ್ಷೆಯೀಯುವಗುಳಿಗೆ] ಮಾತ್ರಾ ಮೋಕ್ಷಸುಖವನಿತ್ತು ರಕ್ಷಿಪುದೆಂಬುದ ದಕ್ಷಸುತೆಗೆ ಫಾಲಾಕ್ಷ ತಾಂ ಪೇಳಿದ 8 ಅಕ್ಷಯಾತ್ರವಿಪಕ್ಷ ರಾಕ್ಷಸ ಶಿಕ್ಷ ಸುಜನರಕ್ಷ ಪ್ರದವ ಅ ಧ್ಯಕ್ಷ ನುತಕಮಲಾಕ್ಷ ಶರಣಕಟಾಕ್ಷ ಲಕ್ಷ್ಮೀಪಕ್ಷ [ಮೂಂಗಿರಿರಂಗ] ಯೆಂಬಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ1 ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು2 ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಸಿರಿ ವಿಜಯವಿಠ್ಠಲ ನಿನ್ನ ಇಂದು 3
--------------
ವಿಜಯದಾಸ