ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ದೃಢತರದ ಭಕುತಿಯಾ ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ ಕರ್ಮಗಳೊಂದು ನಾನರಿಯೇ ನಿನ್ನಯ ಪಾಲಿಗೆ ಇಂದು ಚರಣಗಳ ದ್ವಂದ್ವಕೆ ಮಾಡದಲೆ ಸಲಹೋ ಆನಂದತೀರ್ಥರ ಪೀಠಪೂಜನೇ 1 ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2 ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು ಹನುಮೇಶವಿಠಲನ ಸ್ಮರಣೆ ಎಂಬುವುದನ್ನು ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
--------------
ಹನುಮೇಶವಿಠಲ
ನದಿಗಳು ವೇಣೀ ಮಾಧವನ ತೋರಿಸೆ ಜಾಣೆ ತ್ರಿವೇಣಿಕಾಣದೆ ನಿಲ್ಲಲಾರೆನೆ ಪ. ಬಂದೆನೆ ಬಹಳ ದೂರದಿ ಭವಸಾಗರತರಣಿನಿಂದೆನೆ ನಿನ್ನ ತೀರದಿಒಂದು ಗಳಿಗೆ ಹರಿಯಗಲಿ ನಾನಿರಲಾರೆಮಂದಗಮನೆ ಎನ್ನ ಮುಂದಕೆ ಕರೆಯೆ 1 ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದುಕರುಣದಿಂದೆನ್ನ ಪೊರೆಯೆಸ್ಮರಣೆ ಮಾತ್ರದಿ ಭವತಾಪವ ಹರಿಸುವಸ್ಮರನÀ ಪಿತ ಮುರಹರನ ಕರುಣದಿ 2 ಪಾದ ವಾ-ರಿಜ ತೋರಿಸೆ ಮದಗಜಗಮನೆ 3
--------------
ವಾದಿರಾಜ
ಬೋಧದ ಘನಮಳೆಯುಸುರಿದು ಮುಕುತಿಬೆಳೆಯು ಬಂದುದು ಪ ಮಾಯೆಯ ಬಲು ಬಿಸಿಲುತಾಪ ಕಾಯದೊಳಗೆ ಹೆಚ್ಚುತಿರಲು ಹೇಯವೆನಿಸಿ ಜನನಮರಣ ಮುಮುಕ್ಷುತ್ವ ಮೋಡಗವಿದು 1 ಸುವಿಚಾರದ ಮಿಂಚು ಹೊಳೆದು ಶ್ರುತಿಶಿರಗಳ ಗುಡುಗು ಹೊಡೆದು ಶ್ರವಣದ ಸುಳಿಗಾಳಿ ಬೀಸಿ ಭವತಾಪವ ಹರಿಸುತಿರಲು 2 ವೈರಾಗ್ಯದ ರಂಟೆ ಹೊಡೆದು ಶಮೆದಮೆಗಳ ಹರತೆಯಾಗಿ ಪರಮಾರ್ಥದ ಬೀಜ ಬಿದ್ದ ನರಜನ್ಮದ ಹೊಲದ ಮೇಲೆ 3 ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ ಸದಮಲನೆ ತವಸ್ಮರಣವಿಧಿಯ ತಿಳಿಯದಲೆ ಉದಯದೇಳುತ ನಾನು ಅಧಮ ಉದರಕ್ಕಾಗಿ ವದನತೆರೆದನ್ಯರನು ಹುದುಗಿ ಬೇಡುತಲಿ 1 ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ 2 ವಾನರಗೆ ವಶನಾದಿ ದಾನವನ ರಕ್ಷಿಸಿದಿ ಮಾನವಗೆ ಆಳಾದಿ ದೀನದಯಾಸಿಂಧು ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು