ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸಂಸಾರ ಸುಖವು ಬೇಸರಾಯ್ತೆನಗೆ ವಾಸವಾನಜ ಲಾಲಿಸೊ ಪ ಏಸು ಜನುಮದ ಪಾಪವೊ ಈ ಸಂಸಾರ ಬಂಧನವೊ ಅ.ಪ ತಂದೆ ತಾಯಿ ಎಂಬುದದು ಒಂದು ಚಿಂತೆ ಬಂಧು ಬಳಗವು ಎಂಬುದದು ಬೇರೆ ಚಿಂತೆ ಸತಿ ಸುತರೆಂಬದದು ದೊಡ್ಡ ಚಿಂತೆ ಕಂದನಿಲ್ಲದಿರಲದು ಘೋರ ಚಿಂತೆ 1 ಹಿಂದೆ ಮಾಡಿದ ಪಾಪಕೀಸು ಭವಣೆಯು ಸಾಕು ಮುಂದೆ ಬೇಡವೊ ಸ್ವಾಮಿ ಈ ತೆರದ ತಾಪ ಇಂದು ಮಾಡಿದ ಪಾಪ ಒಂದುಳುಹದಂತೆ ತಂದೆ ಕರುಣದಿ ಸುಟ್ಟು ಸಲಹೆನ್ನ ದೊರೆಯೆ 2 ಪಾದ ಸರೋಜದಲಿ ಮಂದಮತಿಯ ಮನ ಚಲಿಸದೆ ನಿಲುವಂತೆ ಒಂದು ಬೇಡುವೆನೊ ದೇವ ಬೇರೊಂದ ನಾನೊಲ್ಲೆ ಮಂದರೋದ್ಧಾರ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ. ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ 1 ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ 2 ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ 3 ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ 4 ಹೇಸಿ ವಿಷಯ ನಂಬೋದಿಲ್ಲೆ ಸೀಸ ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ 5
--------------
ಐಹೊಳೆ ವೆಂಕಟೇಶ
ಯಾಕಿಂತುಪೇಕ್ಷಿಸುವಿ ಪರಮ ಕರು- ಣಾಕರ ಶಿಕ್ಷಿಸುವಿ ಪ. ಹಿಂದಿನಾಪತ್ತುಗಳ ಸಮಯದಿ ನೀ ಬಂದೆನ್ನ ಕಾಯ್ದುದಿಲ್ಲವೆ ತಂದೆ ನೀನೆಂದು ನಂಬಿದ ಮೇಲೆನ್ನ ನೀನು ಇಂದಿಂತುಪೇಕ್ಷಿಪುದೆ 1 ಭವರೋಗಹಾರಿ ನಿನ್ನ ಭಕ್ತನಿಗಿಂಥ ಭವಣೆಯು ನಿಲುವುದುಂಟೆ ಕವಿ ಸನಕಾದ್ಯರಂತೆ ದೈಹಿಕ ದು:ಖ ಸಹಿಸಲು ಶಕ್ತಿಯುಂಟೆ 2 ಸೈರಿಸಲಾರೆ ಇನ್ನು ವೇದನೆಯಾ ಶೌರೀ ನೀ ದಯದೋರಿನ್ನು ಬರಗರಸಮಂಡನ ಕೃಪಾಕಟಾಕ್ಷ ದೋರೊ ಸುರಾರಿಖಂಡನ 3
--------------
ತುಪಾಕಿ ವೆಂಕಟರಮಣಾಚಾರ್ಯ