ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು
ಕರುಣದಿ ರಕ್ಷಿಸುಯನ್ನನು-ಪುಲಿಗಿರಿ ಲೋಲ ನಂಬಿದೆ ನಿನ್ನನು ಕರುಣದಿ ರಕ್ಷಿಸು ಚರಣಸೇವಕ ಭಯಹರಣ ಸೌಖ್ಯವಿತರಣ ನಿನ್ನಯಚರಣ ಯುಗಳದಿ ಶರಣು ಹೊಕ್ಕೆನುಪ ಯತಿಗಣ ನೇಮವನರಿಯದ-ಸ್ವರ-ಗತಿತಾಳ- ಲಯಬಂಧ ತಿಳಿಯದ ಮಹಿಮೆಯ ಕೇಳದ ಶೃತಿಗೋಚರ ನಿಮ್ಮಸ್ತುತಿಯು ಅನುಭವವಿತ್ತು ಪತಿತ ಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿಮತಿಗಳೇನೇನು ಅರಿಯದಪತಿತನೆನ್ನನು ಭವಜಲಧಿ ಮಧ್ಯದಿ 1 ಕೃಪರಮುಂದೆಡೆಯಲ್ಲಿ ದುರುಳದುಶ್ಯಾಸನನ ಕೈಯಲ್ಲಿ ಪಡಿಸಲೆಂದೆನುತಲುಜ್ಜುಗಿಸಲು ಪೊರೆಯೆಂದು ಮೊರೆಯಿಡಲಾಕ್ಷಣ ಸಂಸಾರ ಶ್ರೀಹರಿ ||ಕರು|| 2 ವರುಷ ಜಲದೊಳು ಪರಾತ್ಮರ ಪುಲಿಗಿರಿ ಕರಿ ಮೊರೆಯಿಡಲಾಗಬೇಗ ಕರುಣದಿಂ ಮೊರೆಕೇಳಿ ಗರುಡನ ಪೆಗಲೇರಿಸಾರಿ ಕರದ ಚಕ್ರದಿ ಸೀಳಿ ನಕ್ರನ ಕರಿಯ ಪೊರೆದಾ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ತಪ್ಪ ಪಾಲಿಸಯ್ಯ ತಿಮ್ಮಯ್ಯ ತಪ್ಪ ಪಾಲಿಸಯ್ಯಪ. ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ. ಜಲಜನಾಭ ನಿನ್ನ ಮಹಿಮೆಯ ನೆಲೆಯನರಿಯದೆನ್ನ ಮನವದು ನೆಲೆಯಿಲ್ಲದ ಭವಜಲಧಿಯೊಳಾಡುತ್ತ ಲಲನಾ ವಿಷಯದ ಬಲೆಗೆ ಮೋಹಿಸಿ ಮನ ಸಿಲುಕಿ ಮಲಿನವಾಯ್ತು ತತ್ವದ ನೆಲೆಯನರಿಯದಾಯ್ತು ಹೀಗೆನ್ನುತ ಕಳೆದುಹೋಯ್ತು ವಿಂಶತಿ ವತ್ಸರಗಳು ತೊಳಲಿ ಸಕಲ ಭವದೊಳಗಾರ್ಜಿತವಹ1 ಹಾಳು ಮನವು ಕೂಡಿ ನಾನಾ ಚಾಳಿ ಮಾಳ್ಪುದಾಡಿ ಬುದ್ಧಿಯ ಪೇಳಿದಷ್ಟು ದುಶ್ಯೀಲವೆ ಮಾಳ್ಪುದು ಆಲೋಚನೆಯೊಳಗೆ ಬಿದ್ದರೆ ಮೇಲಿಲ್ಲವು ಕ್ಷಣಕೆ ತನ್ನಯ ಶೀಲವನೆ ಸ್ವೀಕರಿಸುತಿರುವುದು ಪೇಳಲೇನು ಕರುಣಾಳು ನೀ ಯೆನ್ನಯ2 ನಾನಾ ಕಷ್ಟಪಟ್ಟೆ ಇನ್ನಾದರು ಮಾನಿಸಬೇಕಷ್ಟೆ ಎನ್ನೊಳು ಊನ ಗ್ರಹಿಸಿ ಅನುಮಾನ ಸಾಧಿಸಿದರೆ ನಾನೆಂಬುವದೇನು ಸ್ವತಂತ್ರವ ಕಾಣೆನು ಎನ್ನೊಳಗೆ ಸಂತತ ನೀನೇ ಗತಿಯೆನಗೆ ಇದಕನು- ಮಾನವಿಲ್ಲ ಪಾದಾನತಜನರಾ ಧೀನನೆಂಬ ಬಿರುದಾನಬೇಕಾದರೆ3 ಅಪರಾಧಿಯೆ ನಾನು ಹೇಗೈ ಅಖಿಲಾತ್ಮನು ನೀನು ಹೃದಯದಿ ಕೃಪೆಯ ಬೀರಿ ತೋರಿಪ ಪರಮಾತ್ಮನೆ ಚಪಲನಾಗಿ ಎನ್ನುಪಮೆಗೆಯೊಡ್ಡಿದೆ ಸಫಲವಾಯ್ತು ಎನಗೆ ಕೀರ್ತಿಯು ಅಪಕೀರ್ತಿಯು ನಿನಗೆ ಪಾದವ ಜಪಿಸುವಂತೆ ಕರುಣಿಪುದಿನ್ನಾದರೂ ಕಪಟವಾಯ್ತೆ ಸರೀಸೃಪಗಿರಿರಾಜನೆ4 ದೂಷಣಾರಿ ನಿನ್ನ ಪಾದದ ದಾಸಗೈಯ್ಯೊ ಎನ್ನ ಎನ್ನೊಳು ದೋಷವಿಲ್ಲ ಜಗದೀಶ ಜನಾರ್ದನ ದಾಶರಥಿಯ ಕರುಣಾಶರಧಿಯೊಳಗೆ ಈಸಾಡಿದ ದಾಸ ಕಾರ್ಕಳಾ ಧೀಶ ಶ್ರೀನಿವಾಸ ರವಿಶತ ಭಾಸ ಶ್ರೀಲಕ್ಷ್ಮೀನಾರಾಯಣ ಸ ರ್ವೇಶ ಭಕ್ತಜನಪೋಷ ನೀಯೆನ್ನಯ5
--------------
ತುಪಾಕಿ ವೆಂಕಟರಮಣಾಚಾರ್ಯ
ನೀ ನೀಡು ವರವ ದೇವಾ ಭವಚಾಲಕಾರಣಾದ ವಿಷಯೇಚ್ಛಯಿಂದ ಬಳಲಿ ವಿಷಯಗಳ ಭೋಗಪಡೆದೆ ಪುಸಿಯಾದ ವಿಷಯಸುಖದ ವ್ಯಸನದಲ್ಲಿ ಬೆಂದು ಹೋದÉ ವಿಷಯೇಚ್ಛೆ ಹೋಗಲಿಲ್ಲ ಕಸವಿಸಿಯ ಬಿಡುತಲಿರುವೆ ಹಸನಾಗಿ ಬೋಧಮಾಡೈ ಘೋರಾದ ಭವಜಲಧಿಯಾ ಪಾರಾಗುವುದೆ ಯುಕುತಿಯಾ ಚಿರಶಾಂತಿ ಪಡೆವ ಪರಿಯಾ ಪರಮಾತ್ಮಜ್ಞಾನಸಿರಿಯಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಪಾಲಿಸೊ ಜಗನ್ನಾಥ ದಾಸಾ | ವರ್ಯಕಳೆಯೊ ಯನ್ನ ಕಲಿಕಲ್ಮಷ ಪ ಶೀಲ ಗೋಪಾಲನ ದಾಸಾರ್ಯರ ಕರಜನೆಲಾಲಿಸೋಗುಣನಿಧಿ ಬಾಲನ ಬಿನ್ನಪ ಅ.ಪ. ಹರಿಕಥಾಮೃತ ವಕ್ತಗುರುವೇ | ಕಾಯೊಪರಮ ಭಕ್ತರ ಕಲ್ಪತರುವೆ |ಹರಿಗುರು ಕರುಣ ಸಂಪೂರ್ಣಪಾತ್ರನೆ ಭವಸೆರೆಯ ಬಿಡಿಸಿ ಕಾಯೊ ಪರಮ ಪವಿತ್ರ1 ಅದ್ವೈತ ಗಜಸಿಂಹ 2 ಭವಜಲಧಿ ನವಪೋತ ಹರಿಯಾ | ಗುರುಗೋವಿಂದ ವಿಠಲನ ಪದವಾ |ಅವಿರತ ಹೃದಯದಿ ನೋಡುವ ಸೌಭಾಗ್ಯಜವದಿ ಪಾಲಿಸೊ ಜಗನ್ನಾಥ ದಾಸಾರ್ಯನೆ 3
--------------
ಗುರುಗೋವಿಂದವಿಠಲರು
ಮಾತಾನ್ನಪೂರ್ಣೆ ಮಾಮಮಾಪರ್ಣೆ ಪ ಪಾತಕವನು ಕಳೆದು ಪಾದಸೇವೆಯ ನೀಯೆ ಅ.ಪ ಮಾನಸವನು ನಿರ್ಮಲ ಮಾಡಿ ಕೈಪಿಡಿಯೇ 1 ಧನ್ಯನ ಮಾಡೇ ಕರುಣದಿ ನೋಡೇ ಅನ್ಯರಿಗೀಪರಿ ಬನ್ನಪಡಲಾರೆನು 2 ರಾಯ ಶಂಕರನು ಭವಜಲಧಿಯೊ ಳಾಯಾಸಪಡುತಲಿ ನೋಯುತಲಿರುವೆನು 3 ಭೂಸುರವಿನುತೆ ದೇವಾಸುರ ಪೂಜಿತೆ 4 ಪ್ರೇಮದಿ ಭಿಕ್ಷ ನಿನ್ನಿಂದ ಪಡೆದು ತಾಮರಸಾಕ್ಷ ಬಲಿಯ ಗೆದ್ದವಾಮನ ಶ್ರೀ ಗುರುರಾಮ ವಿಠಲ ಸ್ವಾಮಿ 5
--------------
ಗುರುರಾಮವಿಠಲ
ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ ಸೇವ್ಯ ಪಾದಾಜ್ಜ ಪ ಕಮಲಸಂಭವಜನಕ ಕಮಲಾಪ್ತ ಕುಲತಿಲಕ ಕಮಲ ಸನ್ನಿಭಚರಣ ಕಲುಷಗಣಹರಣ ಕಮನೀಯ ಗುಣಹಾರ ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತ ಶೃಂಗಾರ 1 ಲೋಕಮೋಹನರೂಪ ಲೋಕರಕ್ಷಣ ಚಾಪ ಸುಕೃತಿ ಪರಿವಾರ ನಾಕನಿಲಯ ಸಮಾಜ ನಮಿತ ಪಾದಾಂ ಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ ಗಾನರಸಲೋಲ 3 ತವಚರಣ ಪಂಕಜಂ ತೃಪ್ತಜನ ಸುರಕುಜಂ ಭವಜಲಧಿಕಾರಣಂ ಭವತು ಮಮ ಶರಣಂ ತವನಾಮಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4 ಸಕಲಲೋಕ ಶರಣ್ಯ ಸರ್ವದೇವವರೇಣ್ಯ ನಿಖಿಲಭೂತವಾದ ನಿರ್ಮಲ ಸುವೇಷ ಅಕಲಂಕ ಚರಿತ ನಿತ್ಯಾನಂದ ಗುಣಭರಿತ ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5
--------------
ವೆಂಕಟವರದಾರ್ಯರು
ಶ್ರೀ ವ್ಯಾಘ್ರಗಿರಿವಾಸ-ಶ್ರೀ ಶ್ರೀನಿವಾಸ ಸೂರಿ ಸೇವ್ಯ ಪಾದಾಬ್ಜ ಪ ಕಮಲಸಂಭವ ಜನಕ ಕಮಲಾಪ್ತಕುಲತಿಲಕ ಕಮಲ ಸನ್ನಿಭಚರಣ ಕಲುಷಗಣ ಹರಣ ಕಮನೀಯ ಗುಣಹಾರ-ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತಶೃಂಗಾರ 1 ಲೋಕ ಮೋಹನ ರೂಪ ಲೋಕರಕ್ಷಣ ಚಾಪ ಶೋಕಮೋಹವಿದೂರ ಸುಕೃತಿಪರಿವಾರ ನಾಕನಿಳಯ ಸಮಾಜ ನಮಿತ ಪಾದಾಂಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ 2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜ ಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ-ಗಾನರಸಲೋಲ 3 ತವಚರಣ ಪಂಕಜಂ-ತೃಪ್ತಜನ ಸುರಕುಜಂ ಭವಜಲಧಿತಾರಣಂ ಭವತುಮಮ ಶರಣಂ ತವನಾಮ ಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ-ಶಮಿತಾಘಮಹಿಮಾ4 ಸಕಲ ಲೋಕ ಶರಣ್ಯ ಸರ್ವದೇವ ವರೇಣ್ಯ ನಿಖಿಲ ಭೂತವಾಸ-ನಿರ್ಮಲಸುವೇಷ ಅಕಲಂಕ ಚರಿತ-ನಿತ್ಯಾನಂದ ಗುಣ ಭರಿತ ಶಿಖರಿಷವಿಹರಣ ಕುಶಲ-ಶ್ರೀವರದವಿಠಲ5
--------------
ಸರಗೂರು ವೆಂಕಟವರದಾರ್ಯರು
ತಂದೆ ಪುರಂದರದಾಸರ ಸ್ಮರಿಸುವೆ ಎನ್ನಮಂದಮತಿಗಳೆದು ಹರಿಭಟನೆನಿಸುವೆ ಪ.ಗುರುವ್ಯಾಸರಾಜರ ಚರಣಾಬ್ಜ ಷಟ್ಚರಣನವಿರತಿಭಕುತಿ ಜ್ಞಾನದಾರ್ಣವನವರಉಪನಿಷದ್ವಾರಿನಿಧಿಗೆ ತಿಮಿಂಗಿಲನಹನಧರೆಯ ಕವಿಕುಲ ಶಿಖಾಮಣಿಯೆನಿಪನ 1ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನಕನಕಲೋಷ್ಠ ಸಮಾನದೀಕ್ಷಿಸುವನಘನಸಿದ್ಧಿಗಳು ತಾವೆ ಬರಲೊಡಂಬಡದನಹರಿಗುಣಕೀರ್ತನೆಯಲ್ಲಿ ಪರವಶದಿಹನ2ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋಧವಮೆಟ್ಟಿ ಭಕ್ತಿಸುಧೆಯುಂಡು ತೇಗಿಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತದವರೆನಿಪ ದಾಸರಿಗೆ ತವರೂಪ ತೋರಿದನ 3ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆಅವಿರಳಾನಂದವಿತ್ತಥಿರ್üಸುವನನವಭಕುತಿ ಮನಗಂಡು ಸವೆಯದಾನಂದಪುರ ಪಥವನು ತೋರಿಸಿದಂಥ ಬಹುಕೃಪಾಕರನ 4ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತಪ್ರಬಂಧ ರಚಿಸಿ ವಿಠಲನಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ 5
--------------
ಪ್ರಸನ್ನವೆಂಕಟದಾಸರು
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ