ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ಬಿನ್ನಪ ಕೇಳಯ್ಯಾ ಬಡವನ ಮನ್ನಿಸು ಮಹರಾಯ ಪ ಎನ್ನ ಭವಗುಣಗಳನ್ನು ಕಳೆದು ಪೊರೆ ಸನ್ನುತಾಂಗ ಹರಿ ಉನ್ನತ ಮಹಿಮ ಅ.ಪ ತೊಳಲಿಬಳಲಿ ಬಂದೆ ಸಂಸಾರದ್ಹೊಲಸಿ ನೊಳಗೆ ನಿಂದೆ ಅಳಿಯುವ ದೇಹಕೆ ಕಳವಳಿಸುವ ಮನ ಮಲಿನತೊಳೆದು ನಿರ್ಮಲ ಮಾಡು ತಂದೆ 1 ಹುಟ್ಟಿ ನೀ ಸಾಯ್ವುದಕೆ ಬಂದಿಲ್ಲ ಗಟ್ಟ್ಯಾಗಿರಲಿಕ್ಕೆ ಸಠೆ ಈ ಲೋಕವು ದಿಟವಲ್ಲೆನಗೆ ಬಟ್ಟೆ ತಪ್ಪಿಸು ತಂದೆ 2 ಇಷ್ಟುದಿನವು ಕಳೆದು ತಿಳಿಯದೆ ಭ್ರಷ್ಟತನದಿ ಬಾಳ್ವೆ ಇಷ್ಟು ದಿನ ದಿನಗಳ್ವ್ಯರ್ಥ ಕೆಟ್ಟಿದ್ದೆ ಸಾಕಯ್ಯ ಶಿಷ್ಟಗುಣವಕೊಟ್ಟು ಸಲಹೊ ಶ್ರೀರಾಮ3
--------------
ರಾಮದಾಸರು
ಮನಕೆ ಬೇಸರ ಬೇಡ ಮಣಿವೆ ಮಾಧವನೆ ಕ್ಷಣಕೊಂದು ಬೇಡುವ ಈ ಪಾಮರನೆಂದೆನುತ ಪ ತಂದೆಯನು ಕೊಲ್ಲೆನಲು ತಕ್ಕ ಶಿಕ್ಷೆಯ ಮಾಡು ಕೊಂದು ಅಣ್ಣನ ರಾಜ್ಯ ಕೊಡು ಎನಗೆ ಎನಲು ಕುಂದಿಟ್ಟು ಮನ್ನಿಸದಿರಲ್ಲದೆ ಎನ್ನ ಬಂಧನದ ಬಲೆಯನ್ನು ಬಯಲೆನಿಸು ಎಂಬೆ 1 ಹೆಣ್ಣಾಗಿ ಬಾರೆನಲು ಕಣ್ಣೆತ್ತಿ ನೋಡದಿರು ಎನ್ನ ಮನೆಯ ಕುದುರೆಯನು ಕಾಯಲು ಗನ್ನಗತಕನೆಂದು ಮನ್ನಿಸಿ ಸಲಹದಿರಲು ಅನ್ಯ ಬೇಡಿದೆನೇನು ಸಂತಸ ನೀಡೆಂಬೆ 2 ನಾಯಾಗಿ ಬಂದು ನಿನ್ನ ಲತ್ತೆತಿನುಯೆಂದೆನಲು ಕಾಯದಿರು ಕರುಣದಿ ದೇವದೇವೇಶ ಆವಾವ ಕಾಲದಿ ಬಾಯಬಿಡಿಸದಿರಲ್ಪ ಮಾಯ ಮೋಹಿಗಳ ಬಳಿಯೆಂದು ಬೇಡುವೆನು 3 ನೀರುಕೊಟ್ಟೆನ್ನ ಕರದಿಂದ್ಹೊಡಿಸಿಕೊಯೆನಲು ಚೋರನು ಇವನೆಂದು ಬಾರದೆ ಇರೆಲೋ ಘೋರಸಂಸಾರ ತಾಪವಾರಿಧಿಯ ಕಷ್ಟದಿಂ ಪಾರುಮಾಡೆಂದೆನುತ ಸಾರಿ ಬೇಡುವೆನು 4 ಸಲಿಸೆನ್ನ ನೈವೇದ್ಯ ಕುಲಗೇಡು ಎಂದೆನುತ ಛಲದಿ ಬೇಡಲು ಎನಗೊಲಿಯದಿರು ಸ್ವಾಮಿ ಬಲು ಹೊಲೆಯ ಪ್ರಪಂಚದ್ಹಲುಬಾಟ ಬಿಡಿಸೆನ್ನ ಮಲಿನತ್ವಳಿಕಿಸಿ ಚೆಲುವ ಸಲಹೆಂಬೆ 5 ತಿಳಿಯದೆ ನಿನ್ನನ್ನು ಕುಲಗೇಡಿಯೆಂದೆನುತ ಕುಲದಿಂದ ಹೊರಹಾಕಲೊಳಿತಾಗಿ ತಳ್ಳೋ ಮಳ್ಳತನ ಬಿಡಿಸೆನ್ನ ಮನಸಿನ ಕಿಲ್ಬಿಷವ ತೊಳದೆ ನಿಜಜ್ಞಾನದ ಪಾಲಿಸು ಎಂಬೆ 6 ನರನ ಭವಗುಣಗಳ ಪರಿಹರಿಸಿ ಬೇಗನೆ ಕರುಣಿಸು ಎನಗೆ ಪರರ ಬೇಡದ್ದನು ಕರುಣಾಳು ಶ್ರೀರಾಮ ಗುರುವೆ ನೀನಾಗೆನ್ನ ಪರಿಭವದ ದು:ಖವನು ತ್ವರಿತದ್ಹರಿ ತಂದೆ 7
--------------
ರಾಮದಾಸರು
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ ಮೇಲು ಮೂಜಗಸೂತ್ರ ಹರಿನಾಮ ಪ ಕಾಲಕುಜನಕುಲ ಹರಿನಾಮ ಪಾಲಸುಜನಗಣ ಹರಿನಾಮ ಜಾಲಮಾಯ ದರ್ಪಣ್ಹರಿನಾಮ ವಿಶ್ವ ಹರಿನಾಮ ಅ.ಪ ಶರನಿಧಿಮಂದಿರ ಹರಿನಾಮ ಶರಧಿಮಥನ ಮುರಹರಿನಾಮ ಪುರತ್ರಯಸಂಹರ ಹರಿನಾಮ ಸುರಗಣಭೋಜನ ಹರಿನಾಮ ಶರಣರ ಸಿರಿತಾನ್ಹರಿನಾಮ ಪರತರ ಪಾವನ ಹರಿನಾಮ1 ಶಾಪವಿಮೋಚನ ಹರಿನಾಮ ತಾಪತ್ರಯಗಳ್ಹರ ಹರಿನಾಮ ಗೋಪೇರಾನಂದ ಲೀಲ ಹರಿನಾಮ ಕಪಾಲಧರನುತ ಹರಿನಾಮ ಗೌಪ್ಯಕೆ ಗೌಪ್ಯದ ಹರಿನಾಮ 2 ದುರಿತ ದಾರಿದ್ರ್ಯ ದೂರ್ಹರಿನಾಮ ಪರಿಹರ ಜರಾಮರಣ್ಹರಿನಾಮ ನರನ ಸಿರಿಯ ಭಾಗ್ಯ ಹರಿನಾಮ ಸುರತರು ಹರಿನಾಮ ಅರಿವಿನ ಅರಮನೆ ಹರಿನಾಮ ಪರಕ ಪರಮಸಿರಿ ಹರಿನಾಮ 3 ನಿಜಮತಿ ಭಂಡಾರ ಹರಿನಾಮ ಕುಜಮತಿ ಖಂಡನ ಹರಿನಾಮ ಭಜಕರನಿಜಧೇನ್ಹರಿನಾಮ ಭುಜಗಾದ್ರಿ ಪರ್ಯಂಕ ಹರಿನಾಮ ದ್ವಿಜರಿಗಮೃತನಿಧಿ ಹರಿನಾಮ ಅಜನಿಗುತ್ಪತ್ತಿ ಮಂತ್ರ ಹರಿನಾಮ 4 ವೇದಗಳಾಧಾರ ಹರಿನಾಮ ಸಾಧುಸಂತ ಪ್ರೇಮ ಹರಿನಾಮ ಭೇದವಾದÀರಹಿತ್ಹರಿನಾಮ ಸಾಧಿಸಲಸದಲ ಹರಿನಾಮ ಆದಿ ಅನಾದಿವಸ್ತು ಹರಿನಾಮ ಭೋಧ ಸ್ವಾದಸಾರ ಹರಿನಾಮ 5 ಕಾಲ ಹರಿನಾಮ ಕೀಳರ ಎದೆಶೂಲ್ಹರಿನಾಮ ಶೀಲರ ಜಪಮಾಲ್ಹರಿನಾಮ ಲೋಲಗಾನಪ್ರಿಯ ಹರಿನಾಮ ಕೀಲಿ ವೇದಾಂತದ ಹರಿನಾಮ ಫಾಲನೇತ್ರಗೆ ಶಾಂತಿ ಹರಿನಾಮ 6 ಪ್ರಳಯಕೆ ಅಳುಕದ ಹರಿನಾಮ ಪ್ರಳಯ ಪ್ರಳಯಗೆಲುವ್ಹರಿನಾಮ ಮಲಿನದಿ ಸಿಲುಕದ ಹರಿನಾಮ ಚಲಿಸದ ನಿರ್ಮಲ ಹರಿನಾಮ ಬೆಳಗಿನ ಬೆಳಗೀ ಹರಿನಾಮ ಕುಲಮುನಿ ಪಾವನ ಹರಿನಾಮ 7 ವಿಷಮಸಂಸಾರಖಡ್ಗ ಹರಿನಾಮ ವ್ಯಸನಕಾಷ್ಠಕಗ್ನಿ ಹರಿನಾಮ ವಿಷಕೆ ಮಹದಮೃತ ಹರಿನಾಮ ಮಸಣಿಮಾರಿಧ್ವಂಸ ಹರಿನಾಮ ಅಸಮಸುಖದ ಋಣಿ ಹರಿನಾಮ ವಸುದೇಜೀವಜೀವಳ್ಹರಿನಾಮ8 ಧರ್ಮಶಾಸ್ತ್ರದ ಗುಟ್ಟು ಹರಿನಾಮ ಮರ್ಮ ತಿಳಿಸುವ ರಟ್ಟು ಹರಿನಾಮ ಕರ್ಮ ಕಡಿಯುವ ಶಸ್ತ್ರ ಹರಿನಾಮ ನಿರ್ಮಲಾನಂದ ಪದವೀ ಹರಿನಾಮ ನಿರ್ಮಾಣ ನಿಜಜ್ಞಾನ ಹರಿನಾಮ ಬ್ರಹ್ಮಕಿಟ್ಟಿಗುರಿ ಹರಿನಾಮ 9 ಭವಗುಣಮರ್ದನ ಹರಿನಾಮ ಭವನಿಧಿ ಸೇತುವೆ ಹರಿನಾಮ ಭವನ ಭೀತಿಹರ ಹರಿನಾಮ ರವಿಕುಲ ಪಾವನ ಹರಿನಾಮ ಬುವಿತ್ರಯ ಪವಿತ್ರ ಹರಿನಾಮ ಸಾಯುಜ್ಯಪದಸ್ಥಾನೀ ಹರಿನಾಮ 10 ಸತ್ಯಕ್ಕೆ ಬಹು ನಿರ್ಕು ಹರಿನಾಮ ಮಿಥ್ಯಕ್ಕೆ ಅನರ್ಥ ಹರಿನಾಮ ನಿತ್ಯಕ್ಕೆ ಮಹಸುರ್ತು ಹರಿನಾಮ ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ ಅರ್ತವರಿಗೆ ಗುರ್ತು ಹರಿನಾಮ ಭೃತ್ಯಜನರ ಮತ್ತು ಹರಿನಾಮ 11 ಮಾಯಕ್ಕೆ ಪ್ರತಿಮಾಯ ಹರಿನಾಮ ಮಾಯ ಕತ್ತಲುನಾಶ ಹರಿನಾಮ ಕಾಯಕ್ಕೆ ಶೋಭಾಯ ಹರಿನಾಮ ಭಾವಕ್ಕೆ ಪರಿಶುದ್ಧ ಹರಿನಾಮ ತಾಯಿತಂದೆ ಜೀವಕ್ಹರಿನಾಮ ಅಮೃತ ಹರಿನಾಮ 12 ಪುಣ್ಯ ಶರಧಿಗೆ ಚಂದ್ರ್ಹರಿನಾಮ ಮನ್ನಣೆ ಮೂಲೋಕದ್ಹರಿನಾಮ ಧನ್ಯರಿಗೆ ಧನ್ಯ ಹರಿನಾಮ ಉನ್ನತ ಸಾಮ್ರಾಜ್ಯ ಹರಿನಾಮ ಮುನ್ನ ಕೈವಲ್ಯಪದ ಹರಿನಾಮ ಸನ್ನಿಧಿ ವೈಕುಂಠ ಹರಿನಾಮ 13 ನಿಗಮಕೆ ಸೊಬಗಿನ ಹರಿನಾಮ ಸುಗುಣರೊಳ್ನೆಲೆಗೊಂಡು ಹರಿನಾಮ ಅಗೋಚರ ಆಗಮಕ್ಹರಿನಾಮ ಸೊಗಸುವ ಭಕ್ತರಲ್ಹರಿನಾಮ ಅಗಜೇಶ ಪೊಗಳುವ ಹರಿನಾಮ ಅಗಜೆಯು ಒಪ್ಪಿದ ಹರಿನಾಮ 14 ವಿಮಲ ಗುಣಗಣ ಹರಿನಾಮ ದಮೆ ದಯಾನ್ವಿತ ಹರಿನಾಮ ಶಮೆ ಶಾಂತಿಮಂದಿರ ಹರಿನಾಮ ಸುಮನಸ ಕಲ್ಪದ್ರುಮ ಹರಿನಾಮ ನಮಿತ ಸುರಾದ್ಯರಖಿಲ ಹರಿನಾಮ ಅಮಿತ ವಿಶ್ವರೂಪ ಹರಿನಾಮ 15 ಮೂರು ಕಾಲದರಿವದ್ಹರಿನಾಮ ಮೂರಾರಿಕ್ಕಡಿಗೈವುದ್ಹರಿನಾಮ ಪಾರಪಂಚ ಪರುಷ್ಹರಿನಾಮ ಸಾರಸೌಖ್ಯಾಂಬುಧಿ ಹರಿನಾಮ ದಾರಿ ವೈಕುಂಠಕ್ಕೆ ಹರಿನಾಮ ಸೇರಿ ದಾಸರನಗಲದ್ಹರಿನಾಮ 16 ಭಕ್ತವತ್ಸಲ ಜಯ ಹರಿನಾಮ ಮುಕ್ತಿದಾಯಕ ಜಯ ಹರಿನಾಮ ಹತ್ತಾವತಾರ ಜಯ ಹರಿನಾಮ ಸತ್ಯ ಶೀಲ ಜಯ ಹರಿನಾಮ ನಿತ್ಯ ನಿರುಪಮ ಜಯ ಹರಿನಾಮ ಕರ್ತು ಶ್ರೀರಾಮ ಜಯ ಹರಿನಾಮ 17
--------------
ರಾಮದಾಸರು
ಲೀಲೆಯೊಳಾಡಿಸೊ ಹರಿ ನಿನ್ನ ಲೀಲೆಯೊಳಾಡಿಸೊ ಪ ಲೀಲೆಯೊಳಾಡಿಸೊ ಕಾಲಕಾಲದಿ ನಿನ್ನ ಶೀಲನಾಮವೆನ್ನ ನಾಲಗ್ಗೆ ಕರುಣಿಸು ಅ.ಪ ಮಂದಮತಿಯ ಹರಿಸೋ ಮನ ಗೋ ವಿಂದನೊಳೊಡಗೊಡಿಸೊ ಎಂದೆಂದಿಗು ಆ ನಂದನ ಕಂದನ ಪಾದ ಮನಮಂದಿರದಿರಿಸೊ 1 ಶೀಲಗುಣವ ಕಲಿಸೊ ಭವಗುಣ ಜಾಲವ ಪರಹರಿಸೊ ಪಾಲಿಸಿ ನಿಮ್ಮ ಧ್ಯಾನಲೋಲನೆನಿಸಿ ಯಮ ದಾಳಿ ನೀಗಿಸಿ ಭವಮಾಲೆಯ ಗೆಲಿಸೊ 2 ಮೋಸ ಮಾಯ ಹರಿಸೊ ವಿಷಯ ದಾಸೆಯ ಪರಿಹರಿಸೊ ಭಾಸುರಕೋಟಿಪ್ರಭೆ ಸಾಸಿರನಾಮದ ಶ್ರೀಶ ಶ್ರೀರಾಮ ನಿಮ್ಮದಾಸೆನಿಸೊ 3
--------------
ರಾಮದಾಸರು
ಶ್ರೀ ಗುರುವರ ! ಮಾಂ ಪಾಲಯ ಭೋ ! ಪಮಾಂ ಪಾಲಯ ಭೋ ! ಅ.ಪಆರ್ತಿಂಹÀರ,ಭವ- ವಾರ್ತಿಂ, ತವ ಸಂ-ಕೀರ್ತನಂ ದಿಶÀ ಸದಾ ಕರುಣಾಕರ ! ಭೋ ! 1ರುದ್ಧಂ, ಭವಗುಣ - ಬದ್ಧಂ, ಜನಸುವಿ -ರುದ್ಧಂ, ಗುರೋ !ಮಾ- ಮುದ್ಧರ ಭೋ !2ಮಗ್ನಂ, ಸ್ತ್ರೀ ಸುತ - ಲಗ್ನಂ, ತ್ವತ್ವದಲಗ್ನಂ, ಕುರು ಕರುಣಾಕರ ಭೋ ! 3ಪುತ್ರಂ, ಸಜ್ಜನ - ಮಿತ್ರಂ, ತ್ವದ್ಗುಣ -ಚಿತ್ರಂ ಜ್ಞಾಪಯ ಶತೃಹ ! ಭೋ ! 4ಹೀನಂ, ದುರ್ಗುಣ - ಮಾನಿಂ, ತ್ವದ್ಗುಣಜ್ಞಾನಿಂ ಕುರು ಕರುಣಾಕರ ಭೋ ! 5ಭಕ್ತಂ, ಸಜ್ಜನ - ಸಕ್ತಂ, ವಿಷಯ ವಿ -ರಕ್ತಂ ಕುರು ಕರುಣಾಕರ ಭೋ ! 6ದೂತಂ,ಭವಭಯ- ಭೀತಂ ಸದ್ಗುಣಖ್ಯಾತಂ, ಯತಿವರ ! ಕರು ಮಾಂ ಭೋ ! 7ಪೋತಂ,ಶ್ರುತಿಸ್ಮøತ್ಯ- ದೀತಂ, ಪಾಪ ವಿ-ಧೂತಂ ಕುರು ಸತ್ವರ ಮಾಂ ಭೋ ! 8ದಾಸಂ, ಸ್ತ್ರೀಕರ ವಾಸಂ - ತ್ವತ್ಸಹ -ವಾಸಂ ಸಂದಿಶ ಸಂತತ ಭೋ ! 9ಮೂಢಂ, ಭವನಿಧಿ -ಗಾಢಂ, ತ್ವತ್ವದರೂಢಂ, ಗುರುವರ ! ಕುರು ಮಾಂ ಭೋ ! 10ಚಾರಂ, ನಿರ್ಗತ - ಸಾರಂ, ಬಂಧವಿದೂರಂ ಕುರು ಕರುಣಾರ್ಣವ ! ಭೋ 11ಬಾಲಂ, ತ್ವದ್ಗುಣ - ಶೀಲಂ, ತತ್ಪದಲೋಲಂ ಕುರು ತ್ವಂ ಕುರು ಮಾಂ ಭೋ ! 12ಪೋತಂ, ಸ್ವಾಮ್ಯವ - ಧೂತಂ , ವಿಸ್ತ್ರುತ -ಖ್ಯಾತಿಂ ಕಾರಯ ಕಾರಯ ಭೋ ! 13ವ್ಯರ್ಥಂ, ದಾಪಯ - ಮೇರ್ಥಂ, ಕುರು ಸುಕೃ -ತಾರ್ಥಂ ಯತಿವರ ! ಮಾಮವ ಭೋ ! 14ದಾತಾಗುರುಜಗ - ನ್ನಾಥಾ ವಿಠಲದೂತಾಗ್ರೇಸರ ಪಾಲಯ ಭೋ ! 15
--------------
ಗುರುಜಗನ್ನಾಥದಾಸರು