ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಣೆಯಾರೊ ನಿನಗೆ ಹನುಮಂತರಾಯ ಪ. ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ಅ.ಪ. ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ1 ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲಚರಚರನೆ ಸೀಳಿ ಸಂಭ್ರಮದಿಂದಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ 2 ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ 3
--------------
ವಾದಿರಾಜ
ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು ಪರರಾಯನಾಳೆನಿಸಿ ತಿರುವಿಸಿದಿ ಅಶ್ವ ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ ನಿರುತದಿಂ ಕಾಯ್ಸಿದೆಯೊ ಸುಡುಗಾಡವ 1 ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ 2 ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ ತಿರಿದುಣಿಸಿದಿ ಆ ಮಹ ಪಾಂಡುನಂದನರ ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ 3 ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ ಪದುಮಪೀಠನದೊಂದು ಮಸ್ತಕವ ಕಳೆದಿ ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ 4 ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ ಮ್ಮಂಥ ನರಜನರ ಪಾಡೇನು ನಿನಗೆ ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ ವಂತನಿನಿಸಿದೆಯೋ ನೀ ಮೂಲೋಕದೊಳಗೆ 5
--------------
ರಾಮದಾಸರು
158ಭಳಿಭಳಿರೆ ಎನ್ನ ಸುಖವೆಂಬುದೇ ಸುಖವುಹಲಕಾಲಕಿದೆ ಇರಲಿ ಕಾವೇರಿ ರಂಗ ಪತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿಮಂದಹಾಸನನೆನಗೆ ಹಿರಿಯಣ್ಣನು ||ಇಂದುಶ್ರೀ ಸರಸ್ವತೀದೇವಿ ಅತ್ತಿಗೆಯುಎಂದೆಂದಿಗೂ ವಾಯುದೇವರೇ ಗುರುವು 1ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿಗರುಡಾಹಿ ರುದ್ರರಣ್ಣನ ಮಕ್ಕಳು ||ಸುರರುಸನಕದಿಗಳು ಪರಮಬಾಂಧವರೆನಗೆಸ್ಥಿರವಾದ ವೈಕುಂಠವೆನಗೆ ಮಂದಿರವು 2ನಿನ್ನ ಪಾದಾಂಬುಜವ ಭಜಿಸುವುದೆ ಸೌಭಾಗ್ಯನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ ||ನಿನ್ನ ಕಥೆ ಕೇಳುವುದೆ ಮಂಗಳಸುವಾದ್ಯಗಳುನಿನ್ನಂಥ ಅರಸೆನಗೆ ಪುರಂದರವಿಠಲ 3
--------------
ಪುರಂದರದಾಸರು