ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೇಳೇಳೆಲೆ ಮಾಮ | ಆರೋ ರೇಳೋದು ಸುಳ್ಳು ಬಂತು ಕ್ಷಾಮ ಪ ಹಾಳಾಗಿ ಹೋಯ್ತು ಮಳೆಬಳೆ ಕಾಳೆಲ್ಲ ಕಸವಾಯಿತು ಅ.ಪ ಭೂಮಿ ಒಕ್ಕಲಮಗನದು ಭೂಮೆಮ್ಮನ ಮಕ್ಕಳು ಒಕ್ಕಲಿಗರು ಭೂಮಿ ಬೆಳೆದರೆ ಅರ್ಧವನ್ನು ಬ್ರಾಹ್ಮಣರಿಗೇಕೆ ಕೊಡಬೇಕು 1 ಆರೋರು ಹೊಲ ಮಾಡಬಾರದು ಮಾಡಿದರೆ ಬಲು ಪಾಪ ಮಾರಲಿ ನಮಗೆ ಮೂರಕ್ಕೆ ನಾಲ್ಕಕ್ಕೊ ಏನಲಾ ಯೀರ್ಕೆಂಪ 2 ಎರವು ಇಸ್ತೆ ಚೇಸ್ತಾನು ಒದ್ದಂಟೆ ವಾಡೆ ಪೋನಿ ವಲ್ಲ ಬಾ ಪ್ನೋಳ್ ಚೇನು 3 ಹೊಲಕುಯಿದು ಕಟ್ಟುವಾಗ ಛಲದಿ ಹಾರುವೈಯ ಬೇಗ ಒಕ್ಕಲಿಗನ ಕಾಯಬೇಕಂತಾನೆ ಬಲು ಭ್ರಾಂತನು ತಾನೆ4 ಕೊಳಗ ಕೊಡÀುವೆವೇಳು ನಮ್ಮಲ್ಲಿ ನಡೆಯದು 5 ಕಂದಾಯ ಕೊಡುವಮಟ್ಟಿಗೆ ಕಾಳುಕೊಟ್ಟರೆ ಸಾಕು ಮುಂದಲು ಬಾರಿಗೆ ಸಾವೇ ಹಾಕಿ ಮೂಗಳಕ್ಕೆ ಗುತ್ತಿಗೆಬೇಕು 6 ನಾವು ತಿಂದು ಮಿಕ್ಕದರೊಳಗೆ ಹಾರೋರಿಗೆ ಸರಿಪಾಲು ಕಾಲ ಕಳ್ವೋದೆ ಮೇಲು 7 ಹೆಂಡಿರು ಹಿಟ್ಟು ಹೊರಲಿಲ್ಲ ಈ ಪುಂಡುತನ ನಮ್ಮಲಿ ಸಲ್ಲಾ ಭಂಡಿಸೌದೆ ಬೇಕೆಂದು ಬರುತಾನೆ ಭಲೆ ಭಲೆ ಹಾರೋನೆ 8 ನಮ್ಮದುಕೇಳಲೆ ಇನ್ನು ಉಳುಮೆಯಿಲ್ಲ ಹಾರುವೈಯಂಗೆ ರಾಜಿನಾಮೆ ಕೊಡಲಿ ಬಿಡಲೆ 9 ಎಷ್ಟು ಧರ್ಮದೊಳಿದ್ದುರು ರೈತರು ಕಷ್ಟಪಡುವರು ನಾವೆ ಬಿಟ್ಟಿ ಹಾರುವಯ್ಯ ಬಲ್ಲೆನೆ ಗುರುರಾಮವಿಠಲಗಾಗಲಿ ಸೇವೆ 10
--------------
ಗುರುರಾಮವಿಠಲ
ದೇಶ ತಿರುಗಿಸಿ ಪರದೇಶಿ ಮಾಡಲು ಬೇಡೋ ಈಶ ನೀ ಘನ್ನಾ ಸಂಪನ್ನಾ ಪ ಜನಕನಂಶದಿ ಧ್ರುವನು ಸನುಮತವ ಮಂಡಿಸಲು ಘನರೋಷ ತಾಳಿ ಮಲಜನನಿ ಧೂರ್ತೆ ದೂಡಲು ವನವಾಸ ಲೇಸೆಂದು ತಿಳಿದು ನಿನ್ನ ನೆನೆಯೆ ತಾ ನಡೆದ ಘನಮಹಿಮ ಶ್ರೀಮನ್ನಾರಾಯಣ ಸ್ಥಿರಪಟ್ಟವ ನಾಡಿದ 1 ಖಳ ಕುರುಪಗೊಡೆತನವು ಭಲೆ ಧರ್ಮಗೆ ವನವಾಸವು ಬಲು ಮಾನವಂತೆ ದ್ರೌಪದಿಯು ಜಲಜನಾಭನೆ ನೀನೆ ಗತಿಯೆನಲು ಒಲಿದು ಬೆಂಬಲನಾಗಿ ಪಾಂಡವರ ಪೊರೆದೆ 2 ವರಮುನಿಯ ಶಾಪದಿಂದರಸನಿಂ ಪ್ರದ್ಯುಮ್ನ ಕರಿರಾಜನಾಗಿ ಮಡುವೊಳು ಕ್ರೀಡಿಸೆ ಭರದಿ ನೆಗಳಿಯು ಪೀಡಿಸೆ ಶ್ರೀ- ಹರಿಯೆಂದು ಮೊರೆಯಿಡÀಲು ಶ್ರೀ- ಕರದಿಯುದ್ಧರಿಸಿದೆ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1 ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2 ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3 ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4 ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5
--------------
ಕನಕದಾಸ
ಶ್ರೀನುತ ಕರವರ ಗೀತಾವಾದಿ ಪರಮ ದಯಾಳು ಗುರೋ ಪ ಜಲಚರರೂಪದಿ ವೇದವ ತಂದಿರೆ ಮತ್ಸ್ಯನೆನಿಸಿದೆಯೋ ಬಲವಂತನೆನಿಸಿಯದ್ರಿಯ ನೆತ್ತಿದಿ ಬಲುಘನ ಕಚ್ಛಪಾದಿ ನೆಲಸಿದ ಭೂಗೋಲವನಾಸದಿ ಭಲೆ ವರಾಹವತಾರಿ ಸ್ಮರಿಸಲು ತಕ್ಷಣದಿ 1 ವಟುವಾಗಿ ಬಲಿಯನ್ನಿಳಿಗೊತ್ತೀದಿ ದಟಹರ ವಾಮನನಹುದೋ ಹಟದಿ ಮಾತೆಯ ಶಿರವಾರಿಸಿದಿ ಭಟ ಪರಶುರಾಮ ನೀನು ಕುಟಿಲ ದುಶ್ಶಾಸನ ಧ್ವಂಸಗೈದಿ ಪಟು ರಾಮನೆನಿಸಿದೆಯೋ ಶಠರ ಸಂಹರಿಲು ಶ್ರೀ ಕೃಷ್ಣನೆನಿಸಿದಿ ನಿಟ್ಟಿಪುದೀಗೆನ್ನ ಕೃಪಾನಿಧಿ 2 ತರುಣಿ ವೃಂದದ ವ್ರತವನ್ನಳಿದಿ ಪರಮ ಬೌದ್ಧನಹುದೋ ಕರದ ಖಡ್ಗದಿ ದನುಜರನಳಿಸಿ ವರ ಕಲ್ಕಿರೂಪ ನೀನು ಪರಬ್ರಹ್ಮ ಪುಟ್ಟುವಿ ಜವದಿ ಪೊರೆಯುವಿ ನುತಿಪರನಾ ಕಾರುಣ್ಯನಿಧಿ 3
--------------
ನರಸಿಂಹವಿಠಲರು
ಸಾಕಲಾರದಿರೆ ಎನ್ನ ಯಾಕೆ ಪುಟ್ಟಿಸಿದ್ಯೊ ಹರಿಯೆ ಪ ಬೇಕು ಬೇಡದಿದ್ದರೆ ನಿನಗೆ -----ಯುಗ ಜನರೊಳೆನ್ನಾ ಅ.ಪ ಹಿಂದಿನಿಂದ ಬಂದಾ ದೋಷಗಳಿಂದ ನಾನು ಬಹಳ ಬೆಂದು ಬಳಲುತ ನಿನ್ನ ಪಾದವ ಹೊಂದಿ ನಿನ್ನ ಸೇರೆ ಬಂಧು ಬಳಗ ನೀನೆ ಇನ್ನು ಎಂದು ಮೊರೆಯ ಇಡಲೂ ತಂದೆ ತಾಯಿಗಳು ಕಂದನ ಪೊರೆದಂತೆ ಮಂದರಧರ ಶ್ರೀ ಮಾಧವ ಕೃಷ್ಣಾ 1 ವಸುಧೆಯೊಳಗೆ ನಿನ್ನ ಬಿಡದೆ ಮನಸಿನಲಿ ಸ್ತುತಿಸುವಾ ಪಶುಪತಿ ಪಾಲಕನೆ ಎನ್ನ ಪಾಲಿಸೊ ಕೈ ಹಿಡಿದೂ ಶಿಶುವಿನಂದ ನಿನ್ನ ನಿಜ ಸೇವಕ ಜನರಂತೆ ಸೂನುವು ಎನಗೆ ಅಡಗಿಸಿ ರಕ್ಷಿಸಿದರೆ ವಸುಧೆಯೊಳಗೆ ಎನ್ನ 2 ಎಲ್ಲ ಜನಕೆ ಇನ್ನು ಕರ್ತನಲ್ಲವೇನೊ ನೀನು ಎಲ್ಲರಂತೆ ಎನ್ನಾ ಕರುಣಿಸಿ ಯಾಕೆ ನೋಡವಲ್ಲೆ ಹೊಲ್ಲನೊ ನಾ ನಿಮಗೆ ನಿಮ್ಮ ಧ್ಯಾನದಲ್ಲಿರುವನಲ್ಲೊ ಭಲೆ `ಹೆನ್ನೆ ವಿಠ್ಠಲನೆ' ನೀನಿಷ್ಟು ಭಾಗ್ಯವಂತ ನಾಗಿ ಬಡವನ ನೋಡಿ 3
--------------
ಹೆನ್ನೆರಂಗದಾಸರು
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮ ಸುಖವು ಧ್ರುವ ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲ ಸರ್ಪದ ಹೆಡೆಯ ನುಂಗಿದದು ನೋಡಿ 1 ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ2 ದಿವ್ಯ ಯೋಗದ ಮಾತು ಕಿವಿ ಇಲ್ಲದವಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವು ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯಿಂದ ಮನದೊಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು