ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ಮುಗಿವೆ ಗುರುರಾಯ ಶರಣು ಜಗ- ದಯ್ಯನೆ ಬಾಹುಲೇಯ ಪ. ಒಯ್ಯನೆ ಬಿನ್ನಪ ಗೈಯುವೆ ಕರುಣಾಳು ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯ ಅ.ಪ. ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ ಉತ್ತಮೋತ್ತಮ ಗುಣವ ಪಾಲಿಸು ಭಕ್ತವತ್ಸಲ ಭಯನಿವಾರಣ ಸತ್ಯಮಾರ್ಗದಿ ನಡೆಸು ಶಂಕರ- ಪುತ್ರ ಪುಣ್ಯಚರಿತ್ರಭರ್ತನೆ 1 ತಾಮಸಗುಣಗಳು ಪರಿಹರಿಸು ನಿ- ಸ್ಸೀಮ ಮಹಿಮನೆ ನೀನು ಶ್ರೀ ಮನೋರಮನಿಷ್ಠೆ ಸಜ್ಜನ- ಸ್ತೋಮಸಂಗವನಿತ್ತು ದುರ್ಜನ- ಸೀಮೆಯೊಳು ಪೊಕ್ಕಿಸದಿರೆನ್ನ ಸು- ಧಾ ಮಯೂಖಾಸ್ಯನೆ ಮಹೇಶನೆ 2 ಭೂಮಿಗಧಿಕವೆನಿಪ ಪಾವಂಜಾಖ್ಯ ಗ್ರಾಮಾಧಿಪತಿ ನಿಷ್ಪಾಪ ಯೋಗಿ ಲ- ಲಾಮ ಲಕ್ಷ್ಮೀನಾರಾಯಣನ ಮ- ಹಾಮಹಿಮೆಯನು ಪೊಗಳಿ ಹಿಗ್ಗುವ ಕೋಮಲಾಂಗ ಸುಮಂಗಲಪ್ರದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೈಯ ಮುಗಿವೆ ಗುರುರಾಯ ಶರಣು ಜಗ- ದಯ್ಯನೆ ಬಾಹುಲೇಯ ಪ. ಒಯ್ಯನೆ ಬಿನ್ನಪ ಗೈಯುವೆ ಕರುಣಾಳು ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯಅ.ಪ. ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ ಉತ್ತಮೋತ್ತಮ ಗುಣವ ಪಾಲಿಸು ಭಕ್ತವತ್ಸಲ ಭಯನಿವಾರಣ ಸತ್ಯಮಾರ್ಗದಿ ನಡೆಸು ಶಂಕರ- ಪುತ್ರ ಪುಣ್ಯಚರಿತ್ರಭರ್ತನೆ 1 ತಾಮಸಗುಣಗಳು ಪರಿಹರಿಸು ನಿ- ಸ್ಸೀಮ ಮಹಿಮನೆ ನೀನು ಶ್ರೀ ಮನೋರಮನಿಷ್ಠೆ ಸಜ್ಜನ- ಸ್ತೋಮಸಂಗವನಿತ್ತು ದುರ್ಜನ- ಸೀಮೆಯೊಳು ಪೊಕ್ಕಿಸದಿರೆನ್ನ ಸು- ಧಾ ಮಯೂಖಾಸ್ಯನೆ ಮಹೇಶನೆ 2 ಭೂಮಿಗಧಿಕವೆನಿಪ ಪಾವಂಜಾಖ್ಯ ಗ್ರಾಮಾಧಿಪತಿ ನಿಷ್ಪಾಪ ಯೋಗಿ ಲ- ಲಾಮ ಲಕ್ಷ್ಮೀನಾರಾಯಣನ ಮ- ಹಾಮಹಿಮೆಯನು ಪೊಗಳಿ ಹಿಗ್ಗುವ ಕೋಮಲಾಂಗ ಸುಮಂಗಲಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ. ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ 1 ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ 2 ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ 3
--------------
ಮೋಹನದಾಸರು
ಪೋಗುವೆನೆ ರಂಗ ಪೋಗುವೆನೆ ಕೃಷ್ಣ ಈಗ ಕರೆ ಬಂದಿದೆ ಮಧುರಾ ಪುರಕ್ಕೆ ಪ. ಮದಿಸಿದ ಕಂಸನು ಚದುರ ಅಕ್ರೂರನ ಮುದದಿ ಕಳಿಸಿದ ಮಧುರ ವೇಣಿಯೆ ಕೇಳೆ 1 ಬಿಲ್ಲು ಹಬ್ಬವಂತೆ ಮಲ್ಲರ ಗೆಲ್ಲಬೇಕಂತೆ ಸಖಿ ಪುಲ್ಲಲೋಚನ ಕೃಷ್ಣಾ ಇಲ್ಲಿ ನÀಮ್ಮನು ಬಿಟ್ಟು 2 ಕಂಗೊಳಿಸುವ ಬೆಳದಿಂಗಳ ಸೊಗವಿಲಿ ಪೊಂಗೊಳಲೂದೆಮ್ಮಂಗಕೆÉ ಹರುಷವಿತ್ತ3 ನಲಿವಿಲಿ ಮೀಸಲು ಬೆಣ್ಣೆಯನಿಡಲು ನಿಲುಕಿತ ಮೆದ್ದೆಮ್ಮ ಒಲವಿತ್ತುದ್ದರಿಸಿದ 4 ಗೋಕುಲವೇತಕೆ ಆ ಕಮಲಾಕ್ಷನಾ ಕಟಾಕ್ಷವಿಲ್ಲದೀಪರಿ ಸಹಿಪುದೆ 5 ಯಮುನೆಯ ತೀರದೊಳ್ ಎಮ್ಮಯ ವಸ್ತ್ರವ ಕ್ಷಮೆಯಿಂದಿತ್ತ ಕಮಲನಯನ ಕೃಷ್ಣ 6 ರಥಬಂದಿದೆ ನೋಡೆ ಅತುಳ ಮಹಿಮಗೆಂದು ಜತೆಯೊಳು ಬಲರಾಮ ಹಿತದಿ ಅಕ್ರೂರ ಸಹ 7 ಬಿಟ್ಟಿರಲಾರೆವೆ ಪುಟ್ಟ ಕೃಷ್ಣನ ಪಾದ ದಿಟ್ಟ ಶ್ರೀ ಶ್ರೀನಿವಾಸಗಿಷ್ಟವಂತೆ ಕೇಳೆ 8 ಭಕ್ತವತ್ಸಲನೆಮ್ಮ ಭರ್ತನೊಳನುರಾಗವಿತ್ತು ಬಾಳಿರೆಂದು ಇತ್ತು ವಚನವನ್ನು 9
--------------
ಸರಸ್ವತಿ ಬಾಯಿ
ಹರಿಯೇ ಗತಿ ಭರ್ತನು ಜಗಕೇ|ನರ ಹರಿಯೇ ನೆಂಟ ಭಕುತ ಜನಕೇ ಪ ಆರು ಸಲಹುವರ ನಾಥ ದೀನಜನ| ಘೋರಪಾತಕಿ ಬಧಿರಾಂಧರನು| ವಾರಿಜಾಸನ ಮುಖ್ಯ ದೇವತೆಗಳಲಿ|ವಿ ಚಾರಿಸೆ ಅನ್ಯದೊರೆಗಳುಂಟೆ 1 ಕಮಲ ಬಾಂ ಧವ ವರುಣರು ಮೃತ್ಯುಗಳೆಲ್ಲ| ಭಾವಿಸೆ ನೇಮದಲಿರುತಿಹರು 2 ಅವನ ರೋಮರೋಮದಿ ಬ್ರಹ್ಮಾಂಡವು | ಅವುದುಂಬರ ಫಲದಂತಿಹುದು | ಭುವನದಿ ಗುರುಮಹೀಪತಿ ಸ್ವಾಮಿಯು ಜಗ ಕಾವ ಕೊಲುವ ನಿರ್ಮಿಸುತಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು
ಸ್ನಾನ ಮಾಡಿರಯ್ಯ ಜಾÕನತೀರ್ಥದಲಿನಾನು ನೀನೆಂಬಹಂಕಾರವ ಬಿಟ್ಟು ಪ.ತನ್ನೊಳು ತಾನೆ ತಿಳಿದರೊಂದು ಸ್ನಾನಅನ್ಯಾಯಗಾರಿ ಕಳೆದರೊಂದು ಸ್ನಾನಅನ್ಯಾಯವಾಡದಿದ್ದರೊಂದು ಸ್ನಾನಚೆನ್ನಾಗಿ ಹರಿಯ ನೆನೆದರೊಂದು ಸ್ನಾನ 1ಪರಸತಿಯ ಬಯಸದಿದ್ದರೆ ಒಂದು ಸ್ನಾನಪರನಿಂದೆ ಮಾಡದಿದ್ದರೆ ಒಂದು ಸ್ನಾನಪರದ್ರವ್ಯ ಅಪಹರಿಸದಿರೆ ಒಂದು ಸ್ನಾನಪರತತ್ವತಿಳಿದುಕೊಂಡರೆ ಒಂದು ಸ್ನಾನ2ತಂದೆತಾಯಿಗಳ ಸೇವೆ ಒಂದು ಸ್ನಾನಮುಂದಿನಮಾರ್ಗ ತಿಳಿದರೊಂದು ಸ್ನಾನಬಂಧನವನು ಬಿಡಿಸಿದರೊಂದು ಸ್ನಾನಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ 3ಅತ್ತೆ ಮಾವನ ಸೇವೆಯೊಂದು ಸ್ನಾನಭರ್ತನ ಮಾತು ಕೇಳುವುದೊಂದು ಸ್ನಾನಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನಪಾರ್ಥಸಾರಥಿ ನಿಮ್ಮ ಧ್ಯಾನವೆ ಧ್ಯಾನ 4ವೇದ ಶಾಸ್ತ್ರಗಳನೋದಿದರೊಂದು ಸ್ನಾನಭೇದಾಭೇದ ತಿಳಿದರೊಂದು ಸ್ನಾನಸಾಧು ಸಜ್ಜನರ ಸಂಗ ಒಂದು ಸ್ನಾನಪುರಂದರವಿಠಲನ ಧ್ಯಾನವೆ ಸ್ನಾನ 5
--------------
ಪುರಂದರದಾಸರು