ಒಟ್ಟು 11 ಕಡೆಗಳಲ್ಲಿ , 4 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಕೀಕುವರ ನವಘನಸುಂದರ ಭಾವಜ ಜನಕ ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ ನಿರುಪಮ ಚರಿತ ವರಗುಣ ಭರಿತೇ ಮರಕತಮಣಿ ಮಾಲಾಹಾರ ಸಂಶೋಭಿತೇ ಸುರಗಂಗಾಸುತ ರಾಜಿತಮೌನಿಯುತೇ ವೈರಿಕುಲ ಭಂಜನ ಪಾಂಡವ ಮಿತ್ರೇ1 ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ ಶ್ರೀ ಮಾಂಗಿರಿವರ ಭಾವಕಜನಪರಿವಾರ ಶುಭಂಕರೇ ರೇವತೀರಮಣಾ ನಂದಕರೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸೋಜ್ವಲ ಭರಿತೇ ಶೃತಿ ಸ್ಮøತಿ ವಿಖ್ಯಾತೆ ಅತಿಶಯ ಸುಖ ಚರಿತೆ ನುತ ಗುಣ ಗಣ ಮಂಡಿತೆ ಮಹಾಪಯೋನಿಧಿಸುತೆ ಶ್ರೀ ಹರಿ ಮನೋವ್ರತೆ ಮಹಿಪತಿಸುತ ದೈವತೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತುಳಸೀ ಸ್ತುತಿ ಮಾಧವ ಹೃದಯೆ ಪ ಪೀತಾಂಬರಧರ ಶ್ರೀಹರಿಜಾಯೆ ಅ.ಪ [ಸುಂದರ] ಮಣಿಮಯಸದನೆ ಪರಮಪಾವನೆ ಇಂದೀವರದಳ ಕೋಮಲನಯನೆ 1 ಪ್ರೇಮರಸಾನ್ವಿತೆ ಗುಣಭರಿತೇ ಶ್ರೀಮಾಂಗಿರಿವರ ರಂಗಮಹಿತೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯಾಂಶು ಭೂಮಿಸುತೇ ಪುಷ್ಪಮಾಲಾ ಶೋಭಿತೇ ಪನೀಲ ಮೇಘಶ್ಯಾಮ ಮಹಿತೇ ಶ್ರೀಪ್ರಬಂಧ ವಿಲಸಿತೇ ಅ.ಪವಿಷ್ಣುಚಿತ್ತ ಪರಿಪೋಷಿತೇ ಕೃಷ್ಣ ಸುಧಾಮೃತ [ವಿಸ್ತ]ರತೇಕೃಷ್ಣಭಕ್ತ ಸ್ತುತಿಭಾಜಿತೇ ವಿಷ್ಣುಲೋಕದಾತೆ ಮಾತೇ 1ಮಂಗಳಾಂಗಿ ಸುಗುಣಭರಿತೇಇಂಗಿತಾರ್ಥದಾತೆ ಪ್ರೀತೆರಂಗನಾಯಕೀ ಸಮೇತ ಮಾಂಗಿರೀಶ ದಯಿತೇ ಮಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ಕಂಡೆನು ಪಾರ್ವತಿಯಾ | ಮೈಸೂರ |ಚಾಮುಂಡೇಶ್ವರಿಯಾ ಪಕಂಡೆನು ಕರುಣದಿ ಭಕ್ತರ ಪಾಲಿಪ |ಚಂಡಿಕರಾಳಿಯ ಪುಂಡರೀಕಾಕ್ಷಿಯ ಅಸುತ್ತಲು ಜ್ಯೋತಿಗಳ | ಹೊಳೆಯುವ |ಮುತ್ತಿನ ಕಾಂತಿಗಳೂ ಚಕೆತ್ತಿದ ನವಮಣಿರತ್ನದಿ ಶೋಭಿಪ |ಉತ್ತಮ ಕನಕಾಭರಣ ಭವಾನಿಂiÀi 1ಸಹಸ್ರಾಯುಧಭರಿತೇ | ನೀಕ್ಷಿಸೆ |ಸಹಸ್ರ ಹಸ್ತದಾತೇ |ಸಹಸ್ರರೂಪದಿ ಜಗವನು ಪಾಲಿಪ |ಸಹಸ್ರನಾಮದ್ವಯ ಸಹಸ್ರಲೋಚನೆಯ 2ಸಂಭ್ರಮದಲಿ ಚಂಡಾಮುಂಡರು |ಡೊಂಬಿಯೊಳ್ ಪ್ರಚಂಡಾ- |ರೆಂಬಾ ದೈತ್ಯಕದಂಬವ ಖಂಡಿಸಿ |ಕುಂಭಿüüನಿಗಿಳುಹಿದ ಶಾಂಭವೆ ಶಕ್ತಿಯ 3ರಾಜ ಕುಲಕೆ ದೀಪಾ | ಮೈಸೂರ್ |ರಾಜ ಕೃಷ್ಣ ಭೂಪಾ |ರಾಜನು ದಿನ ದಿನ ಪೂಜಿಸಿ ನಮಿಸುವ |ರಾಜ ರಾಜಗಿರಿರಾಜಕುಮಾರಿಯ 4ಚಂದ್ರಕೋಟಿವದನೇ | ಶೋಭಿಪ |ನಂದಕುಂದರದನೇ |ಮಂದಗಮನೆ ಗೋವಿಂದನ ಪೂಜಿಪಚಂದಿರಧರನರ್ಧಾಂಗಿಯ ಚರಣವ ||ಕಂಡೆನು||
--------------
ಗೋವಿಂದದಾಸ
ನಾಗರಾಜ ನರಸುರ ನಮಿತೇ |ಸಾಗರ ಕರುಣೀ ಸರಸ್ವತೀ ||ಕೋಗಿಲ ಗಾನವಿನೋದಿತೇ ಬೇಗನೆವರಗಳ ಕೊಡು ಮಾತೇ ಪಶೃಂಗೇರಿ ಪುರವರ ನಿಲಯೇ |ಮಂಗಲಚರಣೆ ಶಾರದೆಯೇ |ಭೃಂಗಕುಂತಲೆಭವಭಂಗನಿವಾರಿಣಿ |ರಂಗನ ಸುತನರ್ಧಾಂಗಿಯೆ ರಕ್ಷಿಸು 1ಪುಸ್ತಕಹಸ್ತಜಗದ್ಭರಿತೇ ಉತ್ತಮಳೆಮಕುಟಾನ್ವಿತದಾತೇ |ಪೃಥ್ವಿಪಾಲ ಮನದರ್ಥಿಯ ಸಲಿಸುವ |ಸ್ವಸ್ತಿಶ್ರೀಮನ್ಮಥನತ್ತಿಗೆ ಶಾರದೆ 2ಕುಂದಮಂದಾರಪುಷ್ಪಗಳ |ಚಂದಣ ಕುಂಕುಮ ಗಂಧಂಗಳಮಂದಗಮನೆ ಅರವಿಂದನಯನೆ ಗೋವಿಂದನ ಸೊಸೆಗಾನಂದದೊಳರ್ಚಿಸಿ 3
--------------
ಗೋವಿಂದದಾಸ
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
--------------
ಗೋವಿಂದದಾಸ
ಪಾಹಿಪಾರ್ವತೇ | ಪಾಲಿಸೆನ್ನ ಮಾತೇ ಪಪಾಹಿಲೋಕಭರಿತೇ |ಪಾಹಿಸುಗುಣ ಚರಿತೆ ||ಪಾಹಿಸುಂದರ ಖ್ಯಾತೆ |ಪಾಹಿಶಂಭು ಪ್ರೀತೆ 1ದೇವಿ ನಿನ್ನಪಾದ| ಸೇವೆಮಾಳ್ಪ ಮೋದ- |ನೀವುದೆನಗೆ ಸದಾ | ಮನ್ನಳೆ [?]2ನಾರದಾದಿವಂದ್ಯೆವಾರಿಜಾ ಸುಗಂಧೆಗೋವಿಂದದಾಸನ | ಪಾಲಿಸಂಬಾದೇವಿ 3
--------------
ಗೋವಿಂದದಾಸ
ಮಂಗಳ ಪದಗಳು391ಕೋಲು ಕೋಲೆನ್ನಿರೆ ರನ್ನದ ಕೋಲು ಕೋಲೆನ್ನಿರೇಕೋಲು ಕೋಲೆಂದು ರನ್ನದಕೋಲಧರಿಸಿನಿಂದುಲೋಲಾಕ್ಷಿ ದೇವಿ ಚರಿತೆಯ ಸ್ಮರಿಸುತ್ತ ರನ್ನದಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಲೋಲಾಕ್ಷಿ ದೇವಿ ಚರಿತೆ ಸ್ಮರಿಸುತ್ತ ನಲಿದಾಡಿಪಾಲಿಸೆ ಧರೆಗೆ ವರವ ಕರದೀಗಳ್ ರನ್ನದಾ1ಆದಿದೇವಿಯು ಚತುರ್ವೇದ ಗರ್ಭನನಿತ್ಯಪಾದಸೇವೆಯ ಗೈವಳ್ ಮೋದದಿ ರನ್ನದಿಕೋಲು ಪಾದಸೇವೆಯ ಗೈವಳ್ಮೋದದಿ ಮಾಧವನ ಪೂಜಿಸಿ ನಮಿಸಿಕ್ಷೀರಾಬ್ಧಿಯೊಳ್ ರನ್ನದಾ2ಘೋರದಾನವರೆಲ್ಲ ಧಾರಿಣಿ ಬಾಧಿಸಲುವಾರಿಜೋದ್ಭವನಾರದಾದ್ಯರು ರನ್ನದಾವಾರಿಜೋದ್ಭವನಾರದಾದ್ಯರು ದೇವಿಯೊಳುದೂರಿಡೆಕೇಳಿಅಭಯವಿತ್ತಳು ರನ್ನದಾ3ಸುರರುದಾನವರೆಲ್ಲ ಶರಧಿಯ ಮಥಿಸಲುಅರವಿಂದಮುಖಿ ಲಕ್ಷ್ಮಿ ಜನಿಸಿದಳೆ ರನ್ನದಅರವಿಂದ ಮುಖಿಲಕ್ಷ್ಮಿ ಜನಿಸಲು ನಾರಾಯಣನರಸಿಯೆಂದೆನಿಸಿ ಮೆರೆದಳು ರನ್ನದಾ4ಅಘವಿನಾಶಿನಿ ಜಗದಾಂಬಿಕೆ ಕೀರವಾಣಿಸುಗುಣೆ ಸುಂದರಿ ಸುಶೀಲೆಯು ಫಣಿವೇಣಿನಗುವ ಮೊಗದ ಚಂದ್ರವದನೆಯು ರನ್ನದಾ5ದುಷ್ಟ ನಿಗ್ರಹರೆಂದು ಸೃಷ್ಟಿಗೆ ನಡೆತಂದುಶ್ರೇಷ್ಠಾದಿ ನೂರೊಂದು ರೂಪಾದಳ್ ರನ್ನದಾಶ್ರೇಷ್ಠಾದಿ ನೂರೊಂದು ರೂಪಾಗಿ ಶಿಕ್ಷಾ ರಕ್ಷಾಧ್ಯಕ್ಷಳೆನಿಸಿ ಖಡುಗ ಧರಿಸಿದಳ್ ರನ್ನದಾ6ಘೋರಮಹಿಷನ ಸಂಹಾರಕೆಂದು ಬಂದುಮಾರಾಂತು ರಣದಿ ದುರುಳನ ರನ್ನದಾಮಾರಾಂತು ರಣದಿ ದುರುಳನ ಮರ್ದಿಸಿಈರೇಳು ಜಗವಾ ಪೊರೆದಳು ರನ್ನದಾ7ಶುಂಭಾ ನಿಶುಂಭ ಖಳರೆಂಬ ದೈತ್ಯರ ಗೆಲಿದುಅಂಬುಜಾಲಯದಿ ನೆಲಸಿದಳ್ ರನ್ನದಾಅಂಬುಜಾಲಯದಿ ನೆಲೆಸಲು ಪೂಜಿಸಿದಕುಂಭಿನಿಸುರರಿಗೊಲಿದಾಳು ರನ್ನದಾ8ಚಂಡ ಮುಂಡಕರೆಂಬಘೋರದೈತ್ಯರನೆಲ್ಲತುಂಡು ತುಂಡಾಗಿ ಶಿರ ಖಂಡೀಸಿ ರನ್ನದಾತುಂಡು ತುಂಡಾಗಿ ಶಿರ ಖಂಡೀಸಿ ಮೆರೆದಳುಚಂಡಿ ಕರಾಳಿ ಚಾಮುಂಡಿಗೇ ರನ್ನದಾ9ರಕ್ತ ಬೀಜನಘೋರಶಕ್ತಿಯ ಪರೀಕ್ಷಿಸಿಮುಕ್ತಿ ಪಥವ ತೋರೆ ಮಾಂಕಾಳಿ ರನ್ನದಾಮುಕ್ತಿ ಪಥವ ತೋರೆ ಮಾಂಕಾಳಿ ಅರ್ಚಿಸಿದಭಕ್ತರಿಗೊಲಿದು ನಲಿದಳ್ ರನ್ನದಾ10ದೇವರಾಮನ ಸತಿಯಾಗಿ ಲಂಕೆಗೆ ಪೋಗಿರಾವಣಾದ್ಯರನೆಲ್ಲ ಕೊಲಿಸೀದಳ್ ರನ್ನದಾರಾವಣಾದ್ಯರನೆಲ್ಲ ಕೊಲಿಸೀದಳ್ ಸೀತೆಯು ತಾಪಾವಕನುರಿ ಹೊಕ್ಕಿ ಪೊರಟಳ್ ರನ್ನದಾ11ಸೃಷ್ಟೀಶ ಭೀಷ್ಮಕನ ತನುಜೆ ರುಕ್ಮಿಣೀದೇವಿಕೃಷ್ಣಮೂರ್ತಿಗೆ ಓಲೆ ಬರೆದಾಳು ರನ್ನದಾಕೃಷ್ಣಮೂರ್ತಿಗೆ ಓಲೆ ಬರೆದು ಒಲಿಸಿಕೊಂಡುಪಟ್ಟದರಸಿಯಾಗಿ ಬಾಳಿದಳು ರನ್ನದಾ12ಮಾನಿನೀಮಣಿಪದ್ಮಾವತಿಯು ಜಲಕೇಳಿಗೈದುಶ್ರೀನಿವಾಸನ ಕಂಡು ಸ್ಮರಿಸೀದಳ್ ರನ್ನದಾಶ್ರೀನಿವಾಸನ ಕಂಡು ಸ್ಮರಿಸಿ ಕಲ್ಯಾಣವೆಸಗಿತಾನೆ ವಿಷ್ಣುವ ಪೂಜೆಗೈದಳ್ ರನ್ನದಾ13ನವರಾತ್ರಿ ದಿನದಲಿ ನವದುರ್ಗಿ ರೂಪಿನಲಿನವಗಂಧ ಕುಂಕುಮಚಂದನಪುಷ್ಪಗಳಿಂದನವವಿಧ ಪೂಜೆ ಕೊಂಬಳ್ ರನ್ನದಾ14ಮಾರಿಪೂಜೆಯ ರಕ್ತ ಹಾರಕ್ಕೆ ಮನಗೊಂಬಾಕ್ರೂರಗಣಗಳೊಡ ಸೇರಿದಳ್ ರನ್ನದಾಕ್ರೂರಗಣಗಳೊಡ ಸೇರಿ ಧಾರುಣಿಯೊಳುಚಾರುವರ್ಣ ಪೂಜೆ ಕೈಕೊಂಬಳ್ ರನ್ನದಾ15ಸರ್ವಮಂಗಲ ಮಾತೆ ಸರ್ವಸಜ್ಜನ ಪ್ರೀತೆಸರ್ವ ಆಭರಣ ಭರಿತೇಯು ರನ್ನದಾಸರ್ವ ಆಭರಣ ಭರಿತೇಯು ಪೀತಾಂಬರನೆರಿಹಿಡಿದುಟ್ಟು ರನ್ನದಾ16ಹದಿನೆಂಟು ಪೌರಾಣದಿ ಮೆರೆವ ಈ ದೇವಿ ಚರಿತೆಹದಿನೆಂಟು ಪದವಾಗಿ ನುಡಿಸೀದಳ್ ರನ್ನದಾಹದಿನೆಂಟು ಪದದಿ ತಪ್ಪಿರಲು ತಿದ್ಯೋದಿದವರವಿಧವಿಧ ಮನದ ಬಯಕೆ ಒದಗುವಾದೆ ರನ್ನದಾ17ಮಂದಗಮನೆಧರಣಿಭಾರತಗ್ಗಿಸಿ ಬಂದುನಿಂದಾಳು ವಿಷ್ಣು ವಕ್ಷಸ್ಥಲದಲಿ ರನ್ನದಾನಿಂದಿರ್ದ ವಿಷ್ಣು ವಕ್ಷಸ್ಥಲದ ರಮೆಗೆ ಗೋವಿಂದದಾಸನು ಸರಿಸಿ ನಮಿಸೂವೆ ರನ್ನದಾ18
--------------
ಗೋವಿಂದದಾಸ