ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇವೆ ನರ ಪಶು ಕಾಣಿರ್ಯೋ | ಇದೇ ಮನದ ಸ್ಥಿತಿ ನೋಡಿರ್ಯೋ ಪ ಉದಯದಲೇಳುತ ಉದರದಿ ಧಾವತಿ | ಉದರ ತುಂಬಲು ನಿದ್ರಿಯ ಭರವು | ಮದದಲಿ ಭಯ ಕೊಟ್ಟಿಗೆಯಲಿ ಮಾಯದ | ಸದಮಲ ಪಾರದ ಬಂಧನವು 1 ಸಂಚಿತ ನೊಗ ಹೆಗಲಲಿ ಪೊತ್ತು | ಘನ್ನದುರಿತ ಘಸಣೆಯ ತಳೆದು | ತನ್ನ ಹಿತಾ ಹಿತ ಲೇಶವ ನರಿಯದೆ | ಕಣ್ಣೆವೆಯಿಕ್ಕದೆ ಡೋಕುವನು 2 ಗುರುವರ ಮಹಿಪತಿ ನಂದನ ಸ್ವಾಮಿಯು | ಹೊರೆವ ವಡಿಯನೆಂಬ ಗುರುತರಿದೇ | ಅನುದಿನ ಕಾವವ | ಸಿರಿಯ ಮದಾಂಧನ ನಂಬಿಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾರ್ವತೀದೇವಿಯ ಸ್ತುತಿ (ಮಂಗಳೂರು ಮಂಗಳಾದೇವಿ) ಮಹಾಮಾಯೆ ದಯದೋರೆಲೆ ತಾಯೆ ಪ. ಸದರದೊಳೆಬ್ಬಿಸುತಿದಿರಾದ ಮದನಾಂಬಾ ಮುದ ದಾಯಿ ಶುಭಪದದಾಯಿ 1 ದೇವತೆಗಳ ಸೇರಿರುವಾ ಮನೋಹರ ತನುವಾಗಿ ನಿಕರ ಮಹಿಷಾಸುರನಾ ಮೃಗಪತಿಗಮನಾ 2 ಖಂಡ್ಯಧಾರೆಯೊಳ್ದಿಂಡರಿದೂ ಖಂಡಿಸುತಾ ರಣ ಮಂಡಲದಿ ಬ್ರಹ್ಮಾಂಡ ನಿದಾನಿ 3 ತ್ರಿಗುಣಜಮಲವು ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು ಹರಿಪರವು ಮಹಭರವು ಮನದಿರವೂ 4 ರಕ್ಷಿಸು ಪುರುಕರುಣಿ ಕ್ಷಮೆಯಿಂದಂ ಭರಣಿ ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲಾಲಿ ನಿತ್ಯಾನಂದ ಲಾವಣ್ಯ ಕಂದ ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ. ಆದಿ ಮಧ್ಯಾಂತ ವಿದೂರನಾಗಿಹನ ವೇದಾಂತ ವೇದ್ಯ ವೈಭವ ಪಕ್ಷಿಗಮನ ತಾಪ ಕಳಿವವನ ಮೋದದಿ ಪಾಡಿ ತೂಗುವೆನು ಮಾಧವನ 1 ಈರಾರು ದಿಗ್ಗಜವೆಂಟು ಕಾಲುಗಳು ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು ಧಾರಾರೂಪ ಭಾಗೀರಥಿ ಸರಪಣಿ ಸೇರಿಸಿ ಡೋಲ ಶೃಂಗಾರ ಗೈಯುವೆನು 2 ನಿರ್ಮಲವಾದೇಳು ಹಲಿಗೆಗಳಿರುವ ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3 ಸೂರ್ಯ ಚಂದ್ರಮರೆಂಬ ಧಾರಾದೀಪಗಳು ತಾರಕಿಗಳು ಸುತ್ತಲಿರುವ ಚಿನ್ಹೆಗಳು ಭವ ಜಯ ಜಯವೆಂಬ ಭರವು ನೀರಜಾಲಯೆ ಕೂಡಿ ಪಾಡುವ ಸ್ವರವು 4 ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ ಪಾಟಲಾಧರ ಮುಕುರರಾಭ ಕಪೋಲ ನಳಿನ ಪತ್ರ ನೇತ್ರ ಜ- ಚಾಪ ಧಾಟಿ ಭ್ರೂಯುಗಳ 5 ಪೂರ್ಣ ಮಾಲಾನಂತ ಪೌರ್ಣಮಿಯ ವಿಧು ವರ್ಣ ಮುಖಾಬ್ಜಸುಪರ್ಣವರೋಹ ಕರ್ಣ ಹೀನ ಕಶಿಪೂ ಪರಿಶಯನ ದು- ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6 ಕಂಬು ಸುಗ್ರೀವ ವಿಲಂಬಿತ ವನಮಾಲ ಅಂಬುಜ ಚಕ್ರ ಗದಾಕರ ಹಸ್ತ ಕೌಸ್ತುಭ ಜಗ- ನಾಭ 7 ವಿತತ ರೇಖಾತ್ರಯಯುತಮೃದುದರ ಮಧ್ಯ ಗತ ಕಿಂಕಿಣೀ ಜಾಲ ಕಾಂಚಿ ಕಲಾಪ ಪೀವರೋರು ಸಂ- ಮೂರ್ತಿ 8 ಸಿಂಜನ ಜೀರ ರಂಜಿತ ಚರಣ ಕಂಜಾಂಕುಶಕೇತು ರೇಖಾಲಂಕರಣ ಮಂಜುಳ ಮೃದು ಪಾದತಳ ಮುಕ್ತಾಭರಣ ಸಂಜೀವನ ರಾಜ ಸಂಪ್ರೀತಿ ಕರಣ 9 ಔತ್ತಾನಪಾದಿಯನಾಧಾರಗೊಂಡು ನಿತ್ಯ ತೂಗಾಡುವ ತೊಟ್ಟಿಲ ಕಂಡು ಹಿಂಡು ಬಹು ತೋಷಗೊಂಡು ಸತ್ಯಭಾಮೆಯ ಕಾಂತನಾಡುವ ಚೆಂಡು 10 ಪತಿತ ಪಾವನ ಪರಮಾನಂದ ರೂಪ ಸತತ ತಾನೆ ಪರಿಹರಿಸುವ ತಾಪ ವಿತತ ಮಹಿಮ ವೆಂಕಟಾಚಲ ಭೂ ಗತಿಯಾಗಿ ತೋರುವ ತನ್ನ ಪ್ರತಾಪ 11
--------------
ತುಪಾಕಿ ವೆಂಕಟರಮಣಾಚಾರ್ಯ