ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧಾರಿಣೀ ಭವಘೋರ ದುಃಖ ನಿವಾರಿಣಿ ಪ. ಧಾರಿಣಿಯೊಳು ಕಾಣೆ ನಿನಗೆಣೆಯಾರ ನಾನೆಲೆ ಗೀರ್ವಾಣಿ ಪಾಲಿಸು ಗುಣಮಣಿ ಅ.ಪ ಕಾಳಿದಾಸನೆ ಮುಖ್ಯ ಕವಿತಾಲೋಲರೆಲ್ಲರು ಧರೆಯೊಳು ಜಯಶೀಲರೆನ್ನಿಸಿ ಮೆರೆಯಲು ಲೋಲಲೋಚನೆ ನಿನ್ನ ಕೃಪೆಯದಲ್ಲೇ ನುಡಿಭರದೊಳು ಬಂದು ತೋರುವುದೆನ್ನೊಳು 1 ಪುಸಿಯು ಬಾರದ ತೆರದೊಳೆಮ್ಮಯ ರಸನೆಯಲ್ಲಿರು ಸಂತತಂ ರಸವ ತೋರುತೆ ಸಂತತಂ ಎಸೆವ ಶೇಷಗಿರಿಶನಂಘ್ರಿಯ ಭಜಿಸಿ ಬದುಕೆಂದೆನ್ನುತೆ ವರವ ಪಾಲಿಸು ಸುಪ್ರಿತೆ 2
--------------
ನಂಜನಗೂಡು ತಿರುಮಲಾಂಬಾ
ಪವಮಾನ-ಪಾವನಾ ಜಗಜ್ಜೀವನ ಪ ಶಿವ ಖಗಪತಿ ಅಹಿಸುರ ವಂದಿತಪದ ಅ.ಪ ಸೇವಾ ಕೃಷ್ಣ ಸಾಧನಾ ಕಾವಕರುಣಿ ಕಿಂಪುರುಷ ಖಂಡಾಧಿಪ ಕಾವಳದೊಳು ನಿನ್ನವರನು ಕಾಯ್ದೆ ಭೂವಳಯದೊಳವಿದ್ಯೆಯನಳಿಸಿದ ಸದ್ವರ್ತನು ನೀನೆನ್ನನುದ್ಧರಿಸಯ್ಯ 1 ಶರಧಿ ಹಾರಿದೆ | ಕೌರವ ಕಲಿಯಾ ನೀ ಗದೆಯಿಂ ಛೇದಿಸಿದೆ ಧಾರುಣಿಯೊಳು ಯತಿಪುಂಗವನೆಂದೆನಿಸಿದೆ ನಿರುತದಿ ರಾಮರ ಕಾರ್ಯವ ಸಾಧಿಸಿ ವಿರಥರ ಮಾಡಿದೆ ಅತಿರಥರುಗಳ ಹರಿಸರ್ವೋತ್ತಮ ತರತÀಮ ಸತ್ತತ್ವಗ ಳರುಹಿದ ಸದ್ವರ್ತನು ನೀನೆ 2 ರಾಮಪದಕುಮುದಸೋಮ ಭೀಮಾ ರಿಪುಕುಲ ಧೂಮ ನಿಸ್ಸೀಮ ಶ್ರೀಮದಾನಂದಮುನಿ ಸಾರ್ವಭೌಮ ಭೂಮಿಜೆ ಕುರುಹ ಶ್ರೀರಾಮರಿಗರ್ಪಿಸಿ ಅ ಮಹ ಬಕ ಕೀಚಕರ ಸಂಹರಿಸಿ ತಾಮಸ ಗ್ರಂಥವನಳಿಸಿ ಜನಕೆ ಸದ್ಬೋಧೆ ಇತ್ತ ಗುರು ಪೂರ್ಣಬೋಧನೆ 3 ದ್ರೋಣಾಚಲವ ತಂದ ಪ್ರಾಣ ಎಣೆಯುಂಟೆ ಬಲದೊಳು ನೀನೆ ನಿಸ್ಸೀಮ ಕಾಣೆನೊ ಜಗದಿ ಪರಮಹಂಸರ ಪ್ರಾಣ ಪ್ರಾಣಿಗಳೊಳಗೆ ಮುಖ್ಯಪ್ರಾಣನೆಂದೆನಿಸಿದೆ ಕ್ಷೋಣಿಯೊಳು ಕುರುಸೇನೆ ಸಂಹರಿಸಿ ಕ್ಷೀಣವಾಗುತಲಿಹ ಸುಜನರ ಮನಸ ತ್ರಾಣ ಮಾಡಿ ಸತ್ಪ್ರಮಾಣಗಳಿತ್ತೆ4 ಋಜುಪುಂಗವ ದೇವಾ ಹನುಮಾ ಗಜಪುರಾಗ್ರಣಿ ಕೌರವನಿಗೆ ನೀ ಕಾಲಯಮ ಕುಲಿಶ ನಿಸ್ಸೀಮ ಅಜಪದ ಪಡೆದಿ ಶ್ರೀ ಆಂಜನೇಯನೆ ವಿಜಯಸಾರಥಿನೊಲಿಸಿ ಪೂಜಿಸಿ ಸೃಜಿಸಿ ಮರೆದೆ ಸಚ್ಛಾಸ್ತ್ರದಿಂದ ಈ ಚತುರ್ದಶಭುವನಾಚಾರ್ಯನೆನಿಸಿದೆ 5 ಖೂಳ ಅಕ್ಷಕುವರನ ಹರಿಸೆ ಖಳರ ಕಾಳೋರಗ ಬಾಧೆ ಲೆಕ್ಕಿಸದೆ ಖಳ ಭೂದೈತ್ಯರ ಬಾಧೆ ಹರಿಸಿದೆ ಬಾಲತನದಲಿ ಭಾನುಮಂಡಲ ಹಾರಿದೆ ಲೋಲತನದಿ ಸತಿಗೆ ಪೂವಿತ್ತೆ ಶೀಲಮೂರುತಿ ಮಾಯ ಜಾಲ ಹರಿಸಿ ಜಗಖ್ಯಾತನಾದೆ ಯತಿದಶಪ್ರಮತಿಯೆ 6 ಮಾರುತಿ ಧೀಮಂತಮೂರುತಿ ಭಾರತದಿ ಭೂಭಾರನಿಳುಹಿದ ಖ್ಯಾತಿ ಸಾರ ಶ್ರೀ ಬಾದರಾಯಣಗೆ ಅತಿಪ್ರೀತಿ ಅರಿಪುರ ವೈಶ್ವಾನರನಿಗರ್ಪಿಸಿ ವಾರಣಪುರದೊಳು ಅತಿರಥನೆನಿಸಿ ದುರ್ವಾದಿಮತ್ತಗಜಸಿಂಹನಾಗಿ ನೀ ನಿವ್ರ್ಯಾಜÀದ ಭಕ್ತಿಯ ಹರಿಗರ್ಪಿಸಿದೆಯೊ 7 ಹನುಮಾ ಭೀಮಾ ಆನಂದ ಮುನಿಪಾ ಆ ವಾನರಾಧಿಪಾ ಗಜಪುರಾಧಿಪ ಯತಿಪಾ ಧ್ಯಾನನಿರತ ರಾಮಪದದಿ ಮಾನಸದಲ್ಲಿ ಯದುಪತಿಯ ಪೂಜಿಸಿ ದೀನಜನರುದ್ಧಾರಮಾಡಿ ಸದ್ಬೋಧೆ ಯನಿತ್ತ ಮಧ್ವಮುನಿಯೆ 8 ರಾಮಾಲಿಂಗನ ಮಾಡಿದಾ ರೋಮ ರೋಮಕೆ ಕೋಟಿಲಿಂಗವ ಸೃಜಿಸಿದಾ ಶ್ರೀಮಧ್ಯಗೇಹಾರ್ಯಸೂನುವೆಂದೆನಿಸಿದಾ ಆ ಮಹಾರ್ಣವ ಲಂಘಿಸಿದಾ ಧೀರಾ ಭೀಮಭಯಂಕರ ದ್ರೌಪದೀಪ್ರಿಯಕರ ಈ ಮಹಿಮೆಯೊಳಾರೆಣೆಯೋ ನಿನಗೆ ನಿ ಸ್ಸೀಮನಹುದೋ ಯತಿಸಾರ್ವಭೌಮನೆ 9 ಸುರಜೇಷ್ಠಾನಸ್ತ್ರ ಮಾನಿಸಿದಾ| ಜರೆಯನ ಸೀಳಿ ನಿರಪರ ಸೆರೆಯ ಬಿಡಿಸಿದಾ ಧರೆಯೊಳ್ ಸುರಶ್ರೇಷ್ಠನೆಂದೆನಿಸಿದಾ ಭರದೊಳು ಭರತೆಗೆ ಕುಶಲವ ತಿಳಿಸಿ ಕರುಳಮತಿಯಿಂ ಸತಿಯ ಸಂತೈಸಿ ದುರುಳ ಭಾಷ್ಯಂಗಳ ತತ್ತ್ವವನಳಿಸಿದಾ ಪರಮದಯಾಂಬುನಿಧಿ ಶ್ರೀಮದಾನಂದ 10 ರಕ್ಷಕ ನೀನೆ ಸಜೀವ ಲಾಕ್ಷ್ಯಾಗಾರದ ಬಾಧೆÉಯಿಂ ರಕ್ಷಿಸಿ ಮೆರೆದಯ್ಯ ಈ ಕ್ಷಿತಿಯೊಳು ದೈತ್ಯ ಶಿಕ್ಷಕನೆನಿಸಿದೆ ತಕ್ಷಣ ಸಿಂಹಿಕೆ ಕುಕ್ಷಿಯ ಸೀಳ್ದೆ ಭಿಕ್ಷೆಯಿಂದ ನಿನ್ನವರನು ಕಾಯ್ದೆ ದಕ್ಷನಹುದೊ ನೀನಚ್ಯುತ ಪ್ರೇಕ್ಷರಿಂ ದೀಕ್ಷೆಯ ವಹಿಸಿ ಸತ್ಸಿಕ್ಷಕನಾದ್ಯೊ 11 ನೀ ರಂಜಿಸಿ ಮೆರೆದೆಯೊ ಗುರು ಮಧ್ವಾರ್ಯ ಧೀರ ಕೇಸರಿಕುವರ ಪುರುಷಾಮೃಗವ ಸಾಧಿಸಿ ತಂದ ಶೂರ ಈ ಧರಾವಲಯದಿ ತೋರಿದೆ ತತ್ವಸಾರ ತೋರಿ ಭಕ್ತಿ ಶ್ರೀರಾಮರ ಪದದಿ ಕಂ ಸಾರಿಯ ಸೇವಿಸಿ ಭಾರವನಿಳುಹಿದೆ ಸಾರಿದೆ ಹರಿಸರ್ವೋತ್ತಮ ತರತಮಭೇದವನರುಹಿದ ಪರಮದಯಾಳೊ12 ಅಂಜನೆ ಕುವರಾ ಧೀರಾ ಕುಂಜರಪುರದ ಅರಿಗಳಂಜಿಸಿದ ಶೂರ ಧರಣಿ ದುರ್ಮದಾಂಧರ ದುರ್ವಾದ ಪಂಕಜೋದ್ಭವನ ಪದವ ಪಡೆವೆ ನೀ ಅಂಜದೆ ಗದೆಯಿಂ ಕೊಂದೆ ಕುರುಪನ ಮಂಜುಳವಾಣಿಯ ಜಗಕೆ ಇತ್ತು ನೀ ರಂಜಿಸಿ ಮರೆದೆಯೊ ಗುರುಮಧ್ವಾರ್ಯ 13 ರೋಚಕ ನಾಮಕನೆನಿಸಿ ಪು ರೋಚನನ ಕಾರ್ಯವನೆಲ್ಲಾ ಕೆಡಿಸಿ ಪಾಜಕ ಕ್ಷೇತ್ರ ಪವಿತ್ರ ಮಾಡಿದೀ ಖೇಚರಮಾರ್ಗದಿ ನೆಗಹಿ ನಿ ಶಾಚರರೆÉಲ್ಲರ ಸದೆದೆ ಗದೆಯಿಂ ಸೂಚಿತ ಗ್ರಂಥ ವಿರಚಿಸಿ ಜಗಕೆ ನೀ ಗೋಚರಿಸಿದೆಯೊ ತ್ರಿಜಗಾಚಾರ್ಯ 14 ರಣದೊಳು ಘುಣಿವಿರೂಪಾನೆತ್ತಿದೆ ಬಾಣಸಿಗನೆನಿಸಿ ಮತ್ಸ್ಯದೇಶವ ಸೇರ್ದೆ ಕ್ಷೋಣಿಯೊಳು ಗುಣವಾರಿಧಿ ಎನಿಸಿದೆ ಗಣನೆ ಇಲ್ಲದೆ ಗಿರಿಯನೆಗಹಿದೆ ಹಣಿದೆ ಹಿಡಿಂಬಾಸುರನ ಸೀಳಿದೆ ಮಣಿಮಂತಾದಿ ದುರಾತ್ಮರಿಗೆ ನೀನಂತಕನೆನಿಸಿದೆ ಶಾಂತಮೂರುತಿಯೆ15 ವಿಜಯರಥಕೆ ನೀ ಕೇತುನಾಥ ವಿಜಯಸಾರಥಿಯಾ ದೂತ ವಿಜಯದಶಮಿಯೊಳ್ ಜನಿತ ಸೋಜಿಗ ತೋರಿ ಸಂಜೀವನ ತಂದೆ ಆ ಜಗಜಟ್ಟಿಗಳೆಲ್ಲರ ಸದೆದೆ ಈ ಜಗದೊಳು ಸರಿಗಾಣೆ ಜಗದೊ ಳು ಜಗದ್ಗುರುವಹುದೋ ನೀ ಗುರುಪೀಳಿಗೆಗೆ16 ಮಂಗಳಮೂರುತಿ ಮಾರುತಿ ಸೌಗಂಧಿಕ ನೆವದಿ ಮರುತನೊಳ್ ನೀ ಸೆಣೆಸಿದಿ ಶೃಂಗಾರ ಗೋಪಿನಂದನನ ಸ್ಥಾಪಿಸಿದೆ ಭಂಗಿಸಿ ವನವನು ಉಂಗುರವನು ತಂದೆ ಸಂಗರ ಹನುಮನೊಳ್ ನೀಡಿ ಮೋಹ ತೋರ್ದೆ ಅಂಗಜಪಿತನ ಇಂಗಿತವರಿತು ಭಂಗಿಸಿದೆಯೊ ದುಶ್ಯಾಸ್ತ್ರಂಗಳನು 17 ಕೇಸರಿ ಕ್ಷೇತ್ರ ಜನಿತಾಭೂಸು ರ ಸುತನ ಭೀತಿಯ ನೀ ಬಿಡಿಸಿದೆ ವಸುಮತಿಯೊಳು ಸುರಶ್ರೇಷ್ಠನೆಂದೆನಿಸಿದೆ ಕೋಸಲನಗರಾಧೀಶನ ಪ್ರೀಯ ವಾಸುದೇವಗರ್ಪಿಸಿದೆ ಅಧ್ವರ್ಯ ಶ್ರೀಶನಾಜ್ಞೆಯ ತಾ ಶಿರದಿ ಧರಿಸಿ ಪ್ರ ಕಾಶ ಮಾಡ್ದೆ ಸರ್ವಮೂಲಗ್ರಂಥವ 18 ಶ್ವಾಸನಿಯಾಮಕನೆನಿಸಿದೆ ಪ್ರ ಯಾಸವಿಲ್ಲದೆ ವನವಾಸಂಚರಿಸಿದೆ ಶ್ರೀ ವ್ಯಾಸರಿಗೆ ಅತಿಮೋದವ ಪಡಿಸಿದೆ ಶ್ರೀಶನಾಜ್ಞೆಯಲ್ಲಿ ಕೀಶನಾಗಿ ನಿಂದು ನಿಶಾಚರರೆÉಲ್ಲರ ಸದೆದೆ ಗದೆಯಿಂದ ಶ್ರೀಶನೆ ಸರ್ವೋತ್ತಮನೆಂಬ ಸತ್ಸಿದ್ಧಾಂತವ ತೋರಿದ ಸದ್ಗುಣಪೂರ್ಣ 19 ಸರ್ವಜೀವರ ತ್ರಾಣ ಪ್ರಾಣ ಗರ್ವಿಸಿದವರೊಳು ನೀ ಗರ್ವ ಹರಣ ಸರ್ವಜ್ಞಾಚಾರ್ಯ ಗುರುವರೇಣ್ಯ ಪೂರ್ವದೇವರ ಗರ್ವವನಿಳುಹಿ ಸರ್ವ ಕೌರವರ ಪಡೆಯನು ಸವರಿದೆ ಉರ್ವಿಯೊಳು ಜನಿಸಿದ ದುರ್ಮದಾಂಧರ ಗರ್ವಹರಣಮಾಡಿ ಕರುಣವ ತೋರಿದೆ 20 ಶ್ರೀರಾಮನೇಕಾಂತ ಭಕ್ತ ಶೌರಿಯ ಆಜ್ಞೆಯಿಂ ಸರ್ವಕಾರ್ಯಸಕ್ತ ಧಾರುಣಿಯೊಳು ಸಚ್ಛಾಸ್ತ್ರಕರ್ತ ಹಾರಿದೆ ಶರಧಿಯ ಅಣುಮಹದ್ರೂಪದಿ ತೋರಿದೆ ಶಕ್ತಿಯ ಗಿರಿ ತರುತೃಣವತ್ ಸಾರಿದೆ ಧರಣಿಯ ಸುರಜನುಮದಿ ನೀ ಬೀರಿದೆ ಸುಜನಕೆ ತತ್ವಾಮೃತವ 21 ಕಾಶಿ ಕಂಚುಕವ ಧರಿಸಿದೆ ಕಾಶ್ಯಪಿಯೊಳು ಕಾವಿಶಾಟಿಯ ಧರಿಸಿದೆ ಕೀಶತನದಿ ಹರಿಕಾರ್ಯವ ಸಾಧಿಸಿ ಜಗ ದೀಶಕುಲದೊಳು ಜನಿಸಿ ಮೆರೆದೆ ವೇದ ವ್ಯಾಸ ಪದಕಮಲ ಮಧುಪ ಜಗಖ್ಯಾತನಾ ದ ಶ್ರೀ ಮಧ್ವಸೂರ್ಯನೆ 22 ಸುಗ್ರೀವಗಭಯ ಕೊಡಿಸಿದಾ ಮ ಹೋಗ್ರರಾದ ದ್ವೇಷಿಗಳ ಸವರಿದಾ ಸ ಮಗ್ರ ಸಿದ್ಧಾಂತ ರಚಿಸಿದಾ ವಿಗ್ರಹದೊಳು ಧಾತಾಸ್ತ್ರವ ಮಾನಿಸಿ ಅಗ್ರಹರಿಪುಕುಲ ಕಾಲನೆಂದೆನಿಸಿ ಉಗ್ರವಾದಿಗಳ ದುರಾಗ್ರಹ ವಿಗ್ರಹ ಶೀಘ್ರದಿ ಮಾಡಿ ಅನುಗ್ರಹವಿತ್ತೇ23 ಸೋಮಕುಲದೊಳು ನೀನೆ ಅತಿ ಬಲವಂತ ಈ ಮಹಿಯೊಳು ರೌಪ್ಯಪೀಠದಿ ಜನಿತ ರಾಮಾಂಗನೆಯ ಪ್ರೇಮದ ದೂತ ಸೋಮಶೇಖರನ ಕೇದಾರಕಟ್ಟಿದ ಸ್ವಾಮಿಗೆ ಪ್ರಕೃತಿಯ ಮಾಯವ ಪೇಳ್ವ ಕೇಸರಿ ಎನಿಸಿದೆ 24 ಮಾರ್ಜಾಲರೂಪವ ಧರಿಸಿದೆ ನೀ ನರ್ಜುನಾಗ್ರಜಾದಿಗಳ ಪೊರೆದೇ ನೀ ಸರ್ಜಿಸಿ ತೋರ್ದೆ ಸತ್ಸತ್ವಗಳೆಲ್ಲ ಘರ್ಜಿಸಿ ಅರ್ಜುನನ ರಥದಲಿ ನೆಲೆಸಿದೆ ಮೂರ್ಜಗಜಟ್ಟಿಗಳೆಲ್ಲರ ಸದೆದೆ ವರ್ಜಿಸಿ ಅರಿಷಡ್ವರ್ಗಗಳೆಲ್ಲವ ದುರ್ಜಯವಾದಕೆ ಘರ್ಜನೆ ಮಾಡಿದೆ 25 ವಾಯುಕುವರ ಅಸುವರ ಕಾಯಜನಯ್ಯನ ಅತಿಪ್ರೀಯಾ ಶೂರಾ ಜೀಯಾ ನೀನಿತ್ತೆ ಸದ್ಗ್ರಂಥವಿಸ್ತಾರಾ ಕಾಯಕಭಕುತಿ ಶ್ರೀರಾಮರಿಗರ್ಪಿಸಿ ಮಾನಸದಲಿ ಯದುಪತಿಯ ಪೂಜಿಸಿ ಮಾಯಮತವ ನಿರಾಕರಿಸಿ ವಾಚದಿ ಶ್ರೀಯರಸನ ಮೆಚ್ಚಿಸಿದೆ ಯತೀಂದ್ರ 26 ವಾತಜಾತ ಹನುಮಂತ ಖ್ಯಾತ ದ್ವಾಪರದಿ ದ್ರೌಪದೀಕಾಂತ ಭೂತಳದೊಳು ಯತಿನಾಥ ಅತಿಶಾಂತ ಧತಾಜನಕ ಶ್ರೀ ವೇಂಕಟೇಶನ ಪ್ರೀತಿಪಾತ್ರ ಶ್ರೀಕೃಷ್ಣನಂಘ್ರಿಗೆ ಖ್ಯಾತನಾದೆ ಸೂತ್ರಾರ್ಥಪೇಳಿ ಕೃಪಾಪಾತ್ರನಾದೆ ಶ್ರೀ ಬಾದರಾಯಣಗೆ27
--------------
ಉರಗಾದ್ರಿವಾಸವಿಠಲದಾಸರು
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ