ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ 1ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ 2ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ 3ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ 4ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ 5
--------------
ಪ್ರಾಣೇಶದಾಸರು