ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕ) ಷಣ್ಮುಖ ಶುಭ ಕಾಯಾ | ಶುಭ ಕಾಯಂಗಜ ನೀನೆ || ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ಪ ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು | ಮಾರಾ ಸಾಂಬಾ || ಸಾರಿದೆ ನಿನ್ನವತಾರ ಮೂಲರೂಪ || ಸಾರಿಸಾರಿಗೆ ಸಂಸಾರಮನ ವಿ || ಸ್ತಾರವಾಗದಂತೆ ಹಾರಿಸುದುರವ್ಯಾಪಾರ ಗುಣ ಪಾರಾವಾರಾ 1 ಮಾಡುವೆ ವಂದನೆ ಸತತ | ಸಜ್ಜನರೊಳ | ಗಾಡಿಸು ಭಕ್ತ ಪ್ರೀತಾ || ಪಾಡಿದವರ ಕಾ | ಪಾಡುವ ರತಿ-ಪತಿ | ಈಡಾರು ನಿನಗೇ ನಾಡಿನೊಳಗೆಲ್ಲ | ಬೇಡುವೆ ದಯವನ್ನು | ಮಾಡುವಿರಕುತಿಯ | ನೀಡು ಬಿಡದಲೆ ನೋಡು2 ಬೊಮ್ಮ | ಮುಕ್ಕಣ್ಣಗಳ ತನಯ || ಸೊಕ್ಕಿದ ತಾರಕ ರಕ್ಕಸ ಹರ ದೇ | ವಕ್ಕಳ ನಿಜ ದಳಕೆ ನಾಯಕನಾದೆ || ಸಿರಿ ವಿಜಯವಿಠ್ಠಲನ | ಚಕ್ರ ಐದೊಂದು ವಕ್ರಾ 3
--------------
ವಿಜಯದಾಸ
ಬಂದನು ರಘುವೀರ ರಣಧೀರ ಪ ತಡೆ ಭರತನೆ ಮುಂದಡಿಯಿಡಬೇಡ ದುಡುಕಿ ಬೀಳದಿರು ಬಡಜನ ಮುಖಕೆ 1 ಸೀತಾನಾಥನ ದೂತನಾದೆನ್ನ ಮಾತನು ಕೇಳು ಆತುರಪಡದೆ 2 ಭ್ರಾತನ ನೋಡಲು ಕಾತರನಾಗಿ ವಾತವೇಗದೊಳು ಆತನು ಬರುತಿಹ 3 ಅದೊ ನೋಡದೊ ನೋಡದರ ದೆಶೆಯಲಿ ವಿದುಶತಕಿಲ್ಲದಗದಿರದದ್ಯುತಿಯ 4 ಅದೊ ಪುಷ್ಪಕವು ಅದರ ಪ್ರಭೆ ನೋಡು ಅದರಿರವ ನೋಡು ಒದಗಿ ಬರುತಿದೆ 5 ಧಾಮ ಮಧ್ಯೆ ನಿ ಸ್ಸೀಮ ನಿಮ್ಮಣ್ಣ ರಾಮನ ನೋಡು 6 ವಾಮದಿ ಸೀತಾಭಾಮೆ ಕುಳ್ಳಿಹಳು ಪ್ರೇಮದಿ ಲಕ್ಷ್ಮಣ ಚಾಮರ ಬೀಸುವ 7 ಬಲದಿ ಸುಗ್ರೀವ ನೆಲೆಸಿಹ ನೋಡು ಕೆಲದಿ ವಿಭೀಷಣ ನಲಿಯುತ ನಿಂತಿಹ8 ಅಂಗದ ತನ್ನಯ ಜಂಘೆಲಿ ದೇವನ ಮಂಗಳ ಚರಣವ ಹಿಂಗದೆ ಸೇವಿಪ 9 ವೃದ್ಧ ಜಾಂಬವ ಗದ್ದುಗೆ ಮುಂದಿಹ ಯುದ್ಧ ಪ್ರವೀಣರು ಸಿದ್ಧರಾಗಿಹರು 10 ಉಳಿದ ಕಪಿ ದನುಜ ದಳಗಳು ಹಿಂದೆ ಕಲಕಲ ಮಾಡುತ ಉಲಿಯುತಲಿಹವು 11 ಅರರೆ ವಿಮಾನವು ತಿರುಗಿತು ನೋಡು ಧರಣಿಗೆರಗುತಿದೆ ಭರದೊಳು ನೋಡು 12 ಭಳಿರೇ ರಾಮನು ಇಳಿದನು ನೋಡು ಕಳವಳವೆಲ್ಲವ ಕಳೆಯುತ ನೋಡು 13 ಬಂದನು ಅದಕೊ ಬಂದೇ ಬಂದನು ಇಂದುಮುಖಿಯ ತಾ ಹಿಂದಿಟ್ಟುಕೊಂಡು14 ಮುಂದೆ ಬರುವ ಕಪಿಯನು ಉಳಿದು ಸುಂದರ ಮುಖವು ಕುಂದಿದೆ ನೋಡು 15 ನಡೆದು ಬರುತಿಹ ಮಡದಿಯೊಡಗೂಡಿ ತಡಮಾಡದಿರು ಪೊಡಮಡು ಪೋಗು 16 ಇಂತು ನುಡಿದು ಧೀಮಂತನಾದ ಹನು- ಮಂತ ಚಿಗಿದು ಖಗನಂತೆ ಬಂದಿಳಿದ17 ವಾತಸುತನ ಸವಿಮಾತಲಿ ಭರತನು ಪ್ರೀತಿಲಿ ತಿರುಗಿದನಾತುರದಿಂದ 18 ನೋಡುತ ರಾಮನ ಓಡುತ ಬಂದೀ ಡಾಡಿದ ತನುವ ಬಾಡಿದ ಮುಖದಿ 19 ಅನುಜನ ನೋಡಿ ದನುಜಾರಿಯಾಗ ಮನ ಮರುಗಿದ ಬಲು ಕನಿಕರದಿಂದ 20 ರಂಗೇಶವಿಠಲ ಕಂಗಳ ಜಲದೊಳು ಮಂಗಳಯುತನಾಲಿಂಗನಗೈದ 21
--------------
ರಂಗೇಶವಿಠಲದಾಸರು