ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಟ್ಯಕಲಾವಿದ ಶಿವನೋ ಕೇಶವನೋ ನಾಟ್ಯಕೆ ನಲಿವನಾ ಭವನೋ ಮಾಧವನೋ ಪ ನಾಟ್ಯಾಪ್ಸರಗಣವೇಷ್ಟಿತನಿವನು ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ ಝಣ ಝಣ ಝಣರವ ರಣಿಪನಿವನು ಕಿಣಿ ಕಿಣಿ ಕಿಣಿರವ ಚೆಲ್ಲುವನವನು ಗಣ ಗಣ ನಾದದಿ ವರ್ತಿಪನಿವನು ಮಣಿಗಣನಾದದಿ ನರ್ತಿಪನವನು 1 ಮುರಳಿಯಗಾನವ ಪಾಡುವನಿವನು ನಿರುಪಮ ದಿವಿಜಾ ನರ್ತಕನವನು ಭರತನಾಟ್ಯ ಕಲಾ ಕೋವಿದನಿವನು [ವರ ನಾಟ್ಯ ನಟನಾ ನಿಪುಣನವನು] 2 ಭೇರಿನಗಾರೀ ತುತ್ತೂರಿ ಡಮರುಗ ಕರಿಮುಖ ಷಣ್ಮುಖಯುತ ಭಸಿತಾಂಗ ನಾರದ ತುಂಬುರ ವೀಣೆ ಮೃದಂಗ ಸಾರಗಾನಯುತ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
--------------
ಪುರಂದರದಾಸರು