ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸುಬ್ರಹ್ಮಣ್ಯ ಸ್ತೋತ್ರ) ಬ್ರಹ್ಮಣ್ಯ ಪುಂಜವನ್ನು ಕಾವಾ ಮೊರೆಯ ಕೋಳೂ ಸು- ಬ್ರಹ್ಮಣ್ಯಕ್ಷೇತ್ರಪಾಲದೇವಾ ಪ. ಶ್ರೀಶನ ಕರುಣ ಪೂರ್ಣಪಾತ್ರ ಷಡ್ವಕ್ತಪಾರ್ವ ತೀಶಸಂಪ್ರೀತಿಕಾರಿಪತ್ರ ಸುರನಿಕರ ಭಯತ್ರ ಸೂಸುತ ದೇಹದಿ ವಾಸವಾಗಿಹ ತ್ವ- ಗ್ದೋಷವ ತರಿವ ಮಹಾಸುರ ದಾರಿ1 ಸಾಂಬಾಸನತ್ಕುಮಾರನೆನಿಸಿ ಸಾಂಖ್ಯಾಯೋಗಗಳ ನಂಬಿದ ಭಕ್ತ ಜನಕೆ ಸಲಿಸಿ ದೈತ್ಯರ ಜವಗೆಡಿಸಿ ಜಾಂಬವತೀವದನಾಂಬುಜ ವಿಕಸನ ಕುಂಬುಜನಾಭ ಕುಟುಂಬಾಭರಣೀ 2 ಶೇಷಾದ್ರಿವಾಸಲಕ್ಷ್ಮೀಪತಿಯ ಪೂರ್ಣಾನುಗ್ರಹದಿ ವಾಸುಕಿಗೊಲಿದು ವಿಪ್ರತತಿಯ ಸಲಹುವ ಭೂಪತಿಯ ದೋಷವಾರಿ ಧಾರಾತೀರದಲಿ ನಿವಾಸಗೊಂಡ ನಿನ್ನಾಶ್ರಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀವಾಣಿ ಕಲ್ಯಾಣಿ ಬ್ರಹ್ಮಾಣಿ ಗೀರ್ವಾಣಿ ಕೈವಲ್ಯಮಾರ್ಗ ಪ್ರದರ್ಶಿನೀ ಕವಿಜೀವಿನೀ ಮಜ್ಜನನೀ ಪ. ಕಾಮಿನೀ ಗುಣಭರಣೀ ಕಮನೀಯ ಸುಶ್ರೋಣಿ ರಾಮಾಣೀಯಕ ಪಲ್ಲವಪಾಣಿ ಕೋಮಲ ಶುಕವಾಣಿ 1 ಮಂಗಳಂ ವಿಧಿರಮಣೀ ಜಯ ಮಂಗಳಂ ಘನಕರುಣಿ ಸಂಗೀತ ಶಾಸ್ತ್ರ ವಿಲಾಸಿನೀ ಪರಿಪಾಹಿಮಾಂ ಜನನೀ 2 ಭುವನೈಕ ಮೋಹಿನಿ ತರುಣಿ ಭಾಷಾಭಿಮಾನಿನಿ ರಮಣಿ ಶೇಷಶೈಲವಾಸ ಕೀರ್ತನಾಮೋದದಾಯಿನಿ ಜನನಿ 3
--------------
ನಂಜನಗೂಡು ತಿರುಮಲಾಂಬಾ
ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1 ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2 ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು