ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

100(ಅ) ತುಳಸಿದೇವಿ ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ನಾರಾಯಣನ ಪ್ರೀಯೇ ತರಣಿಕೋಟಿ ದಿವ್ಯ ಪ್ರಕಾಶ ಹರಿಚರಣಕಮಲಕಾಭರಣಿಯೆನಿಪಳೆ ಪ ಉದಧಿಯೊಳುದಿಸಿದಮೃತವ ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ- ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1 ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು ಸುಮ್ಮನದಿಂದ ಒಲಿದಿಹರು ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2 ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ ಕಷ್ಟವ ಕಳೆದು ಕೈವಿಡಿದು ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ- ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3
--------------
ಕದರುಂಡಲಗಿ ಹನುಮಯ್ಯ
ಆತ್ಮನ ಕೊಂಬುವರಾರು ಅವರಿಗೆ ಸರಿಯಾರುಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿಪ ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1 ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2 ಮರೆಯ ವೇಷದಂತೆ ಭರಣಿಯ ರಸದಂತೆಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ3 ಕೂಳದ ತಾವರೆಯಂತೆ ಘನ ಮರೆಯ ರವಿಯಂತೆಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4 ಪರಿ ಆತ್ಮನ ನಿಜವತಾ ಪರದೈವವೆಂದರಿವಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5
--------------
ಚಿದಾನಂದ ಅವಧೂತರು
ಕ್ಷಮಿಸೆನ್ನ ದೋಷಗಳ ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾನಿವಾಸನೆ ಅ.ಪ ಕರಣತ್ರಯದಿಕಾಲಹರಣವಿಲ್ಲದೆ ಪಾಪಾ ಚರಣೆಯಿಂ ದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನಸ ಮೂಢನ ಸುಕೃತವನಾಡಿ ತೋರಿಸಲೇಕೆ 2 ಹರಿಗುರುಹಿರಿಯರ ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ3 ಸರ್ವಸಹಾಧಿಪ ಸರ್ವಚೇತನದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತವೈರಿಯೆ ನಿನ್ನ ಮರೆಹೊಕ್ಕ ಮನುಜಗೆ ದುರಿತ ದುಃಖಗಳುಂಟೆ ವರದವಿಠಲರಾಯ 5
--------------
ವೆಂಕಟವರದಾರ್ಯರು
ಕ್ಷಮಿಸೆನ್ನ ದೋಷಗಳ-ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾ ನಿವಾಸನೆ ಅ.ಪ. ಕರಣ ತ್ರಯದಿ ಕಾಲ-ಹರಣವಿಲ್ಲದೆ ಪಾಪಾ ಚರಣೆಯಿಂದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನ ಮೂಢನ ಸುಕೃತವ ನಾಡಿ ತೋರಿಸಲೇಕೆ 2 ಹರಿಗುರುಹಿರಿಯರ-ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ 3 ಸರ್ವಂಸಹಾಧಿಪ ಸರ್ವಚೇತನ ದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತ ವೈರಿಯೆ ನಿನ್ನ-ಮೊರೆಹೊಕ್ಕಮನುಜಗೆ ದುರಿತದುಃಖಗಳುಂಟೆ-ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ಲಕ್ಷ್ಮೀಶ ಹರಿ ವಿಠಲ ರಕ್ಷಿಸೋ ಇವಳಾ ಪ ಕುಕ್ಷಿಯೊಳಗನ್ಯರೆನೆ | ರಕ್ಷಕರ ಕಾಣೇ ಅ.ಪ. ಮಧ್ವ ಮತದಲ್ಲಿಹಳು | ಶ್ರದ್ಧೆ ಭಕ್ತೇಯುತಳುಪದ್ಧತಿಗಳಲವಡಿಸಿ | ಶುದ್ಧ ಸಾಧನದಾ |ಅಧ್ಯಾನ ಕಳೆ ತಂದು | ಬದ್ಧಳನ ಮಾಡುತ್ತಉದ್ಧರಿಸೋ ಶ್ರೀ ಹರಿಯೆ | ಪದ್ಮನಾಭಾಖ್ಯಾ 1 ಸಿರಿ ಭವ ಹಾರೀ 2 ಸಾರ ಸಾಧನಕೇ |ಚಾರು ನಿನ್ನಯ ನಾಮ | ಸಾರಸದಿ ಸವಿದುಂಬಭರಣಿಯಲಿರಿಸಯ್ಯ | ಮಾರಪಿತ ಹರಿಯೇ 3 ಕರ್ಮಗಳ ಮಾಳ್ಪವಲಿ | ಮರ್ಮಗಳ ತಿಳಿಸಯ್ಯನಿರ್ಮಮತೆ ನೀಡುತ್ತ | ಧರ್ಮ ಸಾಧನಕೇ |ಕರ್ಮ ನಾಮಕ ಹರಿಯೆ | ಪೇರ್ಮೆಯಲಿ ಇವಳನ್ನಕ್ರಮ್ಮಿಸೋ ಕರ್ಮದಲಿ | ಧರ್ಮಗುಪ್‍ಧರ್ಮೀ 4 ಧಾವಿಸೀ ಬಂದಿಹಳು | ದೇವ ತವ ದಾಸ್ಯವನೆ ಭಾವುಕಳಿಗಿತ್ತಿಹೆನೋ | ಓವಿ ಉಪದೇಶಾಗೋವಳರ ಪ್ರೀಯ ಗುರು | ಗೋವಿಂದ ವಿಠ್ಠಲನೆನೀವೊಲಿದು ಪೊರೆ ಇವಳ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಸಂತ ಚರಣಕೆ ಭಾವದಿ ಮಣಿಯೋ | ಅಂತ ರಂಗದಿ ಬಹಯದುಕುಲಮಣಿಯೋ ಪ ಬಿಡದೇ ಮಾಡಲು ಅವರನುಸರಣಿಯೋ | ಕೊಡುವನು ನಾಮದಿ ಕನಿಭರಣಿಯೋ 1 ವರವರದ್ಹೇಳಲು ಬೋಧಕ ಹಣಿಯೋ | ದೊರೆವುದು ಸುಜ್ಞಾನತನದ ಖಣಿಯೋ 2 ಗುರುಮಹಿಪತಿ ಪ್ರಭು ವಶವರ್ತಣಿಯೋ | ಕರುಣಿಸಿ ಪುನರಪಿ ಭವದಲ್ಲಿ ದಣಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು