ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದೋರು| ದಯದೋರು | ದಯದೋರು | ಜನನಿ ಪ ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ ಆದಿ ನಾರಾಯಣಿ | ಮಾಧವಭಗಿನಿ || ಸಾಧುಸುಪ್ರೀತೆ ನೀ| ವೇದವಂದಿತೆ ನೀ 1 ಭುವನಪಾಲಿನಿ ದೇವಿ | ಭುವನವಂದಿತೆ ನೀ || ಭವಭಯಹಾರಿಣಿ | ಭುವನೇಶ್ವರಿ ನೀ 2 ಶಂಖಚಕ್ರಾಂಕಿತೆ | ಶಂಕರಿ ಸುಗುಣಿ | ವೆಂಕಟರಮಣನ | ಪ್ರೇಮದ ಭಗಿನಿ 3
--------------
ವೆಂಕಟ್‍ರಾವ್
ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ಪ ಭಾರ್ಗವಿ ಭಜಕರ ವರ್ಗವ ಕರುಣದಿ ಅ.ಪ ಸರ್ಗಸ್ಥಿತಿ ಲಯಕಾರಣೆ ಜಗಕೆ ಸು ಮಾರ್ಗದಿ ನಡೆಯಲನುಗ್ರಹ ಮಾಡೆ 1 ವಂದಿಸುವೆನು ಭವಬಂಧವ ಬಿಡಿಸ್ಯಾ ನಂದವ ಕರುಣಿಸು ನಂದಾತ್ಮಜಳೆ 2 ಕಡಲತನುಜೆ ತವಕಡು ಕರುಣದಲಿ ಬಡಜಭವ ಮುಖರು ಪಡೆದರು ಪದವನು 3 ನಭ ಸಂಚಾರಿಣೆ ಆಯುಧ ಭವ ಭಯಹಾರಿಣಿ ನಮೊನಮೋ4 ಇಂದಿರೆ ಪದುಮ ಸುಮಂದಿರೆ ತವಪದ ದ್ವಂದ್ವದಿ ಭಕುತಿಯ ಪೊಂದಿ ಸುಖಿಸುವಂತೆ 5 ವೀರರೂಪಿ ಅಸÀುರಾರಿಯೆ ತವಪರಿ ವಾರದ ಭಯವನು ತಾರದಿರೆಂದಿಗೂ 6 ಮಂಗಳಕೃಷ್ಣ ತರಂಗಿಣೆ ಕಾರ್ಪರ ತುಂಗಮಹಿಮೆ ನರಸಿಂಗನ ರಾಣಿ7
--------------
ಕಾರ್ಪರ ನರಹರಿದಾಸರು
ಬಾ ಕೃಪಾಕರೆ| ಮೋದದಿ| ಬಾ ಕೃಪಾಕರೆ ಪ ತವ ಪಾದವ ನÀುತಿಸುವೆ| ಪೊರೆಯಲು ಮೋದದಿ| ಬಾ ಕೃಪಾಕರೆ ಅ ಪ ಕಮಲದಳಾಂಬಕಿ| ಕಮಲಾನನೆಯೆ| ಕಮಲಜಪಿತನÀ| ಸಹಭವೆಯೆ|| ಕಾಮಿತವೀಯುತ|ಪೊರೆಯಲು ಮೋದದಿ 1 ನಿತ್ಯಕಲ್ಯಾಣಿ|ಭೃತ್ಯರ ಜನನಿ|| ನಿತ್ಯವು ನುತಿಸುವೆ| ಪೊರೆಯಲು ಮೋದದಿ 2 ಭುವನ ಮೋಹಿನಿ| ತ್ರಿಭುವನಜನನಿ|| ಭವಭಯಹಾರಿಣಿ| ಪೊರೆಯಲು ಮೋದದಿ 3
--------------
ವೆಂಕಟ್‍ರಾವ್
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ 1 ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ 2 ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ 3 ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ4 ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ5
--------------
ಕೆಳದಿ ವೆಂಕಣ್ಣ ಕವಿ