ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತರಿಗಾಶೀರ್ವಾದಗಳು ಕುಶಲಕೆ ಬರೆಯುತಲಿರಿ ಎನಗೆ ಪ ಯುಕುತಿಗಳನು ಬರೆದಿಹೆನಿಲ್ಲ ಅ.ಪ ಬೆರೆಯಬೇಡಿ ಈ ಜಗದ ರಗಳೆಯಲಿ ಮರೆಯಬೇಡಿ ಎನ್ನನು ಕ್ಷಣವು ಬೆರೆಯದೆ ಮರೆಯದೆ ಇರುವ ಧೀರರನು ಪೊರೆಯುವುದೇ ಎನ್ನಯ ಗುರಿಯು 1 ನಾಳೆಗೆ ಅಣಿಮಾಡಲು ಕೈಲಾಗದೆ ಗೋಳೇತಕೆ ನಾನೊದಗಿಸುವೆ ಕಾಲು ಕೈಗಳೊದ್ದಾಡುವತನಕ ಮೇಲೆತ್ತುವುದಳವೇ ಎನಗೆ 2 ಬಿಸಿಲು ಗಾಳಿ ಮಳೆಗಳು ಸಿದ್ಧೌಷಧ ಹಸನ ಮುಖವೆ ನಿಮ್ಮಯ ಪಥ್ಯ ರಸ ಕವಳವು ಬೇಕಾದರೆ ಕೊಳೆಯುವ ರಸವನು ತಿನ್ನಲು ಬಯಸದಿರಿ 3 ಕತ್ತಲಿನಲಿ ಓಡÀುತಲಿರುವಿರಿ ಸತ್ತಿರುವುದೆ ನಿಮ್ಮಯ ಬಲವು ಅತ್ತರೇನು ಫಲ ಎತ್ತಿನೋಡಿ ತಲೆ ಹತ್ತಿರದಿ ನಾನಿಹೆ ಸತತ 4 ಭಯವೇತಕೆ ದಾರಿದ್ರ್ಯದಲಿ ಭಯವೇತಕೆ ಜನರನು ಬಿಡಲು ಭಯವೇತಕೆ ಲೌಕಿಕವಿರದಿರಲು ಅಭಯ ಪ್ರಸನ್ನನಿರೆ ಹೃದಯದಲಿ 5 ಬೊಗಳುವರಿರುವರು ಹೊಗಳುವರಿರುವರು ಹಗರಣವೇತಕೆ ಮಾನಸದಿ ಒಗೆಯಿರಿ ಹಗೆತನ ನಗುತ ನಗುತಲಿರಿ ಜಗವೆ ಹೊಸ ಮೊಗ ತೋರುವುದು6
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ಸರಿತಪ್ಪುಗಳ ಗೊಡವೆ ನನಗೇತಕೋ ಸರಿತಪ್ಪ ನಡೆಸುವವನು ನೀನಾಗಿರೇ ಪ ಹರಿ ನಿನ್ನ ಕೈಗೊಂಬೆ ನಾನಾಗಿರೆ ಪರಿಪರಿಯ ಯೋಚನೆಯು ನೀನಾಗಿರೇ ಅ.ಪ ಹಗಲಿರುಳ ಬಗೆ ಭಾವ ಎನಗೇತಕೆ ನಗುವಳಲ ಶೋಕಂಗಳು ಇನ್ನೇತಕೇ ಜಗವೆಲ್ಲ ತುಂಬಿರುವೆ ಭಯವೇತಕೆ ಭಗವಂತ ನಿನ್ನದಯೆ ಇರದೇತಕೆ 1 ಹರಿಚರಣ ಶರಣೆಂಬುದೆನಗಾಗಲಿ ಕರವಿಡಿದು ನಡೆಸುವುದು ನಿನಗಾಗಲೀ ಗುರುದೇವ ನೀನೆಂಬುದರಿವಾಗಲೀ ಸಿರಿ ಮಾಂಗಿರಿಯರಂಗ ದಯೆದೋರಲಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್