ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಹೋ ಸುಮ್ಮನೆ ಮರುಳಾದೆ ಮಹಿಮೆಯನರಿಯದೆ ಪ. ದೇವಾಧಿ ದೇವ ಬಂದು ಮನೆಯಲಿಂದು ಕಾವಲಾಗಿರುವನೆಂದು ತಾ ತಿಳಿದಿರಲಿಂದು ನಾ ವನಿತೆಯ ಒಡಗೂಡುತ ಪೊರಟರೆ ಕಾವರಿದಾರೆಂಬುದ ಭ್ರಮೆಗೊಂಡು 1 ನೀರಿನ ಮೇಲೆ ಧರೆಯ ನಿಲ್ಲಿಸಿದಂಥ ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ ಸೇರಿದ ದಾಸರಿಗಾರಿಂದಲು ಭಯ ಬಾರದೆಂಬ ಶ್ರುತಿಸಾರವ ಗ್ರಹಿಸದೆ 2 ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು ಬಲ್ಲ ಶೇಷಗಿರಿವಲ್ಲಭನಿರುತಿರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ. ಅನುದಿನ ಸಂದಣಿಸೆ 1 ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2 ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
--------------
ವಾದಿರಾಜ
ದಾಸಗೆ ಭಯವೆಲ್ಲಿ ದಾಸಗೆ ಭಯವೆಲ್ಲಿ ಪ ದಾಸನಾಗದವಗೆ ಭಯವೆಂದಿಗು ತಪ್ಪದು ದಾಸನಾಗಿಹಗೆ ಭಯವೆಂದಿಗು ಬಾರದು 1 ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ 2 ಲಂಕೆಯೊಳಿದ್ದರೂ ದಶಕಂಠನಿಗತಿ ಭಯ ಲಂಕೆಯ ಬಿಟ್ಟ ವಿಭೀಷಣನಿಗಭಯ 3 ಹರನ ಪೀಡಿಸಿದಾ ಭಸ್ಮಾಸುರಗೆ ಭಯ ಹರಿಯ ಸ್ತುತಿಸಿದ ಮಹಾದೇವನಿಗಭಯ 4 ರಾಜೇಶ ಹಯಮುಖನೊಲಿದವನಿಗಭಯ 5
--------------
ವಿಶ್ವೇಂದ್ರತೀರ್ಥ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ ಭಾಗವತಪ್ರಿಯ ಭಾಗೀರಥೀಜನಕ ಪ. ವರುಷವರುಷಕೆ ನಿನ್ನ ದರುಶನವನಿತ್ತೆನ್ನ ಕರುಣಿಸೈ ಶೇಷಾದ್ರಿವರ ಶ್ರೀನಿವಾಸ ವರ ಪ್ರಸಾದವನೀಯೊ ಜನ ಮೆಚ್ಚುವಂತೆ 1 ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ ನಿಯಮತಿಯೀಯೊ ನೀರಜನಾಭನೆ ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ2 ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ ಧೀನ ನೀನೆಂಬ ಬಿರುದುಂಟಾದಡೆ ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಚ್ಚಡವಗೆಯ ಬೇಕಮ್ಮಾ | ಬಹುಕೊಳೆ ಮುಚ್ಚಿ ಕೊಂಡಿಹುದು ನೋಡಮ್ಮಾ ಪ. ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ ಬೆಚ್ಚಗೆ ಹೊದಿಸಲು ಇಚ್ಛೆಯ ಮಾಡುತ ಅ.ಪ. ಏಳು ಪದರವಿಹುದೊ | ಬಹು ಕಾಲದಿಂ ಬಾಳುತ ಬಂದಿಹುದೂ ಕಾಲಕಾಲಕೆ ಬದಲಾವಣೆ ಪೊಂದುತ ಬೀಳುತೇಳುತ ಬೆನ್ನು ಬಿಡದಿರುತಿಹುದೊ 1 ಹೊರಗಡೆ ನವ ದುರ್ಗಂಧಾ | ಒಳಗಡೆ ಇನ್ನು ಅರುಹಲಾರದ ಕಲ್ಮಷಾ ಸುರರೆಲ್ಲ ಇದಕಿನ್ನು ಸರಿ ಇಲ್ಲವೆಂಬೋರು ಮರುತಾಂತರ್ಯಾಮಿಗೆ ಸರಿತೋರುವಂದದಿ 2 ಎಪ್ಪತ್ತೆರಡು ಸಾಸಿರಾ | ನೂಲುಗಳಿಂದ ವಪ್ಪಾಗಿ ಹೊಲಿದ ಪಾರ ಕಪ್ಪು ಕೆಂಪು ಬಿಳಿ ವಪ್ಪೆ ಬಣ್ಣಗಳಿಂದ ಸರ್ಪಶಯನ ಸತತ ಸಲಹಿ ಕೊಡುವಂಥ 3 ನಿರ್ಮಲೋದಕವ್ಯಾವುದೇ | ಇದನೊಗೆಯಲು ಸಮ್ಮತ ಶಿಲೆಯಾವುದೇ ಬೊಮ್ಮನೈಯ್ಯನ ಸುಜ್ಞಾನ ಸುಕೊಳದೊಳು ವಮ್ಮನಸಿನೊಳದ್ದಿ ವದ್ದೆ ಮಾಡುತಲಿನ್ನು 4 ವ್ಯಕ್ತಿ ವೈರಾಗ್ಯ ಶಿಲೇ | ಶ್ರೀ ಹರಿಗುರು ಭಕ್ತಿ ಎರಡು ಕೈಗಳೇ ಎತ್ತಿ ವಗೆದು ಎಲ್ಲಾ ಕಶ್ಮಲ ಕಳೆಯುತ ಮತ್ತೆ ಜಾಲಾಡಿ ಹಿಂಡಿಕೆ ಮಾಡಿ ಶುಭ್ರದಿ 5 ಎತ್ತಿ ತಂದು ಕೊಡುವುತಾ | ಮತ್ತೆ ಕೊಳೆ ಹತ್ತದಂದದಿ ನೋಡುತಾ ಉತ್ತಮವಾದ ಮೈದಾನದೊಳಗೆ ಹರಹಿ ನೆತ್ತಿ ಜ್ಯೋತಿಯ ಘನ ದೀಪ್ತಿಯಲ್ಲೊಣಗಿಸು 6 ಶುದ್ಧ ಸಾತ್ವಿಕವರ್ಣದೀ | ಹೊಳೆವಂಥ ಈ ಶುದ್ಧ ಹೊದ್ದಿಕೆ ಸ್ಥಾನದೀ ಮುದ್ದುಕೃಷ್ಣನು ತನ್ನ ಪರಿವಾರ ಸಹಿತದಿ ಪೊದ್ದಿಕೊಂಡಿಪ್ಪ ಬಲು ಭದ್ರವ ಮಾಡುತ 7 ಹಿಂದೆ ಮುಂದಿನ ಭಯವೆಲ್ಲಾ | ತಪ್ಪುವುದಿನ್ನು ಸಂದೇಹಪಡಲು ಸಲ್ಲಾ ತಂದೆ ಮುದ್ದುಮೋಹನ್ನ ಗುರುಗಳು ಪೇಳಿದ ಒಂದೆ ವಾಕ್ಯವ ಆನಂದದಿ ನಂಬುತ 8 ನೂತನ ಹಚ್ಚಡವೂ | ನೂಲುಗಾರ ಜಾತಿಯರರಿಯರಿವೂ ಪ್ರೀತಿಯೋಳ್ ಗೋಪಾಲಕೃಷ್ಣವಿಠ್ಠಲ ಕೊಟ್ಟ ಖ್ಯಾತಿಯೊಳ್ ಬಾಳಿ ಶ್ರೀನಾಥನ್ನ ಪೊಂದುವೋ 9
--------------
ಅಂಬಾಬಾಯಿ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶಭಾಗವತಪ್ರಿಯ ಭಾಗೀರಥೀಜನಕ ಪ.ವರುಷವರುಷಕೆ ನಿನ್ನ ದರುಶನವನಿತ್ತೆನ್ನಕರುಣಿಸೈ ಶೇಷಾದ್ರಿವರ ಶ್ರೀನಿವಾಸದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾವರಪ್ರಸಾದವನೀಯೊ ಜನ ಮೆಚ್ಚುವಂತೆ1ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿನಿಯಮತಿಯೀಯೊ ನೀರಜನಾಭನೆದಯಮಾಡೊ ತವ ಪಾದಸೇವೆಯನ್ನಿತ್ತೆನಗೆಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ 2ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾಧೀನನೀನೆಂಬ ಬಿರುದುಂಟಾದಡೆಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿನವೀನ ಜನನ ಮೃತ್ಯು ಭಯವೆಲ್ಲಿ ಪ.ಕುಶತಲ್ಪ ತಂತ್ರಸಾರಾರ್ಚನೆಯೆತ್ತಖಳಪ್ರಸರದ ಗೊಂದಣದಾರಿಯೆತ್ತಹೊಸಮಲ್ಲಿಗೆಯ ಹಾರ ಸುರಭ್ಯೆತ್ತ ಮಲಕಶ್ಮಲರತ ಗ್ರಾಮಸೂಕರೆತ್ತ 1ಚಕ್ರಪಾಣಿ ಒಲುಮೆ ವಿರತರಿಗುಂಟುಕರ್ತವಿಕ್ರಮವಾದಶೀಲಗೆ ಮತ್ತ್ಯೆಲ್ಲುಂಟುತಕ್ರಭಿನ್ನ್ವಾದರೆ ಹಾಲ ಹೋಲಲಿಲ್ಲ ಭಕ್ತಿವಕ್ರನೆಂದೆಂದಿಗೆ ಭಾಗವತನಲ್ಲ 2ಡಂಬರ ಶ್ರದ್ಧೆಗೆಹರಿಮೆಚ್ಚಲಿಲ್ಲ ಸಲೆಡೊಂಬ ರಾಷ್ಟ್ರ ತಿರುಗೆ ಭೂ ಪ್ರದಕ್ಷಿಣೆಯಲ್ಲಅಂಬುಜಾಕ್ಷನನ್ನು ನಂಬದವ ಕ್ಷುಲ್ಲ ಗತಅಂಬಕನ ನೋಟ ಬದಿಯ ಧನದಲಿಲ್ಲ 3ಇಂದಿರೇಶಮಹಿಮೆ ಮತಿಮಂದಗೇನು ದೀಪಹೊಂದಟ್ಟೆ ಭೋಜನಸುಖ ಶ್ವಾನಗೇನುಎಂದೂ ಸಾಧುಸಂಗಸೌಖ್ಯ ಕುಹಕಗಿಲ್ಲ ಕೆಚ್ಚಲೊಂದಿದ ಉಣ್ಣೆಗೆ ಕ್ಷೀರಸ್ವಾದವಿಲ್ಲ 4ಪೂರ್ವಕೃತಪುಣ್ಯ ಒದಗದೆಂದಿಗಿಲ್ಲ ಯತಿಸರ್ವಜÕರಾಯನ ಮತ ಸುಲಭವಲ್ಲಉರ್ವಿಯೊಳು ಸಮೀರಮತಸ್ಥರಕಾವತಂದೆಸರ್ವೇಶ ಪ್ರಸನ್ನವೆಂಕಟಾಧಿದೇವ 5
--------------
ಪ್ರಸನ್ನವೆಂಕಟದಾಸರು