ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದ ಕುಮಾರ ಇಂದುಕುಲ ತಿಲಕ ಪ ಎಂದಿಗು ನಿನ್ನಯ ಸುಂದರ ಚರಣವ ವಂದಿಸಿ ನಲಿಯುವ ನಂದವೆನಗೆ ಕೊಡೊ ಅ.ಪ ಧನಕನಕಗಳನು ದಿನ ದಿನ ಗಳಿಸುವ ಅನುರಾಗಗಳನು ಕೊನೆಗಾಣಿಸೊ ದೇವ ವನಜಸಂಭವಪಿತ ಕನಸಿನಲ್ಲಿಯೂ ನಿನ್ನ ಮನನದಿ ಹಿಗ್ಗುವ ಮನವ ಎನಗೆ ಕೊಡೆಲೊ 1 ಭಯವಿಲ್ಲದೆ ದೋಷಮಯದ ನೋಟಗಳನು ಬಯಸುವ ಮತಿಯನು ಲಯಮಾಡೋ ದೇವ ಮಾಧವ ಎನ್ನ ನಯನಗಳಿಗೆ ನಿನ್ನ ಪ್ರಿಯ ರೂಪದ ಪರಿಚಯವ ಮಾಡಿಸೊ ಸದಾ 2 ಕಾಲವ ಕಳೆಯಲು ಆಲಸವಿಲ್ಲದೆ ಪೇಳಬಾರದ ನುಡಿ ಚಾಲನು ತೊಲಗಿಸೊ ಬಾಲ ಗೋಪಾಲ ಎನ್ನ ನಾಲಿಗೆಯಲಿ ನಿನ್ನ ಲೀಲೆಗಳನು ಸದಾ ಲಾಲಿಸಿ ಪೊಗಳಿಸೊ 3 ಪರಿಪರಿ ಭೋಗಕೆ ಪರಿದಾಡುತ ಸದಾ ಪರರ ಸೇವಿಸುತಿಹ ಕರಗಳ ನಿಲ್ಲಿಸೊ ಮುರಳೀಧರ ಕೃಷ್ಣ ಕರುಣದಿಂದಲಿ ಎನ್ನ ಕರಗಳಿಗೆ ನಿನ್ನ ವರಸೇವೆಯ ನೀಡೊ 4 ಭುವಿಯಲಿ ದುರುಳರ ಸವಿನುಡಿಗಳಿಗತಿ ಕಿವಿಗೊಟ್ಟು ಕೇಳುವ ಲವಲವಿಕೆಯ ಬಿಡಿಸೊ ದಿವಿಜರೊಡೆಯ ಎನ್ನ ಕಿವಿಯೊಳಗೆ ನಿನ್ನ ನವ ನವ ಚರಿತೆಯ ಸವಿರಸ ಸುರಿಸೆಲೊ 5 ಮಾಧವನನು ಮರೆತು ಪಾದಗಳಿಂದಲಿ ಮೇದಿನಿ ತಿರುಗುವ ಮೋದವೆನಗೆ ಬೇಡ ಯಾದವಪತಿ ನಿನ್ನ ಪಾದದರುಶನದ ವಿ ನೋದಕ್ಕೆ ಸುತ್ತಲು ಆದರ ಪೊಂದಿಸೊ 6 ಭಿನ್ನ ಅಂಗಗಳಿಂದ ಎನ್ನ ಕರ್ಮಗಳನು ನಿನ್ನ ಸೇವೆಯೆಂದು ಬಿನ್ನೈಸುವೆ ದೇವ ಎನ್ನ ದುರಿತಗಳ ಭಿನ್ನ ಮಾಡುತಲಿ ಪ್ರ ಸನ್ನನಾಗಿ ಎನಗೆ ಸನ್ಮತಿ ದಯಮಾಡೊ 7
--------------
ವಿದ್ಯಾಪ್ರಸನ್ನತೀರ್ಥರು
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ ಕಾಲ ಕಳೆವ ಪಾಮರ ಮನುಜನ ಅ.ಪ ಹರಿದಿನದುಪವಾಸ ಮರುದಿನ ಪಾರಣೆ ಸರಿಯಾಗಿ ಮಾಡಿದೆನೆ ಕೊರಳಲ್ಲಿ ತುಳಸೀ ಸರಗಳ ಧರಿಸಿ ಹರಿಗೆ ಮೈಮರೆದಾನೊಂದಿಸಿದೆನೆ 1 ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ ಕ್ಷೇತ್ರಗಳ ಬಳಸಿ ಪಾದ ನೇತ್ರದಿಂದ ನೋಡಿ ಕೃತಾರ್ಥ ನಾನಾದೆನೆ 2 ವರ ನಾರೇರ ಕಂಡು ನರಕ ಭಯವಿಲ್ಲದೆ ಕರೆದು ಮನ್ನಿಸುವ ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು ನಿರುತ ನಾ ಜಪಿಸುವೆನೆ 3 ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ ಲಲಿತದಿಂ ಕುಣಿಯುವೆನೆ ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ ಬಾಲಲೀಲೆ ಪಾಡಿ ಲೋಲನಾಗುವೆನೆ 4 ಕಂದರ್ಪ ಪಿತನಾದ ವಿಜಯ ರಾವi ಚಂದ್ರವಿಠಲನ್ನ ಮಂದಹಾಸ ಮುಖವನ್ನು ಒಂದಿನವಾದರು ನೋಡ್ಯಾನಂದಪಟ್ಟು ಮಂದ ಜ್ಞಾನ ತೊರೆದನೆ 5
--------------
ವಿಜಯ ರಾಮಚಂದ್ರವಿಠಲ
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
--------------
ಪ್ರಸನ್ನವೆಂಕಟದಾಸರು