ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯವ ಪಾಲಿಸಿ ಸಲಹೆ ಜನನಿ ಜಯಲಕ್ಷ್ಮಿ ಜಯಂಕರಿ ಪ ಭಯವಿಮೋಚನೆ ಭಜಿಪೆ ನಿನ್ನ ಜಯವ ವೊಂದಿಸಿ ಭವದಿ ಎನ್ನ ದಯದಿ ಬೆಂಬಲಿರ್ದು ಬಿಡದೆ ಕೈಯ ಪಿಡಿದು ಕಾಯೌ ಸುದಯೆ 1 ಜ್ಞಾನಜ್ಯೋತಿ ಸುಪ್ರಕಾಶ ಮಾಣದಿತ್ತು ಮಮತೆಯಿಂದ ಹಾನಿತಾರದೆ ಪೊರೆಯೆ ಸತತ 2 ಕಾಮಿತಾರ್ಥ ಪೂರ್ಣೆ ಸುತಗೆ ಭೂಮಿಯಾತ್ರೆ ವಿಜಯನೀಡು ಶಾಮಸುಂದರ ಸ್ವಾಮಿ ಶ್ರೀ ರಾಮನ ಪಟ್ಟದರಾಣಿ ಕರುಣಿ 3
--------------
ರಾಮದಾಸರು
ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು