ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒದಗಿ ಬಂದಿತು ಯೋಗ ಒದಗಿ ಬಂದಿತು ಯೋಗ ಪ ಪದುಮೆಯರಸನು ರಥದೊಳಿರುವ ದರುಶನ ಭಾಗ್ಯ ಅ.ಪ ಭುಜಗಶಯನನು ದಿವ್ಯ ರಜತ ರಥದಲಿ ಬರಲು ಸುಜನರೆಲ್ಲರು ಸೇರಿ ಭಜನೆ ಮಾಡುವ ಭಾಗ್ಯ 1 ಅಂಗನಾಮಣಿಯರೆ ರಂಗವಲ್ಲಿಯೆ ಎತ್ತಿ ಮಂಗಳಾಂಗನು ದೀರ್ಘ ಮಾಂಗಲ್ಯವನೆ ಕೊಡುವ 2 ಬಾಲಕರ ಸಡಗರ ಬಾಲೆಯರ ವೈಯ್ಯಾರ ಬಾಲ ವೃದ್ಧರು ಸ್ವಾಮಿಯೋಲಗದಿ ಸಹಕಾರ 3 ಜಯಘೋಷಗಳ ಮಾಡೆ ಭಯಗಳನು ಬಿಡಿರಿ ಮನ ಬಯಕೆಗಳ ಆನಂದಮಯನು ನೀಡುವ ನಗುತ 4 ತನ್ನಿ ಫಲಕುಸುಮಗಳ ಧನ್ಯರಾಗಿರಿ ಕಣ್ಣಾರ ನೋಡಿ ಪ್ರಸನ್ನ ಶ್ರೀ ನಿಲಯನನು 5
--------------
ವಿದ್ಯಾಪ್ರಸನ್ನತೀರ್ಥರು
ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ ಕಾಲಭೈರವ ನುತಿಪೆ ನಾ ಸತತ ಕಾಲಕಲ್ಪಿತ ಲೀಲೆಯರಿತು ಸು- ಶೀಲತನವನು ಮೆರೆಯಲೋಸುಗ ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ ಮೂಲಿಕಾ ಶ್ರೀನಿವಾಸ ಭೈರವ 1 ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ- ವೀರ ಶ್ರೀರಾಮನ ಸೇತು ನೋಡುತ್ತ ಧರೆಯ ಸಂಚರಿಸುತ್ತ ಬರುತಿರೆ ಮಿರುಪ ಶೇಷಾಚಲ ನಿರೀಕ್ಷಿಸಿ ಭರದಿ ಗಿರಿಮೇಲಡರಿ ಶ್ರೀಶನ ಚರಣಕಾನತನಾಗಿ ಸ್ತುತಿಸಿದೆ 2 ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ ತ್ವರಿತದಿಂ ನೀನೆಲ್ಲ ದೇಶದ ಪರಿಪರಿಯ ಕಾಣಿಕೆಯ ತರಿಸುತ ಹರಿಯ ದರುಶನಗೈವ ಮೊದಲೆ ಹರುಷದಿಂದಲಿ ಪೂಜೆಗೊಂಬುವೆ 3 ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ ಧರಿಸಿ ಮೃದುತರವಾದ ವಾಕ್ಯದಲಿ ಕರೆಸಿ ಒಬ್ಬೊಬ್ಬರ ವಿಚಾರಿಸಿ ಸರಸದಿಂದಲಿ ಪೊಗಳಿಕೊಳ್ಳುತ ನರರ್ಗೆ ಸೋಂಕಿದೆ ಭೂತಪ್ರೇತದ ಭಯಗಳನು ಪರಿಹರಿಸಿ ಪಾಲಿಪೆ 4 ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ ಖ್ಯಾತ ವೆಂಕಟಪತಿಗೆ ಸಖಿಯಷ್ಪ ಖ್ಯಾತಿಯಿಂ ದೊರೆಯಿದಿರಿನಲಿ ಸಂ- ನಿಧಿಸನ್ನುತನಾಗಿ ಮೆರೆದಿಹೆ ಓತು ಕರುಣದೊಳೊಲಿದು ಪಾಲಿಪ ದಾತ ಲಕ್ಷ್ಮೀನಾರಾಯಣಾಪ್ತನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಭವ ಭೀಮ ಪ ಭಯಗಳನು ತಡೆದು ಪೊರಿಯೊ ಭಾವಿ ಭಾರತೀಪ್ರೇಮಾ ಅ.ಪ. ನಿನ್ನವನೆಂತೆಂದು ಮನದಭಿಲಾಷೆಗಳ ಸಲಿಸೋಪರಮ ಕರುಣೀ ದಾನಿ 1 ಇಂದಿನಾಪರಿಯಂತ ಬಹುವಿಧದಿಂದ ಪ್ರಾರ್ಥಿಸಲುಕರುಣ ಬಾರದಾಯಿತೆ ಬಿರುದು ಪೋಯಿತೇ2 ಕೀರ್ತಿ ಅಪಕೀರ್ತಿ ಎರಡೂ ನಿನ್ನಾಧೀನವೇ ಸ್ವಾಮಿ ತಂದೆವರದಗೋಪಾಲವಿಠ್ಠಲನ ದಾಸಾಗ್ರಣಿಯೇಸೌಭಾಗ್ಯನಿಧಿಯೇ3
--------------
ತಂದೆವರದಗೋಪಾಲವಿಠಲರು
ಇಂತುಶ್ರುತಿ -ಸ್ಮøತಿ ಸಾರುತಿದೆ ಕೋ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಂತುಪಿನ ಗುಣಗಳ ತಿಳಿಯಬೇಕೆಂದು ಪ.ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |ತನುವ ತೊಂಡರಿಗಡ್ಡ ಕೆಡವಬೇಕು ||ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |ಘನತೆಯಲಿಹರಿಚರಣಸ್ಮರಿಸುತಿರಬೇಕು1ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |ಇಂದ್ರಿಯಂಗಳನು ನಿಗ್ರಹಿಸಬೇಕು |ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |ಇಂದಿರೇಶನ ಪದದ ಪಥವರಿಯಬೇಕು 2ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |ಹೆಂಟೆ ಬಂಗಾರ ಸಮ ತಿಳಿಯಬೇಕು ||ಕಂಟಕದ ಭಯಗಳನು ನೀಗುತಿರಬೇಕು ವೈ - |ಕುಂಠ ಪುರಂದರವಿಠಲನೊಲಿಸಬೇಕು 3
--------------
ಪುರಂದರದಾಸರು
ನರರ ಪಾಡಲು ಬೇಡ ನಾಯಿ ಮನವೆಮುರಹರನ ಭಕುತಿನೆಲೆ ಹೊಂದು ಮನವೆ ಪ.ದಾರಿದ್ರ್ಯ ವ್ಯಸನದೊಳು ಮುಳುಗಿ ನರಧನಿಕರನುಆರಾಧನೆಯ ಮಾಡಿ ಬರಿದೆ ಕೆಡುವೆಘೋರನರಕದ ಭಯಗಳನು ನೋಡೈ ತಿಳಿದುನಾರಸಿಂಹನ ನಂಬು ದೃಢದಿ ಮನವೆ 1ಬಲ್ಲಿದರ ಬಳಿವಿಡಿದು ಪೋಗಿ ಭ್ರಮೆಗೊಳ್ಳದಿರುಭುಲ್ಲೈಸಿ ಬಳಲಿಮೃಗತೃಷೆಯಂದದಿಫುಲ್ಲಲೋಚನ ಹರಿಯ ದಾಸರನು ಅನುಸರಿಸಿಸೊಲ್ಲುಸೊಲ್ಲಿಗೆ ಸುಧೆಯ ಸವಿದುಣ್ಣು ಮನವೆ2ಮದದಿ ಮತ್ಸರದಿ ಪ್ರಜ್ವಲಿಸುತಿಹ ದೇಹದಲಿಕುದಿಯದಿರುತ್ರಿವಿಧತಾಪದಲಿ ಉಕ್ಕಿಹದಿನಾಲ್ಕು ಭುವನದೊಡೆಯನ ನಂಬಿದರೆ ನಿನಗೆಪದವಿತ್ತು ಪೊರೆಯನೆ ಪೇಳು ಮನವೆ 3ಮಂದಮತಿಯಾಗಿ ಬಹುವಿಷಯ ಭ್ರಾಂತಿಯಲಿ ಮದಾಂಧರನೋಲೈಸಿ ಕೃಶವಾದರೆಮುಂದುಗಾಣದೆ ಖಳರು ನೋಯಿಸಿ ನುಡಿದರೆಕಂದಿ ಕುಂದಿ ಬಳಲುವೆಯಲಾ ಮರುಳು ಮನವೆ 4ಮುನ್ನಸಂಚಿತಸುಕೃತವೆಂತುಟೊ ತಂದೆ ಪ್ರಸನ್ನವೆಂಕಟಪತಿಯ ಒಲುಮ್ಯಾಯಿತುಇನ್ನಾದರೆಚ್ಚರಿತು ವಿವಿಧ ಭಕುತಿಯ ಗಳಿಸಿಧನ್ಯ ನೀನೆನಿಸಿ ಸಾರ್ಥಕವಾಗು ಮನವೆ 5
--------------
ಪ್ರಸನ್ನವೆಂಕಟದಾಸರು
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತಕಾಲಭೈರವ ನುತಿಪೆ ನಾ ಸತತಕಾಲಕಲ್ಪಿತ ಲೀಲೆಯರಿತು ಸು-ಶೀಲತನವನು ಮೆರೆಯಲೋಸುಗಸ್ಥೂಲಸೂಕ್ಷ್ಮಾಕೃತಿಯ ಧರಿಸಿದಮೂಲಿಕಾ ಶ್ರೀನಿವಾಸ ಭೈರವ 1ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-ವೀರ ಶ್ರೀರಾಮನ ಸೇತು ನೋಡುತ್ತಧರೆಯ ಸಂಚರಿಸುತ್ತ ಬರುತಿರೆಮಿರುಪ ಶೇಷಾಚಲ ನಿರೀಕ್ಷಿಸಿಭರದಿ ಗಿರಿಮೇಲಡರಿ ಶ್ರೀಶನಚರಣಕಾನತನಾಗಿ ಸ್ತುತಿಸಿದೆ 2ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿಇರಿಸಿ ಮೆರೆಸಿದೆ ಕೀರ್ತಿಕರವಲ್ಲಿತ್ವರಿತದಿಂ ನೀನೆಲ್ಲ ದೇಶದಪರಿಪರಿಯ ಕಾಣಿಕೆಯ ತರಿಸುತಹರಿಯ ದರುಶನಗೈವ ಮೊದಲೆಹರುಷದಿಂದಲಿ ಪೂಜೆಗೊಂಬುವೆ 3ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿಧರಿಸಿ ಮೃದುತರವಾದ ವಾಕ್ಯದಲಿಕರೆಸಿ ಒಬ್ಬೊಬ್ಬರ ವಿಚಾರಿಸಿಸರಸದಿಂದಲಿ ಪೊಗಳಿಕೊಳ್ಳುತನರರ್ಗೆ ಸೋಂಕಿದೆ ಭೂತಪ್ರೇತದಭಯಗಳನು ಪರಿಹರಿಸಿ ಪಾಲಿಪೆ 4ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪಖ್ಯಾತ ವೆಂಕಟಪತಿಗೆ ಸಖಿಯಷ್ಪಖ್ಯಾತಿಯಿಂ ದೊರೆಯಿದಿರಿನಲಿ ಸಂ-ನಿಧಿಸನ್ನುತನಾಗಿ ಮೆರೆದಿಹೆಓತು ಕರುಣದೊಳೊಲಿದು ಪಾಲಿಪದಾತಲಕ್ಷ್ಮೀನಾರಾಯಣಾಪ್ತನೆ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ