ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ. ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ 1 ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ 2 ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ3 ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ 4 ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - - - - - - - - - - -8 ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ 9
--------------
ವಾದಿರಾಜ
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ ಶರಣಜನನಿಂದಕಗೆ ಪರಮಕುಂಭೀಪಾಕ ಪರಮಭೀಕರಜ್ವಾಲೆ ಕರುಣಶೂನ್ಯರಿಗೆ ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ 1 ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ ರೋತು ಮಲತ ಮಜ್ಜ ನೀತಿಬಾಹಿರಗೆ 2 ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ ಪಂಚಮಹಾಪಾತಕರಿಗುಳಿವಿನ ಉರುನರಕ ಕೂಪ 3 ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ ಕಾದು ಉರಿವರಗಿನೂಟ ಕಡುಲೋಭಿಗಳಿಗೆ ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ 4 ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ ಪರರೊಗತನರಿದಗೆ ನರಕ ಚಂದ್ರಾರ್ಕಪರಿ ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ 5 ಕಾಲಯಮಪಾಶವು ತುಳಸಿದಳ ತುಳಿದವರಿಗೆ ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ ಕಾಲಕರ ಶೂಲ ಕೊಂಡಿ ಚಾಂಡಾಲಗೆ ಸೂಳೆಯರ ಸೇವಕಗೆ ಕಾಲಯಮದಂಡ 6 ಸಂತ ಸಜ್ಜದಾನಸಂಗರಿಯದಧಮರಿಗೆ ಇಂತು ಎಂಬತ್ತು ಕೋಟಿ ನರಕಯಾತನವು ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ ಅಂತರದಿ ನಿಂತಿದನು ಗೆಲಿಸು ಶ್ರೀರಾಮ7
--------------
ರಾಮದಾಸರು