ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸನು ಕಂಡೆನು ಕೇಳೌ ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ ಮನಸಿನ ಸಂಶಯವಳಿಯಿಸಿ ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ ತನಯನ ಸಂಶಯವಳಿಯಿಸಿ ಪರತರ ಗತಿಯನು ತಾ ಕೊಡುವ ಅ.ಪ ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1 ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2 ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3 ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
--------------
ರಂಗದಾಸರು
ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ| ಭಾವಿಸೆಲೋ ನಿಷ್ಕಾಮಾ| ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ| ನೋಡೆಲೋ ಹರಿ ಬಿರುದಾ| ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ 1 ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ| ಭಜಿಸೆಂದು ಉದಾರಿ| ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ2 ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ| ತಂದೆ ಮಹಿಪತಿ ಸೊಲ್ಲಾ| ಮನ್ನಿಸಿ ನಡೆಯಲು ಸುಲಭ ಕೈವಲ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ 1 ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ 2 ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ 3 ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ 4 ಪಾದ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು 5 ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ 6 ಸತಿ ವತ್ಸರ ವತ್ಸರ ಸತಿ ಮಾಯಾ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು 7 ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ 8
--------------
ಸಿರಿಗುರುತಂದೆವರದವಿಠಲರು