ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ಆಂಡಾಳ್ ಸ್ತುತಿ ಆಂಡಾಳ್ ದೇವಿ ಶರಣೆಂಬೆ ಶ್ರೀಗೋದಾದೇವಿ ಪೊರೆಯೆಂಬೆ ಪ ಮುಡಿದು ಕೊಟ್ಟ ನಾಯಕಿ ತಾಯೆ ರಂಗನಾಥನ ಪರಮಪ್ರಿಯೆ ಮುಡಿಪುಹೊತ್ತು ಸೇವಿಪೆವಮ್ಮ ಶರಣಾಗತಿಯನ್ನ ಅ.ಪ ಅಂದುಗೋಪಿಯರು ಕೃಷ್ಣನ ಸೇರಲು ಚಂದದಿಮಾಡಿದ ಕಾತ್ಯಾಯನಿವ್ರತವ ತಂದೆಯಮತದಿ ಹೊಂದಿಸೇವಿಸಿದೆ ಒಂದು ತಿಂಗಳ ತಿರುಪ್ಪಾವೈಯಲಿ 1 ದಿನಕೊಂದು ಪಾಶುರ ಕಟ್ಟಿಪಾಡುತ ದಿನದಿನ ಸಖಿಯರೊಳು ಮಾರ್ಗಳಿಯಲಿ ದಿನ ಮೂಡುವಮೊದಲೆ ತಣ್ಣೀರ್ಮೀಯುತ ದಿನಪ ಕೃಷ್ಣನ ಕಲೆತ ಕನ್ಯಾಮಣಿಯೆ 2 ಧನುರ್ಮಾಸವನು ಧರಿಸಿ ಭಜಿಸುವೆವು ಧನಂಜಯನ ತೋರೆ ಸಿರಿಬಾಯ್ನುಡಿಯೆ ಧನಕನಕಚಂದನೂ ಬಲ್ಲೆವು ತಾಯೆ ತನು ಕರಗಿಸು ಜಾಜಿಪುರೀಶನಡಿಯಲ್ಲಿ 3
--------------
ನಾರಾಯಣಶರ್ಮರು
ಪರಮಾತ್ಮ ದಿವ್ಯಚರಣಾ ಭಜಿಸುವೆವು ಜ್ಞಾನ ಪೂರ್ಣ ನೀ ತೋರ್ಪುದಯ್ಯ ಕರುಣಾ ತಾಪ ಹರಣಾ ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ ನೀ ಪರಮ ಮೋಕ್ಷತಾಣಾ ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ ನೀ ಸರ್ವರಾತ್ಮಪೂರ್ಣ
--------------
ಶಂಕರಭಟ್ಟ ಅಗ್ನಿಹೋತ್ರಿ
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು