ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಟೀಲಿನ ದುರ್ಗೆಯನ್ನು ಕುರಿತು) ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರು ಪ. ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿ ಅ.ಪ. ಸೃಷ್ಟಿಯೊಳುತ್ಕøಷ್ಟ ತೇಜಪಟು ಭಕ್ತಜನರ ಮನದ ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು 1 ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ- ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು 2 ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ- ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು 3 ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ ವೃಷ್ಟಿ ಸುರಿವ 4 ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ- ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಕಟೀಲಿನ ದುರ್ಗೆಯನ್ನು ಕುರಿತು) ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರುಪ. ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿಅ.ಪ. ಸೃಷ್ಟಿಯೊಳುತ್ಕøಷ್ಟ ತೇಜಪಟು ಭಕ್ತಜನರ ಮನದ ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು 1 ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ- ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು2 ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ- ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು3 ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ ವೃಷ್ಟಿ ಸುರಿವ4 ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ- ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯದೆ ಸಲಹೊ ಮಾರುತೀಶ ಎನ್ನ ಶರಣೆಂಬೆನು ನಿನ್ನ ಪ ಶರಣಾಗತರನು ಬಿಡದೆ ಪೊರೆವ ಫನ್ನ- ಗಿರಿ ಅಂಜನೆತನಯಅ.ಪ ವನನದಿಗಿರಿಗುಹೆಗಳಲಿ ನಿನ್ನ ರೂಪ ತೋರುವುದೈ ಭೂಪ ಶರಧಿ ಲಂಘಿಸಿ ರಾವಣನಿಗೆ ತಾಪ ಪುಟ್ಟಿಸಿದೆಯೊ ರಘುಪ- ನಡಿಗಳ ಬಿಡದೆ ಸೇವಿಸುವರ ಪಾಪ ಮಾಡುವಿ ನಿರ್ಲೇಪ ಸಡಗರದಲಿ ನಿನ್ನೊಡೆಯನ ತೋರಪ್ಪ ಘನಗಿರಿ ಹನುಮಪ್ಪ 1 ಊರಿನಲಿ ಊರ್ಹೊರಗು ನಿನ್ನ ಮೂರ್ತಿ ಎಷ್ಟ್ಹೇಳಲಿ ಕೀರ್ತಿ ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ ವರ್ಣಿಸುವುದೆ ಅರ್ಥಿ ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ ಪರಿಹಾರವೋ ಭೀತಿ ನಾಡೊಳು ನಿನ್ನ ಭಜಿಸುವವರ ಸಂಗ ನೀಡು ಕೃಪಾಪಾಂಗ2 ಕಡಲ ಶಯನನ ಅಡಿಗಳ ಸೇವಿಸುತ ಕಡುಹರುಷವ ಪಡುತ ಬಿಡದೆ ನಿನ್ನಯ ಸೇವಕರಿವರೆನುತ ಶ್ರೀಶಗೆ ಪೇಳುತ್ತ ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ ರಾಮರ ಸ್ಮರಿಸುತ್ತ ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
--------------
ನಿಡಗುರುಕಿ ಜೀವೂಬಾಯಿ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ
ಶೌರಿ ಅಡಿಗಳನು ಧ್ಯಾನಿಸುವ ಮತಿ ಕೋರಿ ಪ ಮೃಡ ಪುರಂದರರೊಡೆಯ ಶ್ರೀಹರಿ ಕಡಲಶಯನನ ಬಿಡದೆ ಭಜಿಪರ ಸಡಗರದಿ ಸನ್ಮಾರ್ಗ ತೋರುವ ಬಡವರ ಆಧಾರಿ ನರಹರಿ ಅ.ಪ ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ ನಿನ್ನ ನಾಮಸ್ಮರಣೆ ಅನುದಿನ ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ- ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ ಸನ್ನುತಾಂಗನೆ ಸರ್ವವ್ಯಾಪಕ ನಿನ್ನ ಮೊರೆ ಹೊಕ್ಕಿರುವೆ ಪಾಲಿಸು ಪನ್ನಗಾದ್ರಿವಾಸ ವೆಂಕಟ ಆ- ಪನ್ನ ಜನರನು ಪೊರೆವ ಕರುಣಿಯೆ 1 ಗಜ ನೀ ಕೇಳಿ ತ್ವರದೊಳು ಬಿಡದೆ ರಕ್ಷಿಸಿ ಪೊರೆದ ಕರುಣಾಳು ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ ಹುಡುಗ ತಪವಿರೆ ಅಂದು ಅಡವಿಯೊಳು ತಡೆಯದಲೆ ನೀನೊಲಿದೆ ಭಕುತಿಗೆ ಒಡೆಯರೈವರ ಮಡದಿ ಮೊರೆ ಕೇಳಿ ಬಿಡದೆ ಅಕ್ಷಯವೆಂದು ಸಲಹಿದೆ ದೃಢ ಭಕುತರನು ಬಿಡದೆ ಪೊರೆಯುವೆ 2 ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ ಹಿಂಗಿಸುತ ಪೊರೆದಂಥ ಚರಿತೆಗಳ ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ ಅಂಗಜನಪಿತ ತರಿದೆನ್ನಪರಾಧ ಮಂಗಳಾಂಗ ಪ್ಲವಂಗ ವತ್ಸರ ಗಂಗಾಜನಕ ನಿನ್ನಂಘ್ರಿ ಭಜಕರ ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ 3
--------------
ನಿಡಗುರುಕಿ ಜೀವೂಬಾಯಿ
ಶ್ರೀಕೇಶವ ನಾಮವ ಭಜಿಸುವವರಿಗೆ ಪ ಬೇಕಾದವರೀ ವ್ರತವನಾಚರಿಸೆ ಆ ಕಾಲಾಂತಗೆ ಅಗಣಿತವಾಗಿಹುದು1 ಭಕ್ತನು ರುಕ್ಮಾಂಗದ ಮಹರಾಯನೂ ಮುಕ್ತಿಗೆ ಮಾಡಿದ ಶುಭಕರದಿನವಿದು 2 ಸುಜನರ ಗೋಷ್ಠಿಯೊಳ್ ರಾತ್ರಿಯೊಳಾ ಭುಜಗ ಶಯನನಂ ಭಜಿಸಲ್ಕೂಡಿದ 3 ಕಲಿಯೋಳು ಕಾಣುವ ಅಸ್ಮದ್ದೇಶಿಕ ರೊಲುಮೆಯ ತುಳಶೀ ರಾಮನು ತೋರಿದ 4
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಸದಾಶಿವನೆ ರುದ್ರಾ | ಕಳೆವುದ ಭದ್ರಾ |ಸದಾಗತಿಯ ಪದ | ಮಧುಕರ ನೆನಿಸುತಸುಧಾ ರಸವನೆರೆ || ಭಜಿಸುವವರ ಪೊರೆ ಪಗಜಅಜಿನಾಂಬರ |ಭುಜಗಭೂಷವರವಿಜಯಗಿತ್ತೆ ಶರ |ವೃಜಿನವೃಂದ ಹರಬಿಜಯಿಸಿ ಮನದಿ | ರಜವ ಕಳೆಯೊ ತ್ವರ ಅ.ಪ.ಕೃತ್ತಿವಾಸನೆ | ಭಕ್ತರಾರ್ತಿಹ |ಚಿತ್ತದಲಿನೆಲೆ| ಸುತ್ತ ಪಾಲಿಸೋ ||ಎತ್ತೆ ಈಭವ| ತಪ್ತನಾಗಿಹ |ಗುತ್ತಮೋತ್ತಮ |ವಿತ್ತಕೊಡು ಹರ 1ರೂಪವೈಕೃತ |ರೂಪತೈಜಸ|ರೂಪತಾಮಸ| ಈ ಪರಿಯಕೊಂಡ||ಶ್ರೀಪ ಪದಕ | ಲಾಪದಲ್ಲಿಡು |ವೈಪರೀತ್ಯ ಪ್ರ | ಲಾಪಕಳೆಶಿವ 2ಹೇ ಪವನಜನೆ | ತಾಪಸ ಪ್ರಿಯ |ತಾಪಕಳೆ ಗೌ | ರೀಪನೇಭವಕೂಪಕಳೆವ ದ | ಯಾ ಪಯೋ ನಿಧಿ |ಗೋಪಗುರುಗೋವಿಂದ ವಿಠಲಾಪ್ತ 3
--------------
ಗುರುಗೋವಿಂದವಿಠಲರು