ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು
ಉದ್ದರುಸುವದೆನ್ನ ಉದಧಿಶಯನ | ಪಾದ | ಪದ್ಮದ್ವಯಕೆಯಿಂದು ಪ ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ | ನಿಂದರದೆ ಸಂಚರಿಸಿ ಪುಣ್ಯವೆಲ್ಲಾ | ತಂದು ನಿನಗರ್ಪಿಸಿದೆ ಕೈ ಕೊಂಡು | ತೋರು ತಡಮಾಡದಲೆ ದೇವಾ 1 ಯಾತರವ ನಾನು ನರಮನೆ ಗಾಯಕರ ದೂತರೆಂಜಲನುಂಡು ಬೆಳದ ನರನೋ || ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ | ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ2 ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು | ಕೃಷ್ಣಾ ಸ್ನಾನ ಕೃಷ್ಣ ಸಂದರುಶನಾ | ಕೊಟ್ಟು ಕೇವಲವಾಗಿ ನಿನ್ನಂಘ್ರಿಯಲಿ ರತಿ | ಇಟ್ಟು ಭಜಿಸುವಂತೆ ಭಾಗ್ಯವನು ಕೊಡೊವೇಗಾ3 ಏನು ಕಡಿಮೆ ನೀನು ಒಲಿದರಾದಡೆ ರಾಮ | ಧೇನು ತರುಮಣಿ ಬಾರದೆ ನಿಲ್ಲವೇ || ಶ್ರೀನಿವಾಸನೆ ನಿನ್ನ | ಲೇಶ ಸುಖವು ತೋರದು ದೇವಾ 4 ವೆಂಕಟಗಿರವಾಸಾ ವೇದ ವಂದಿತ ಚರಣಾ | ಶಂಖ ಚಕ್ರಪಾಣಿ ಕರುಣಾಕರಾ | ಶಂಖಾಣ ನೃಪವರದ ವಿಜಯವಿಠ್ಠಲ ತಿಮ್ಮ ಅಂಕದ ಮೇಲಾಡುವ ಬಾಲನೆಂದು ಬಿಡದೆ 5
--------------
ವಿಜಯದಾಸ
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಪರಿ ಪೋಷ ಪ ಇಂದಿರೆಯರಸನ ದ್ವಂದ್ವ ಪಾದದಲಿಅಂದ ಭಕುತಿಯಿತ್ತು ಛಂದದಿ ಸಲಹೋ ಅ.ಪ. ಆರೂ ಕಾಯುವರಿಲ್ಲವೊ ದೊರೆಯೇ | ನಾ ನಿಗೊಂದ್ಹೊರೆಯೇಮೂರು ಜಗಂಗಳ ಪೊತ್ತಿಹೆ ಧೊರೆಯೇ | ನಿನಗಾರೆಣೆಯೇ ||ಅಪಾರ ಗುಣಗಳಿಂದ | ಸಾರಿ ಭಜಿಸುವಂತೆ 1 ತಂದೇ ಮುದ್ದು ಮೋಹನರಿಂದ | ಆರಾಧನೆ ಛಂದದಿಂದ ಕೈಗೊಳ್ಳುತ ಆನಂದ | ತೀರ್ಥರೆ ನಲವಿಂದ ||ಬಂದ ಸುಭಕುತರ | ವೃಂದಕೆ ಪರಮಾನಂದವ ಕೊಡುತಲಿ | ಛಂದದಿ ಮೆರೆವ 2 ತುರು ವ್ರಜ ಜಂಗುಳಿ ಕಳೆದ | ಸರ್ವೋತ್ತಮನಾದ ||ಗುರು ಗೋವಿಂದ ವಿಠಲನ | ಚರಣ ಸರೋಜದಿಉರುತರ ಭಕುತಿಯ | ಕರುಣಿಸಿ ಕಾಯೋ 3
--------------
ಗುರುಗೋವಿಂದವಿಠಲರು
ಸಿದ್ಧಿ ವಿನಾಯಕ ಪರಿಪಾಹಿ | ವರ ಪ ಸಿದ್ಧಿ ವಿನಾಯಕ ವೀರಭದ್ರನಗ್ರಜನೆ ಮಹಾ ರುದ್ರದೇವನ ಸುಕುಮಾರ | ಧೀರ ಅ.ಪ ಮೊದಲು ನಿನ್ನಡಿಗಳಿಗೆ ಮುದದಿ ವಂದಿಸುವರಿಗೆ ಸದಮಲ ಸುಮಾರ್ಗವೀವದೇವ | ವರ1 ಏಕವಿಂಶತಿಸುರೂಪ ಕಾಕುದುರ್ಮತಿಯನು ನಿ- ರಾಕರಿಸಿ ಕೊಡುವದು ನಿರ್ವಿಘ್ನವಂ | ವರ 2 ತಾಮಸರಹಿತ ಗುರುರಾಮವಿಠಲನಡಿಗಳ ನಿ- ಷ್ಕಾಮದಿಂದಾ ಭಜಿಸುವಂತೆಮಾಡು | ವರ 3
--------------
ಗುರುರಾಮವಿಠಲ
ಪೃಕ್ಷದಶ್ವ ಪಾಲಿಪುದೆನ್ನ ಈ ದು |ರ್ವಿಷಯ ತ್ಯಜಿಸಿ ಶ್ರೀ ಕೃಷ್ಣನ್ನ ||ಅಸಮ ಪಾದಾಬ್ಜ ಭಜಿಸುವಂತೆ ಪ್ರತಿದಿನ |ಹಸನಾದ ಜ್ಞಾನ ಪ್ರೇರಿಸೊ ಭಕ್ತ ಸುರತರು ಪಪರಿಸರ ಕೃಷ್ಣೇಶ ಗಂಧ ವಹಸಿರಿವಲ್ಲಭ ಪದಾರವಿಂದಭೃಂಗ|ಪುರುಹೂತಮುಖ ಸುರವೃಂದ ವಂದ್ಯ |ಗಿರಿಜಾ ಪಾಲಕ ಶತಾನಂದ||ಆಹಾ||ಎರಡು ಹತ್ತೊಂದು ಸಾವಿರದಾರುನೂರ್ಜಪಸರುವ ಜೀವರೊಳಗೆ ಇರುಳು ಹಗಲು ಮಾಳ್ಪ 1ನಾಗಾದಿ ದಶರೂಪ ಧರ ತಲೆಬಾಗುವೆ ನಿನಗೆ ಉದಾರ ವಿಕ್ರ-ಮಾಘಕಾನನವೈಶ್ವಾನರ, ಹೇ ಸ-ದಾಗತಿ ಕುಜನ ಕುಠಾರಾ ||ಆಹಾ||ಮಾಗಧರಿಪುಹೊತ್ತು ಹೋಗುತಲಿದೆ ಈಗ |ಭಾಗವತರ ಸಂಗಜಾಗುಮಾಡದಲೀಯೋ 2ದೀನವತ್ಸಲ ಶ್ರೀ ಮಾರುತ ಯಾತುಧಾನ ಸಂಹರನೆ ಹೇಮಾತರಿಶ್ವ|ಪ್ರಾಣೇಶ ವಿಠಲನ ದೂತ ಚತು-ರಾನನ ಪದಯೋಗ್ಯವಾತ||ಆಹಾ||ಕ್ಷೋಣಿಯೊಳೆನ್ನಂಥ ಹೀನರಿಲ್ಲವೊ ಪಾಪ |ಕ್ಷೀಣಿಸಿ ಸಲಹೋ ಸುಶೇಣಾದಿಸೂದನ 3
--------------
ಪ್ರಾಣೇಶದಾಸರು
ರಾಘವೇಂದ್ರಾ ನೀನೆ ಪಾಲಿಸೊಶ್ರಿತಜನ- ಪಾಲಾxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಯೋಗಿಜನಾ - ಲೋಲನೆ ಪಜಾಗುಮಾಡದೆನಿನ್ನಾನು- ರಾಗದಿ ಮನಸಾರಬಾಗಿ ನಮಿಸಿ ಬೇಡಿಕೊಂಬೆ -ಯೋಗಿಕುಲ ಶಿರೋಮಣಿಯೇ ಅ.ಪಅನುಭವ ಮಾಡಿದೆನು |ಘನಮಹಿಮನೆ ನಿನ್ನಘನಸುಖವಿತ್ತ್ತು ಎನ್ನ| ಮನ ಪೂರ್ತಿ ಭಜಿಸುವಂತೆಅನುಪಮ ಙ್ಞÕನ - ಭಕ್ತಿ | ಜನುಮ ಜನುಮದಿ ಇತ್ತು 1ಹೇಸಿ - ಸಂಸಾರದಲ್ಲಿ | ಮೋಸಗೊಂಡು ಅದರ ಸುಖಲೇಶಗಾಣದೆ ಬಹು | ಕ್ಲೇಶಬಡುವೆನಯ್ಯಾ ನಿತ್ಯಾಈಶ ! ಸಂಸಾರ ಮಹ | ಪಾಶಬಿಡಿಸಿ ತವೋ -ಪಾಸನದಲ್ಲಿ ಮನ | ಲೇಸು ಇತ್ತು ನಿತ್ಯಾದಲ್ಲಿ 2ದೃಷ್ಟಿ ಇತ್ತು ಗುರುಜಗನ್ನಾಥ | ವಿಠಲನ್ನ ತೊರಿಸಯ್ಯಾ 3
--------------
ಗುರುಜಗನ್ನಾಥದಾಸರು