ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಹಿತವಾ ಪಡಿಯೋ ಹರಿಯ ಭಜಿಸಿ ಪ ಸನಕ ಸನಂದನ ಮುನಿಜನರಾಡುವ | ಘನ ಸುಖ ಮಾರ್ಗದಿನಡಿಯೋ ಹರಿಯ ಭಜಿಸಿ1 ಕುಂಟಿಣಿ ಗಣಿಕಾ ಜ ಮೇಳ ರುದ್ಧರಿಸಿದಾ | ಕಂಠದಿ ನಾಮವ ಜಡಿಯೋ ಹರಿಯ ಭಜಿಸಿ2 ಗುರುವರ ಮಹಿಪತಿ ನಂದನು ಸಾರಿದಾ | ಶರಣರ ಸಂಗವ ವಿಡಿಯೋ ಹರಿಯ ಭಜಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆರೆನಂಬಿ ಪಡೆಯಿರೊ ಹಿತವ ನಮ್ಮಗುರು ಮಧ್ವಮುನಿಯ ಸಮ್ಮತವ ಪ. ತ್ರೇತೆಯೊಳಂಜನೆತನಯನಾಗಿಸೀತಾರಮಣ ರಘುಪತಿಗತಿಪ್ರಿಯದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ1 ದ್ವಾಪರದಲಿ ಭೀಮನೆನಿಸಿ ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸಿಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನ ಭಜಿಸಿ2 ಕಲಿಯುಗದಲಿ ಯತಿಯಾಗಿ ಈಇಳೆಯ ದುಶ್ಶಾಸ್ತ್ರವ ಜರಿದವರಾಗಿಕುಲಗುರು ಮಧ್ವಪತಿಮುನಿಯೋಗಿ ನಮ್ಮಬಲು ಹಯವದನನ ಬಂಟನೆಂದು ಬಾಗಿ3
--------------
ವಾದಿರಾಜ