ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜಿಸಬಾರದೆ ಮನವೆ ಭಜಿಸಬಾರದೆ ಭಜಿಸಲಿಕ್ಕೆ ಭಾವದಿಂದ ನಿಜವಾ ಗೊಲಿವ ಹರಿ ಮುಕುಂದ ಧ್ರುವ ನಿಜವಬಿಟ್ಟು ದಣವದ್ಯಾಕೆ ತ್ರಿಜಗಪತಿಗೊಂದಿಸದೆ ತಾನು ಭಜನ ಮುಖ್ಯವೆಂದು ಸುಜನರೆಲ್ಲ ಪೇಳುತಿರಲಿಕ್ಕಾಗಿ 1 ಪ್ರೀತಿಯಿಂದರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣತಾನು ನೀತಿಹಿತವ ಭಕ್ತಿಯೋಗದಲ್ಲಿ ಸಾರತಿರಲಿಕ್ಕಾಗಿ 2 ಪ್ರಕಟಭಾವಕೊಲಿದ ನೋಡಿ ಅಖಿಲದೊಳು ಸುಲಭದಿಂದ ಭಕುತಿ ಸುಖವನಿತ್ತು ಸಲಹುತಿಹ್ಯ ಮಹಿಪತಿಸ್ವಾಮಿಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಭಾವಿ ಅಜನಂಘ್ರಿಯುಗವ ಭಜಿಸಬಾರದೆ ಪ ಭಜಕ ಮಾನವರ ವೃಜಿನಘನಸಮೀರ ಕುಜನವನಕುಠಾರ ಸುಜನರಿಗೆ ಮಂದಾರನೆಂದು ಭಜಿಸಬಾರದೆಅ.ಪ ಭೂತಳದಿ ಶ್ರೀರಾಮ ದೂತನೆನಿಸಿ ಭಕುತ ವ್ರಾತಕೆ ಸಕಲೇಷ್ಟದಾತನೆಂದು ಪ್ರೀತಿಯಿಂದ 1 ಪುಂಡ ಕೌರವರ ಹಿಂಡುಗೆಲಿದು ರಮೆಯ ಗಂಡನೊಲಿಸಿದ ಮಧ್ಯ ಪಾಂಡವನ ಪದ ಪಂಡರೀಕ 2 ಶ್ರೀನರಸಿಂಹನೆ ಜಗನಿರ್ಮಾಣ ಕಾರಣನೆಂದು ಜ್ಞಾನದಾಯಕ ಮಧ್ವ ಮೌನಿಯೆನಿಸಿದ ಪ್ರಾಣಪತಿಯ 3
--------------
ಕಾರ್ಪರ ನರಹರಿದಾಸರು