ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ ವಿಮಲಚರಣಕಮಲ್ಹಿಡಿ ದೃಢದಿ ಪ ಸುಮನಸರಗೂಡಿ ನೀ ಸುಮಶರ ಪಿತನಂ ಸಮಯ ತಿಳಿದು ಭಜಿಸನುದಿನದಿ ಅ.ಪ ಸಾರವಿಲ್ಲದ ಸಂಸಾರ ಇದು ಮೇರೆನಿಲ್ಲದ ಸಾಗರ ಆರಿಗೆ ನಿಲುಕದೆ ಮೂರುಲೋಕವದ್ದಿ ಮೀರಿಬಡಿಸುವುದು ಬಲುಘೋರ 1 ಹೆಂಡರು ಮಕ್ಕಳೆಂದು ನಂಬಿದಿ ನಿನ್ನ ಹಿಂಡಿನುಂಗುವುದು ಅರಿಯದ್ಹೋದಿ ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ ದಂಡನೆಗೆಳಪುದು ಅಂತ್ಯದಿ 2 ಕಾಕುಜನರ ಸಂಗ್ಹಿಡಿದಿದ್ದಿ ನೀ ಲೋಕನೆಚ್ಚಿ ನೂಕುನುಗ್ಗಾದಿ ಲೋಕಗೆಲಿದು ಭವನೂಕಿ ನಲಿಯುವರ ಸಾಕಾರಗಳಿಸದೆ ಕೆಟ್ಟ್ಹೋದಿ 3 ಧರೆಯ ಭೋಗವನು ಸ್ಥಿರ ತಿಳಿದಿ ನೀ ಹರಿದು ಹೋಗುವದಕೊಲಿತಿದ್ದಿ ಮರೆಮೋಸದಿ ಬಿದ್ದರು ಮೈಯಮರೆದು ಸ್ಥಿರಸುಖ ಪಡೆಯದೆ ದಿನಗಳೆದಿ 4 ಭೂಮಿಸುಖಾರಿಗೆ ನಿಜವಲ್ಲ ಇದು ಕಾಮಿಸಬೇಡೆಲೊ ಶೂಲ ಕಾಮಿತಗಳನಿತ್ತು ಕ್ಷೇಮದಿ ಸಲಹುವ ಸ್ವಾಮಿ ಶ್ರೀರಾಮನ ತಿಳಿಮಿಗಿಲ 5
--------------
ರಾಮದಾಸರು