ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ 1 ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ 2 ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ 3 ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ ವಾಲಗ ಕೈಕೊಂಬೆ ಭಾರತಿಯೇ 4 ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ 5 ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ6 ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ 7
--------------
ಪ್ರದ್ಯುಮ್ನತೀರ್ಥರು