ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದುಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದುಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದುಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದುಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು 1 ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದುಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದುಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದುಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು 2 ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದುಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದುಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದುಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು 3
--------------
ಚಿದಾನಂದ ಅವಧೂತರು
3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
ಅರ್ಚನೆ ಬಗೆ ಕೇಳಿ ಲೋಕ ಪ ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಅ.ಪ ಜಡವ ಪೂಜಿಸಿದರಲ್ಲೇನೊ ತಾನು | ಜಡ ತುಲ್ಯ | ನಾಗಿದ್ದಕೆ ಸಮವೇನು || ಕೆಡದಿರು ಇದರೊಳಗೆ ನೀನು ತಿಳಿ | ಒಡನೆ ಕರ್ಮಗಳೆಲ್ಲೇನುಂಟು ಕಾಣೋ 1 ಏಕಾಂತದಲಿ ನಿನ್ನ ಮನಸು ಅ | ನೇಕವಾಗುವುದು ನಿರಂತರ ಗುಣಿಸು || ನೀ ಕೇಳು ಯೋಚಿಸಿ ಗಣಿಸು | ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು 2 ತ್ರಿವಿಧ ಜೀವರು ಮಾಡುವಂಥ ನಡತಿ | ಹವಣವ ನೋಡಿದು ಬಿಡು ನಿನ್ನ ಪಂಥ || ಕವಿಗಳೊಡನೆ ಸುಪಂಥದಿಂದ | ಪವಮಾನಮತ ಪೊಂದಿ ಭಜಿಪುದು ಇಂಥ 3 ದ್ಯುಣುಕ ಪಿಡಿದು ಬಹುಕಾಲತನಕ | ನಿತ್ಯ ಸುಶೀಲ || ಗುಣವಂತನಾಗೊ ನೀ ಬಹುಳ ಸುಖ- | ವನಧಿ ರಂಗನ ವ್ಯಾಪಾರವೆನ್ನೊ ಬಾಲ 4 ಆವಾಗ ಮರೆಯದಿರು ಹರಿಯ ಕಂಡ | ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ || ದೇವ ವಿಜಯವಿಠ್ಠಲ ದೊರೆಯ ನಿನ್ನ ಭಾವದಲಿ ತಿಳಿಯೊ ಆತನ ಚರಿಯಾ 5
--------------
ವಿಜಯದಾಸ
ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ದ್ವಿತೀಯ ವೇದವ ಪ್ರತಿಗ್ರಹಿಸು ನಿನ್ನಮತದಿಂದಲಿಹ ಮಂತ್ರಗಳ ಮನಸ್ಕರಿಸು ಪಯಜನವೆನುಪುದೆಜುರ್ವೇದ ಪೂಜೆಋಜುವೆನಿಪುದು ಯಜ್ಞ ರಚನೆಯ ಭೇದಭಜನೆಗಾಸ್ಪದ ನಿನ್ನ ಪಾದವೆಂದುಸುಜನರು ಸೂಚಿಪ ಸುಖಕರ ವಾದ 1ಸ್ಟೃಕಾಲದಿ ಸ್ವಾಮಿ ನೀನು ಜನರಿಗಿಷ್ಟಾರ್ಥಧೇನುವೆಂದೀ ಯಜ್ಞವನ್ನುಕೊಟ್ಟೆ ಕರೆದು ಕೈಯ್ಯಲಿದನು ದೇವತ್ಟುುಂ ಭಾಗ್ಯವ ತಂದೀವುದನ್ನು 2ಕರೆಯೆ ಋಗ್ವೇದ ಸುರುನೂ ಬಂದವರ ಭಜಿಪುದು ಯಜುರ್ವೇದವು ತಾನು ಎರಡರಿಂದೇಕ ಕರ್ಮವನೂ ಮಾಡೆತಿರುಪತಿ ವೆಂಕಟಗಿರಿಗಧೀಶ್ವನು 3ಓಂ ಷೋಡಶಸ್ತ್ರೀಸಹಸ್ರೇಶಾಯ ನಮಃ
--------------
ತಿಮ್ಮಪ್ಪದಾಸರು
ಭಜಿಪುದು ನಮಗೆ ಆನಂದಾ ಗೋವಿಂದಾ ಹರಿ ಮುಕುಂದಾ ನಮಗೆ ನಮಿಸು ವದಾನಂದಾ ಪ ಮತ್ತೆ ಅಧಿಕ ಆನಂದಾ ಮತ್ತೂ ಅಧಿಕ ಆನಂದಾ 1 ಮತ್ತೆ ಅಧಿಕ ಆನಂದಾ ಆನಂದಾ ಪರಮಾನಂದ ಮತ್ತೂ ಅಧಿಕ ಆನಂದಾ2 ಮತ್ತೂ ಅಧಿಕ ಆನಂದಾ 3
--------------
ಕರ್ಕಿ ಕೇಶವದಾಸ
ರಮಾಸಮುದ್ರನ ಕುಮಾರಿ ನಿನ್ನಸರಿ ಸಮಾನರ್ಯಾರಮ್ಮ ಪ ಉಮೇಶ ಮೊದಲಾದ ಅಮರ ನಿಕರವು ಪಾದ ಕಮಲ ಭಜಿಪುದು ಅ.ಪ ಕರುಣಾವಾರಿಧಿಯೆಂದು ಶರಣ ಜನರು ನಿನ್ನ ಸ್ಮರಣೆ ಮಾಡುತ ಲಿಪ್ಪರೆ ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1 ಅಪಾರ ಮಹಿಮನ ವ್ಯಾಪಾರಗಳ ತಿಳಿದು ಕಾಪಾಡುವೇ ಜಗವಾ ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2 ವಾಸವ ವಂದಿತ ಸಿರಿಶೇಷವಿಠ್ಠಲನೊಳು ವಾಸವ ಮಾಡುವಳೆ ಘಾಸೀ ಮಾಡದೆ ಎನ್ನ ಈ ಸಮಯದೊಳು ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3
--------------
ಬಾಗೇಪಲ್ಲಿ ಶೇಷದಾಸರು
ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ. ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ. ವಂದನೆ ನಿಂದ್ಯಗಳನ್ನು ಗಮನಿಸದೆ ಇಂದಿರೇಶನ ಪದಕರ್ಪಿಸುತ ಮಂದಭಾಗ್ಯರ ಮಾತನೆ ಗಣಿಸದೆ ಬಂದ ಭಯಗಳ ದೂರೋಡಿಸುತಲಿ 1 ಆಶಪಾಶಗಳ ನಾಶಗೈಸಿ ಮನ ಕ್ಲೇಶಪಡದೆ ಸಂತೋಷಿಸುತ ವಾಸುದೇವ ಆನಂದಪೂರ್ಣ ಸ ರ್ವೇಶ ನಿನಗೆ ನಾ ದಾಸನೆಂತೆಂಬುದು 2 ಗೆಜ್ಜೆ ಕಾಲಿಗೆ ಕಟ್ಟಿ ತಾಳವ ಲಜ್ಜೆಯ ತೊರೆದು ಬಾರಿಸುತ ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು ಘರ್ಜಿಸುತಲಿ ಸಂಚಾರಮಾಳ್ಪುದೆ 3 ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು ಬಂದದರಿಂದಾನಂದಿಸುತ ತಂದೆ ಮುದ್ದುಮೋಹನದಾಸರ ಪದ ದ್ವಂದ್ವವ ಭಜಿಸುತ ಮುಂದೆ ಸಾಗುವುದು 4 ಗುರುಗಳ ಕರುಣದಿ ಅಂಕಿತ ಪಡೆಯಲು ದೊರೆವುದು ದಾಸತ್ವದ ಸಿದ್ಧಿ ಅರಿಯದೆ ವೇಷವ ಧರಿಸಿ ಮೆರೆದರೆ ಸಿರಿವರ ಮೆಚ್ಚನು ಗುರುವು ಒಲಿಯನು 5 ಉಚಿತ ಧರ್ಮಕರ್ಮಗಳನೆ ಮಾಡುತ ಖಚಿತ ಜ್ಞಾನ ಮನದಲಿ ತಿಳಿದು ವಚನದಿ ಹರಿನಾಮಗಳನೆ ನುಡಿಯುತ ಶುಚಿರ್ಭೂತರಾಗಿ ಆನಂದಪಡುವುದು 6 ದುಷ್ಟರ ತೊರೆದು ಶಿಷ್ಟರೊಳಾಡುತ ಶ್ರೇಷ್ಠವಾದ ದಾಸತ್ವದಲಿ ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7
--------------
ಅಂಬಾಬಾಯಿ