ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ನಿಗಮವಿನುತ ಜಗವ ಭರಿತಬಗೆದು ಸಲಹೈ ವೆಂಕಟೇಶ ಪಶ್ರೀನಿವಾಸ ದೀನಪೋಷಧ್ಯಾನದಾಯಕ ವೆಂಕಟೇಶಮಾನದಿಂಪೊರೆಜ್ಞಾನಪಾಲಿಸಿನೀನೆಗತ್ಯನಗೆ ವೆಂಕಟೇಶ 1ಕಮಲನಾಭ ಕಮಲವದನಕಮಲಜಪಿತ ವೆಂಕಟೇಶಕಮಲಪಾಣಿ ಕಮಲನೇತ್ರಅಮಿತಮಹಿಮ ವೆಂಕಟೇಶ 2ಹೇಸಿಭವನ ವಾಸನ್ಹಿಂಗಿಸುವಾಸುದೇವವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 3ಕುಂದುನಿಂದೆ ದಂದುಗಂಗಳಬಂಧ ತಪ್ಪಿಸು ವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ 4ಸತ್ಯ ಸನ್ಮಾಗ್ರ್ಯಕ್ತನೆನಿಸೆನ್ನಮೃತ್ಯು ಸಂಹರ ವೆಂಕಟೇಶನಿತ್ಯನಿಮ್ಮಡಿಭಕ್ತನೆನಿಸೆನ್ನಕರ್ತುಶ್ರೀರಾಮ ವೆಂಕಟೇಶ5
--------------
ರಾಮದಾಸರು
ಶ್ರೀರಮಾಧವಾಶ್ರೀತಜನಪಾಲಿತಮಾರಕೋಟಿರೂಪ ವಾರಿಧಿಶಯನಮುರಾರಿ ಕೇಶವ ಶ್ರೀಮ-ನ್ನಾರಾಯಣ ನೀರಜದಳಲೋಚನ ಪ.ಮಾನುಷತ್ವವಾಂತ ಸಮಯದಿಹೀನ ಭೋಗದ ಚಿಂತೆ ನಾನುನೀನೆಂಬಾಭಿಮಾನದಿ ಮನಸು ನಿ-ಧಾನವಿಲ್ಲದೆ ಅನುಮಾನದಿಂದಿಹುದೈಏನು ಕಾರಣ ಹೃದಯನಳಿದೊಳುನೀನೆ ನೆಲಸಿಕೊಂಡೀ ನರಯೋನಿಗೆನೀನೆ ಬರಿಸಿಯವಮಾನ ಬಡಿಸುವದುಊನವಲ್ಲವೆ ಪದದಾಣೆ ಸತ್ಯವಿದು 1ಬಾಲಕತನದೊಳಗೆ ಕಾವ್ಯದಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನಬಾಲಭೂಷಿತಂಗಳ ಕೇಳೈಶ್ರೀಲಕ್ಷ್ಮೀಲೋಲ ವೆಂಕಟರಾಯಕಾಲಕಾಲಪ್ರಿಯ ಪಾಲಿಸೊಲಿದು ಕರು-ಣಾಲವಾಲ ನತಪಾಲಶೀಲ ಮುನಿಜಾಲವಂದ್ಯ ವನಮಾಲದಾರಿ ಜಗಮೂಲಸ್ವರೂಪ ವಿಶಾಲ ಗುಣಾರ್ಣವ 2ಹಿಂದಾದುದನರಿಯೆ ಇದರಿಂಮುಂದಾಗುವುದು ತಿಳಿಯೆ ಹಿಂದುಮುಂದಿಲ್ಲದೆ ಬಂಧನದೊಳು ಬಲುನೊಂದೆನೈ ನಿನಗಿದು ಚಂದವೆ ಶ್ರೀಹರಿತಂದೆ ತಾಯಿ ಬಂದು ಬಾಂಧವ ಬಳಗ ನೀನೆಂದು ನಿನ್ನಯ ಪದದ್ವಂದ್ವವ ಭಜಿಪಾನಂದಸುಜ್ಞಾನದಿಂದೆಂದಿಗೂ ಸುಖದಿಂದಿರುವಂದದಿ ತಂದೆ ನೀ ಪಾಲಿಸು 3ಧಾರಿಣಿಗಧಿಕವಾದ ಮೆರೆವ ಕುಮಾರಧಾರೆಯ ತಟದ ಚಾರುನೇತ್ರಾವತಿತೀರ ಪಶ್ಚಿಮ ಭಾಗ ಸಾರಿತೋರುವ ವಟಪುರದೊಳು ನೆಲಸಿಹವೀರ ವೆಂಕಟಪತಿವಾರಿಜನಾಭಖ-ರಾರಿ ತ್ರಿದಶಗಣವಾರವಂದ್ಯ ಭಾ-ಗೀರಥೀಪಿತ ದುರಿತಾರಿ ದೈತ್ಯಸಂ-ಹಾರಿ ಶ್ರೀಲಕ್ಷ್ಮೀನಾರಾಯಣಹರಿ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ