ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ಯಾಕೆ ಭವಬಾಧೆ ಇವಗೆ ಪನ್ನಂಗಶಯನನಡಿ ಚೆನ್ನಾಗಿ ಭಜಿಪವಗೆ ಪ ದುರಿತ ದುರ್ಗುಣಗಳನು ತರಿದೊಟ್ಟಿ ನ ಶ್ವರದ ಸಿರಿಯನಾಪೇಕ್ಷಿಸಿದೆ ನಿರುತ ಮಾನಸದಿ ಪರಕೆ ಪರತರವೆನಿಪ ಹರಿಯಂಘ್ರಿ ಎಡೆಬಿಡದೆ ಸ್ಮರಿಸುತ ಮನದೊಳಗೆ ಹರುಷಬರುವವಗೆ 1 ಹೀನಸಂಸಾರದ ನಾನಾ ಸಂಪದವೆಲ್ಲ ಶ್ವಾನನ ಕನಸಿನಂತೇನಿಲ್ಲವೆನುತ ಜ್ಞಾನದೊಳಳವಟ್ಟು ಜಾನಕೀಶನ ಧ್ಯಾನ ಮಾನಸದಿ ಒಲಿಸಿಕೊಂಡಾನಂದಿಸುವವಗೆ 2 ಹೇಸಿಯ ಪ್ರಪಂಚದ್ವಾಸನವನಳುಕಿಸಿ ದಾಸಜನ ಸಂಪದವೆ ಶಾಶ್ವತವೆನುತ ಶ್ರೀಶ ಶ್ರೀರಾಮನ ಸಾಸರನಾಮಗಳ ಧ್ಯಾಸದ್ಹೊಗಳುತ ಸಂತೋಷದಿರುವವಗೆ 3
--------------
ರಾಮದಾಸರು
ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ ಬೇಡಿದಮಣಿ ನೂರುಜನುಮ ಸಾಕಹುದುಂಟೆ ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1 ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ ಮುಂದೆ ನಾನುಣಲೇನು ಬೇಡವಯ್ಯ ಸಂದಿರ್ಪುವೈ ಸಾಲಸೋಲಂಗಳೇನಯ್ಯ ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್