ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ಭಜನೆಯೊಳಿರುವದೆ ಜನ್ಮಕೆ ಯೋಗ್ಯ ಪ ಭಜನೆಯಿಂದ ಪೂಜಿಸುತಾನಂದದಿ 1 ಸ್ತೋತ್ರಗೈದು ಹರಿ ಕೀರ್ತನೆಯಿಂದಲಿ 2 ಹಾದಿ ಬಿಟ್ಟು ಗುರು ಬೋಧೆಯ ಮನನದಿ 3 ಸತಿ ನಾಥನೆ ಪತಿತ ಪಾವನನೆಂದೆಣಿಸುತ 4 ಯೋಗಾಧೀಶ ಸದಾನಂದನಾಗಲು 5
--------------
ಸದಾನಂದರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು