ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಳುವೈ ನಿಂನ ಭಜನೆಯೊಂದೇ ಸಾಕು ಭರದಲಿ ಪಾಪಿಯ ಶುದ್ಧ ಮಾಡಲಿಲೇ ಪ ಅಜಮಿಳ ಜನ್ಮದಿ ಘೋರ ಪಾಪವ ಗೈದು ಭಜನೆ ಮಾಡಲು ತನುನೀಗು ಕಾಲದಲೀ ಭಜಕರ ಲೋಲನೆ ಹೀನನಿಗೊಲಿದು ನೀ ಕುಜನನ ಪರೆದು ಮೋಕ್ಷವನಿತ್ತೆ ಹರಿಯೇ1 ದುರುಳ ವಾಲ್ಮೀಕನು ಹೀನ ಕೃತ್ಯವಗೈದು ಸುರಮುನಿಯಾಜÉ್ಞಯಿಂ ನಾಮವಭಜಿಸೇ ದುರಳನ ಸರಸದ ಭಕ್ತಿಗೆ ವಲಿಯುತ ಪರಮ ಙÁ್ಞನವನು ನೀ ನಿತ್ತೆ ಶ್ರೀಹರಿಯೆ 2 ತರಳ ದಾಸರುಕೂಡಿ ಹರಿ ನಿಂನ ಸ್ತುತಿಸಲು ನಿರುತ ಭಕ್ತರಿಗೆ ನೀನೊಲಿದೆ ಶ್ರೀಕಾಂತಾ ಪರಮ ಆದರದಿಂದ ಹರಿಯಂನ ಮನವನ್ನು ಪರಿ ಶುದ್ಧಮಾಡಿ ದೀನನ ಸೇರೋ ಹರಿಯೇ 3 ರಂಗನ ಮಹಿಮೆಯ ನುಡಿಯಲಾರೆನು ನಾನು ಅಂಗಜ ಪಿತನಾದ ದಶರೂಪಧರನ ನಿತ್ಯ ದೂರ್ವಾಪುರದಿನಿತ್ತುಮಂಗಳ ಪದವೀವ ಚೆನ್ನಕೇಶವನೆ 4
--------------
ಕರ್ಕಿ ಕೇಶವದಾಸ
ಭಜನೆಯೊಂದೇ ಸಾಲದೇ ರಂಗಯ್ಯನ ಭಜನೆಯೊಂದೇ ಸಾಲದೇ ಪ ಅನುದಿನ ಸ್ಮರಿಸಲು ಭಜಕರ ದುರಿತವ ತರಿಯುವ ಪರಿಯ ಅ.ಪ. ಹಿಂದೆ ನೋಡಜಮಿಳ ತರಳ ಪ್ರಲ್ಹಾದರ ಚಂದದಿ ಮೆರೆದ ಗೋಪಾಲ ಬಾಲಕರ ವೃಂದಾವನದೊಳಿದ್ದ ಗೋಪಸೇವಕರ 1 ಕೋಮಲೆ ದ್ರೌಪದಿ ಸಭೆಯೊಳು ಸ್ಮರಿಸಲು ಭಾಮೆಗಕ್ಷಯವಿತ್ತ ಕ್ರೂರ ರಕ್ಷಕನ ಪ್ರೇಮದಿ ಅಹÀಲ್ಯೇ ಶಿಲೆಯೊಳು ಭಜಿಸಲು ಸ್ವಾಮಿ ತಾನೊಲಿದು ಮುಕ್ತಿಯ ಕೊಟ್ಟ ಹರಿಯ 2 ದಶರಥನಲಿ ಬಂದು ದಶಕಂಠನನು ಕೊಂದು ವಸುಮತಿಯನು ಪೊರೆದ ಶ್ರೀ ಹರಿಯ ಪಶÀುಪತಿ ಸಖನಾದ ಪನ್ನಗಶಯನನಅಸುರರ ತರಿದ ಶ್ರೀ ಚನ್ನಕೇಶವನ 3
--------------
ಕರ್ಕಿ ಕೇಶವದಾಸ