ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭವಿಸುವುದೆನ್ನದೇ [ಜೀವ] ನೀನಿತ್ತುದ ಪ ಅನುಭವಿಸುವುದೆನ್ನ ದಿನಚರಿ ಕರ್ಮವೋ ನೆನೆವುದ ಪಡೆವುದು ಕನಸೋ ರಂಗಯ್ಯ ಅ.ಪ ಮನದ ವೇಗವ ನಿಲಿಸಲಾರೆನು ಮನದ ಬಯಕೆಯ ಪಡೆಯಲಾರೆನು ಮನವ ನಿನ್ನಲಿ ನಿಲಿಸಲಾರೆನು ಮನದಿ ನೀನಿರೆ ಸಕಲ ಸೌಖ್ಯವು 1 ಕಷ್ಟನಷ್ಟ ವಿಶಿಷ್ಟವು ನಿ ನ್ನಿಷ್ಟವೆಂಬುದ ಬಲ್ಲೆನಾದರು ಕಷ್ಟಕಳುವೆನು ಭ್ರಷ್ಟದೋರುವೆ ದೃಷ್ಟಿ ನಿನ್ನದು ದೊರಕುವವರೆಗೂ2 ನಿನ್ನ ಮೂರ್ತಿಯು ಮನದಿ ನೆಲೆಸಲಿ ನಿನ್ನ ಭಜನೆಯು ರಸನೆಗಾಗಲಿ ನಿನ್ನ ಕೃಪೆಯವಲೋಕಗೊಲಿಯಲಿ ಚೆನ್ನ ಮಾಂಗಿರಿರಂಗನೊಲಿಯಲಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದಿನ ದಿನವೆ ಸುದಿನ | ಗೋ ವಿಂದನ ಸ್ಮರಣೆಯ ಗೈದುದರಿಂದ ಪ ನಾಳೆ ಏಕಾದಶಿ ಹರಿದಿನವೆನಲಾ ವೇಳೆಗೆ ವುಳಿವೆವೋ ಅಳಿವೆವೋ ಅರಿಯೆವು ತಾಳವಾದ್ಯತಂಬೂರಿಗಳಿಲ್ಲವೆಂ ದಾಲೋಚಿಸೆ ಹರಿಭಜನೆಯು ದುರ್ಲಭ 1 ಗೀತವಿದ್ಯಾಕೋವಿದರಿಹರೆನ್ನುತ ಯಾತರ ದಾಸರ ಪದಗಳು ಎನುತಲಿ ಮಾತನಾಡಿ ಕಾಲವ ಕಳೆದೊಡೆ ಇ ನ್ನಿತರ ಕಾಲವು ದೊರಕುವುದಿಲ್ಲ2 ದಾಸರ ಪದದೊಳಗಿರುವ ಮಹತ್ವವು ಲೇಶವಿಲ್ಲ ಸಂಗೀತ ಸ್ವರದೊಳು ಭಾಸುರಾಂಗ ಮಾಂಗಿರಿಪತಿ ಸಲಹುವ ದಾಸರಪದ ತಾಳಗಳಿಗೊಲಿವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು ಎನಗಾವುದಾಧೀನವಿನಿತಿಲ್ಲ ದೇವ ಪ ಜನಕ ನಾನು ಕ್ಷಣಕೆ ಕ್ಷಣಕೆ ಉಣವುದೆಲ್ಲವು ನಿನ್ನ ಪ್ರಸಾದ ಕನಸುಮನಸಿನೊಳಗೆ ನಾನು ಮಣಿವುದೆಲ್ಲವು ನಿನ್ನ ಚರಣ ಅ.ಪ ಮಡದಿಯಿಂ ಮಮತದಿ ಸಡಗರದಾಡ್ಯಾಡಿ ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ ನುಡಿವುದೆಲ್ಲ ನಿನ್ನ ಮಂತ್ರವು ಕೊಡುವುದೆಲ್ಲವು ನಿನ್ನ ಅಧಿಕಾರ ನಡೆವುದೆಲ್ಲವು ನಾ ನಿನ್ನ ಯಾತ್ರೆಯು ಇಡುವತೊಡುವುದು ನಿನ್ನ ಬಿರುದು 1 ಗಳಿಸುವುದೆಲ್ಲ ನಾ ಚಲಿಸದ ತವಪಾದ ನಳಿನದಾಸರಸಂಗೀ ಇಳೆಯೊಳು ಪ್ರಭುವೇ ಬಳಸುವುದೆಲ್ಲ ನಾ ಅಳಕದ ತವಚರಿತ ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ ಮಲಗುವುದೇ ನಿಮ್ಮ ಧ್ಯಾನ ಆನಂದ ನಲಿವುದಖಿಲ ನಿಮ್ಮ ಭಜನೆಯು ಅಳಿವುದೆಲ್ಲನುಭವದ ಗುಣಗಳು ತಿಳಿವುದೆಲ್ಲವು ನಿಮ್ಮ ಮಹಿಮೆ 2 ಅಮಿತ ತವಪ್ರೇಮವು ಗಮಿಸುವುದೆಲ್ಲ ನಾ ಸುಮನರ ಸಭೆಯು ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು ನೇಮದಿಂ ನಾ ಬರುವುದೆಲ್ಲ ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು ಕ್ಷೇಮನಿಧಿ ಶ್ರೀರಾಮ ನಿಮ್ಮೊಳು ಕಾಮಿಸುವುದೇ ನಾ ಮುಕ್ತಿಪದವು 3
--------------
ರಾಮದಾಸರು
ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾರ್ವತೀ ಪತಿಪಾಹಿ ಹರಹರ ಪಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||ವಿಜಯನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||ಮಜ ಭಾಪುರೆಅಂಬುಜಸುತ ನಂದನ |ಗಜಚರ್ಮಾಂಬರನೆ | ಹರಹರ 1ಜಾತವೇದಸಶಶಿತರಣಿನಯನ |ಮಾತರಿಶ್ವತನಯ ||ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ 2ಕ್ಷಿತಿಧರ ಶರ ಮನ್ಮಥಪುರಹರಣ| ಪ್ರಮಥಾಧಿಪ ಹರಿಣಾಂಕ ||ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ3ಸುರಸೇವಿತ ಪದ ಅರವಿಂದಅನಘ|ಮುರರಿಪುಸುಖಕಪರ್ದಿ||ಚರಣವ ನಂಬಿದವರ ಭಯವಾರಿದ |ಮರುತಕುಶನಂದನನೆ || ಹರಹರ4ಖಟವಪಾಣಿಖಳಆಟವಿವಹ್ನಿಧೂ |ರ್ಜಟ ಹರ ಪ್ರಾಣೇಶ ||ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ 5
--------------
ಪ್ರಾಣೇಶದಾಸರು