ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ 1 ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು 2 ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ 3 ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು 4 ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು 5
--------------
ವೆಂಕಟೇಶವಿಟ್ಠಲ
ರಂಗನಾಥ ಪಾಲಿಸೆನ್ನ ಮಂಗಳಾಂಗ ಶ್ರೀಶ ಬೇಗ ಪ ನಿನ್ನ ಭಜನೆಯನ್ನು ಗೈವೆ ಪನ್ನಗಾರಿವಾಹ ಹರೆ ಸ್ವರ್ಣವಸನ ಭೂಷಿತಾಂಗ ಸನ್ನುತಾಂಗ ಧೀರಶೂರ 1 ದುಷ್ಟರನ್ನು ಶಿಕ್ಷಿಸುತ್ತ ಸೃಷ್ಟಿಗೊಡೆಯನೆನಿಸಿ ನೀನು ಇಷ್ಟ ವರಗಳನ್ನು ಕೊಟ್ಟು ಶ್ರೇಷ್ಟನೆನಿಸು ನಂಬಿದೆನು 2 ಕಾಮಿತಾರ್ಥ ಫಲಗಳೀವ ಕಾಮ ಜನಕ ದೇವನೆ ಧೇನುನಗರದಲ್ಲಿ ನೆಲಸಿ ನೇಮದಿಂದ ಪೂಜೆಗೊಂಬೆ 3
--------------
ಬೇಟೆರಾಯ ದೀಕ್ಷಿತರು
ರಾಮ ನಿನ್ನ ಭಜನೆಗೈಯುವೆ ಕಾಮಾರಿಮಿತ್ರ ರಾಮ ನಿನ್ನ ಭಜನೆಗೈಯುವೆ ಪ ರಾಮ ನಿನ್ನ ಭಜನೆಯನ್ನು ಪ್ರೇಮದಿಂದ ಮಾಳ್ಪ ಜನಕೆ ಕಾಮಿತಾರ್ಥವಿತ್ತು ಸುಖವ ಪ್ರೇಮದಿಂದಕರುಣಿಸುವವನೆ 1 ಜಾನಕಿಯರಮಣ ನಿನ್ನ ಧ್ಯಾನಮಾಳ್ಪೆನಯ್ಯ ಸತತ ಸಾನುರಾಗದಿಂದ ಸಲಹು ಭಾನುವಂಶ ಜಲಧಿಚಂದ್ರ 2 ಇಂದಿರೇಶ ನಿನ್ನ ಪಾದವಿಂದು ಪೂಜೆಗೈವೆ ನಾನು ತಂದೆ ಸಲಹೊ ರಾಗದಿಂದ ಸುಂದರಾಂಗ ಸುಪ್ರಸನ್ನ 3 ಹಾರ ಕುಂಡಲಾದಿಭೂಷ ಚಾರುಮಕುಟಧರಸುಶೋಭ ಸಾರಸಾಕ್ಷ ರವಿಜವರದ ತೋರೋ ಮುಖವ ರಾಘವೇಂದ್ರ 4 ರಾವಣಾದಿ ಸಕಲದನುಜ ಜೀವಹರಣ ರಘುಕುಲೇಶ ಪಾವಮಾನಿ ಪೂಜಿತಾಂಘ್ರಿ ಧೇನುಪುರನಿವಾಸ ದೇವ 5
--------------
ಬೇಟೆರಾಯ ದೀಕ್ಷಿತರು
ರುದ್ರದೇವರು ಭಜನೆ ಮಾಡೆಲೊ ಮನವೆ ಭಜನೆ ಮಾಡೆಲೊ ಪ ಭಜನೆಯನ್ನು ಮಾಡಿ ಸುಖಿಸೊಭುಜಗಭೂಷಣ ಶಿವನೆ ಅ.ಪ. ನಾನೆ ನಾನೆ ನಾನು ಎಂಬ ಶ್ವಾನಬುದ್ಧಿಯನ್ನು ಬಿಟ್ಟುನೀನೆ ನೀನೆ ಗತಿಯೆಂದು ಸಾನುರಾಗದಿಂದ ಮೃಡನ 1 ಕಾಕುಜನರ ವಾಸ ಬಿಟ್ಟು ಏಕಭಾವದಿಂದ ಕುಳಿತುಸಾಕು ಸಾಕೆನಿಸದಂತೆ ನಾಲ್ಕು ಮೊಗದವನ ಸುತನ 2 ತಂದೆವರದವಿಠಲನು ತಂದೆ ಜಗಕೆಲ್ಲವೆಂದುಛಂದಛಂದಾದಿ ಭಜಿಪ ಇಂದುಶೇಖರ ಭವನ 3
--------------
ಸಿರಿಗುರುತಂದೆವರದವಿಠಲರು