ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧನವು ಮತ್ತೇನಾಗಬೇಕು ನಿನಗೇ ಪ ಮಾಧವನ ನಾಮವು ಮನದೊಳಿದ್ದರೆ ಸಾಲದೇ ಅ.ಪ. ಗೋಕೋಟಿ ದಾನವು ಗೋವಿಂದನ ಸ್ಮರಣೆಯ ತಾಕಲಾರದಿದಕೆ ಸಂದೇಹವೇ ಇಲ್ಲ ಸಾಕಲ್ಯದಿ ಮಾಳ್ಪ ಸಕಲ ದೇವತಾರ್ಚನೆಯು ಪಾದ ಭಜನೆಗೆಣೆಯು ಅಲ್ಲ 1 ಸ್ನಾನ ಸಂಧ್ಯಾವಂದನ ಜಪತಪಾದಿಗಳು ದಾನವೇ ಮೊದಲಾದ ನೇಮ ನಿಷ್ಟೆಗಳು ಆನುಪೂರ್ವಕ ಮಾಳ್ಪ ಸಕಲ ಕರ್ಮಗಳೆಲ್ಲ ಶ್ರೀನಿವಾಸನ ನಾಮಸ್ಮರಣೆಗೆ ಎಣೆಯು ಅಲ್ಲ 2 ರಾಸಿ ವಿದ್ಯ ವೇದಾಧ್ಯಯನ ಪಾಠಗಳು ಬೇಸರಿಲ್ಲದೆ ಪಠಿಪ ಮಂತ್ರ ತಂತ್ರಗಳೆಲ್ಲ ಈ ಸಮಸ್ತ ಭುವನಗಳೊಡೆಯನಾದ ಶ್ರೀ ರಂ ಗೇಶವಿಠಲನ ನಾಮದಲ್ಲಡಗಿರುವುದಲ್ಲ 3
--------------
ರಂಗೇಶವಿಠಲದಾಸರು