ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೈತ್ರದುತ್ಸವ ಗೀತೆ ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ ಕಟ್ಟಿ[ದರು] ಕಂಕಣವನು ಸೃಷ್ಟಿಗೀಶ್ವರಗೆ ಪ. ಮೊದಲು ದಿವÀಸದಿ ಧ್ವಜಪಟವನೇರಿಸಿ ಸುರರು 1 ಯಾಗಶಾಲೆಯ ಪೊಕ್ಕು ಯಾತ್ರದಾನವ ಬೇಡಿ ಸೂತ್ರ ಧರಿಸಿದರು 2 ಸರ್ಪಮೊದಲಾದ ಅಲ್ಲಿರ್ಪ ವಾಹನವೇರಿ ಕಂ ದರ್ಪನಪಿತ ಬಂದ ಚಮತ್ಕಾರದಿಂದ 3 ಬೆಂಡಿನ ಚಪ್ಪರ ಬೆಳ್ಳಿಕುದುರೆಯನೇರಿ ಪುಂಡರೀಕಾಕ್ಷ 4 ರೇವತಿ ನಕ್ಷತ್ರದಲಿ ಏರಿ ರಥವನ್ನು [ತಾ] ವೈಯ್ಯಾರದಿಂದಲೆ ಬಂದ ವಾರಿಜನಾಭ 5 ಗೋವಿಂದ ಗೋವಿಂದಯೆಂದು ಪ್ರಜೆಗಳು [ತಾವಾ]ನಂದದಿಂದ ನೋಡಿ ಪಾಡುತ್ತ 6 ಗೋವುಗಾಣಿಕೆಯನ್ನು ಗೋಪಾಲರು ತಂದು ನೀ ಲಾವರ್ಣನಿಗಿತ್ತರು ನೇಮದಿಂ ಪೂಜೆಯ 7 ಧ್ವಜಮಂಟಪದಲ್ಲಿ ಹರಿಭಜನೆಗಳ ಮಾಡು[ತ್ತಿರೆ] ಭುಜಗಶಯನನು ವರವಿತ್ತು ಕಳುಹಿದನು 8 ಸಪ್ತಾವರಣವ ಸುತ್ತಿ ತೀರ್ಥವನಿತ್ತು ಅರ್ಥಿಯಿಂದಲೆ ಬಂದ ಭಕ್ತವತ್ಸಲನು 9 ಬೊಂಬೆ ಅಂದಣವೇರಿ[ದ] ಅಂಬುಜನಾಭ ಕುಂಭಿಣಿಗಧಿಕವೆಂತೆಂಬ ಶ್ರೀರಂಗ 10 ಚಿತ್ರರಥ[ದ] ವಿಚಿತ್ರಮೂರುತಿಯ ನೋಡಿ ಪ ವಿತ್ರರಾದರು ಧಾತ್ರಿ[ಯ] ಉತ್ತಮರೆಲ್ಲ 11 ಬಂದ ಪ್ರಜೆಗಳು ಎಲ್ಲ ಆನಂದದಿ ಪೋಗೆ ಬಂದು ಆಸ್ಥಾನದಿ ನಿಂದ ಶ್ರೀರಂಗ 12 ಸೃಷ್ಟಿಯಲಿ ಪುಟ್ಟಿದ ದುಷ್ಟಪ್ರಾಣಿಗಳ [ನೆಲ್ಲ] ಶ್ರೇಷ್ಠ ಮಾಡಲಿ [ನಮ್ಮ] ವೆಂಕಟರಂಗ 13
--------------
ಯದುಗಿರಿಯಮ್ಮ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಭುವನ ತ್ರಾಣ ಸದ್ಭವ ಪ್ರವೀಣ ಪ ಶ್ಲೋಕ : ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ | ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ || ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ1 ಪದ: ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ | ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ | ಮಾಡಿದೆನಯ್ಯಾ | ಮುಂದೇನೋ ಉಪಾಯ 2 ಶ್ಲೋಕ: ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು | ಜೀವಾತ್ಮಗೆ ಪೇಳ್ವಿರೊ || ಶ್ರೀ ವತ್ಯಾಂಕÀನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ | ಪದ: ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ | ನಾ ಭ್ರಮಿಸಿದೆ ಬುದ್ಧಿಸಾಲದೇ || ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ | ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ | ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ 2 ಶ್ಲೋಕ : ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ | ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು || ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ | ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ 3 ಪದ: ವನಧಿ ಲಂಕಾಪುರವ ನೈದಿದೀ|| ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ | ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ | ಆರ್ಭಟಿಸಿ | ರಕ್ಕಸರ ಸೀಳಿದಿ 3 ಶ್ಲೋಕ : ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ | ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ || ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ 4 ಪದ: ಯೋಗ್ಯವ | ಬದಲು ಕಾಣದೆ ದೇವಾ ಸದ್ಭಾವ | ನೋಡಿ | ಗಂಧಮಾದನವ | ಭವ | ಮೊರೆ ಐದಿವರವ 4 ಶ್ಲೋಕ : ಸಂತುಷ್ಟನಾಗಿ ಸ್ವಯಂ | ನಿಂತ್ಹಾಂಗೆ ನೀ ಹುಟ್ಟಿದಿ | ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ | ಪದ: ಭೀಮಾಸೇನನೆಂಬುವರು | ಧೃತರಾಷ್ಟ್ರನ್ನ ಸುತರು | ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು || ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು | ಸುರತರು | ಮೋಕ್ಷ ಮಾರ್ಗವ ತೋರು 5 ಶ್ಲೋಕ : ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ | ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ | ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ | ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ 6 ಪದ : ದ್ರುಪದಜೆ ಎನಿಸಿದಳು | ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು | ಧೀರನೆನವೆ ಹೃದಯದೊಳು ಹಗ ಲಿರುಳು | ಭಜನೆಗಳಿಪ್ಪನಂಘ್ರಿಗಳು || 6 ಶ್ಲೋಕ : ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ | ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ || ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ | ಪದ : ಸೂನು | ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು | ವರ ಪಡೆದನು | ಭಾವೀ ಶಿಷ್ಯ ನಿನ್ನನು | ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು | ತುರ್ಯಾಶ್ರಮವನು ಯಿನ್ನು 7 ಶ್ಲೋಕ : ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ | ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ || ಗರ್ವೋಚಿÀಸಲ್ಲೋಕಕೆ | ಚೂಡಾಮಣಿ ಪದ: ರಜತಪೀಠ ಪುರದಲ್ಲಿ | ನೀ ಕಲಿಯುಗದಲ್ಲಿ | ಇರುವಿ ಮತ್ತೊಂದರಲ್ಲಿ | ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ8
--------------
ವಿಜಯದಾಸ
ಶ್ರೀ ಹಯಗ್ರೀವ ವಿಠಲ | ಮೋಹ ಕಳೆದಿವನಾ ಪ ಸಾಹಸಿಗಗಾಭೀಷ್ಟ | ದೋಹನನು ಆಗೋ ಅ.ಪ. ಮಾಣವಕ ಭಕ್ತಿಯಲಿ | ಮಾನ್ಯರನು ಸೇವಿಸುವಜ್ಞಾನವಂತನ ಮಾಡಿ | ಪ್ರಾಜ್ಞನೆಂದೆನಿಸೋ ಜ್ಞಾನ ನಿಧಿ ನಿನ್ನೊಲಿಮೆ | ಕಾಣದಲೆ ಪರಿತಪಿಸಿಜ್ಞಾನದಂಕುರಕಾಗಿ | ಬಿನೈಸುತಿಹೆನೋ 1 ಸುಜನ ಸಂಗದಿ ಹರಿಯ | ಭಜನೆಯೊದಗಲಿ ಇವಗೆಋಜು ವಾದಿರಾಜರಲಿ | ನಿಜ ಭಕ್ತಿ ಬರಲೀಗಜ ವರದನಂಘ್ರಿಗಳ | ನಿಜ ಮನದಿ ಕಾಂಬಂಥಯಜನ ಭಜನೆಗಳೊದಗಿ | ಪ್ರಜೆಗಳಲಿ ಮೆರೆಸೋ 2 ಭೃತ್ಯ ವತ್ಸಲನೇ 3 ನಾನು ನನ್ನದು ಎಂಬ | ಹೀನ ಭಾವವ ಕಳೆದುಏನೇನು ತಾ ಮಾಳ್ಪ | ಮಾನಸಾದಿಗಳಾಪ್ರಾಣಾಂತರಾತ್ಮಕಗೆ | ದಾನ ಮಾಳ್ಪಂತೆಸಗಿಜ್ಞಾನಾಯು ರೂಪಕನ | ಮಾನ್ಯಮತ ತಿಳಿಸೋ 4 ಕೈವಲ್ಯ ಪ್ರದನೇತಾವಕನ ಸಲಹೆಂಬ | ಆವ ಭಿನ್ನಪ ಸಲಿಸೆಓವಿ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು